ಬೆಂಗಳೂರು: ಸತತ ಎರಡನೇ ಬಾರಿಗೆ ಐ-ಲೀಗ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವತ್ತ ತನ್ನ ಗಮನ ಹರಿಸುವ ಹಾಲಿ ಚ್ಯಾಂಪಿಯನ್ ಬೆಂಗಳೂರು ಎಫ್ ಸಿ ಈಗ ತನ್ನ ಮುಂದಿನ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ಸವಾಲು ಸ್ವೀಕರಿಸಲು ಸಜ್ಜಾಗಿದೆ.
ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆಯುವತ್ತ ಹೆಜ್ಜೆ ಹಾಕಲು ಯೋಜನೆ ರೂಪಿಸಿದೆ. ಸೋಲಿನ ಆರಂಭ ಪಡೆದು ಹಿನ್ನಡೆಯಲ್ಲಿದ್ದ ಬಿಎಫ್ ಸಿ ಈಗ ಆಡಿರುವ 15 ಪಂದ್ಯಗಳಲ್ಲಿ 8 ರಲ್ಲಿ ಜಯ, 4 ರಲ್ಲಿ ಡ್ರಾ ಹಾಗೂ 3 ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಮೂಲಕ 28 ಅಂಕಗಳನ್ನು ಪಡೆದುಕೊಂಡಿದೆ.
ಇನ್ನು ಈಸ್ಟ್ ಬೆಂಗಾಲ್ ತಂಡದ ಪರ ಪಂದ್ಯ.ಗಳಲ್ಲಿ 7 ರಲ್ಲಿ 5 ರಲ್ಲಿ ಡ್ರಾ, ಹಾಗೂ 3 ರಲ್ಲಿ ಸೋಲನುಭವಿಸಿದೆ. ಈ ಮೂಲಕ 26 ಅಂಕವನ್ನು ಪಡೆದಿದೆ. ಹಾಗಾಗಿ ಈ ಎರಡು ತಂಡಗಳು ಬಲಿಷ್ಠವಾಗಿದ್ದು, ರೋಚಕ ಹಣಾಹಣಿಯ ನಿರೀಕ್ಷೆಗಳಿವೆ.
ಇತ್ತೇಚೆಗೆ ಎಫ್ ಸಿ ಕಪ್ಪ ಟೂರ್ನಿಯಲ್ಲಿ ಮಾಜಿಯ ಎಫ್ ಸಿ ವಿರುದ್ಧ ಗೆಲುವು ದಾಖಲಿಸುವುದರೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಅತ್ಯುತ್ತಮ ಲಯ ಕಂಡುಕೊಂಡಿರುವ ಸುನೀಲ್ ನೇತೃತ್ವದ ಬೆಂಗಳೂರು ಎಫ್ ಸಿ, ಐ ಲೀಗ್ ನಲ್ಲೂ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸುವತ್ತ ಗಮನ ಹರಿಸಿದೆ.
ಆ್ಯಶ್ಲೆ ವೆಸ್ಟ್ ವುಡ್ ಮಾರ್ಗದರ್ಶನದಲ್ಲಿ ಪಳಗಿರುವ ಹಾಲಿ ಚಾಂಪಿಯನ್ನರು ಈಗ ಅತ್ಯುತ್ತಮ ಲಯದಲ್ಲಿದ್ದಾರೆ. ಹಿರಿಯ ಆಟಗಾರರಾದ ಸುನೀಲ್ ಛೆಟ್ರಿ, ಸೀನ್ ರೂನಿ, ರಾಬಿನ್ ಸಿಂಗ್ ಜೊತೆಗೆ ಯುವ ಆಟಗಾರರಾದ ಯುಗೆನ್ಸನ್ ಲಿಂಗ್ಡೋ. ಎಸ್. ಶಂಕರ್, ಸಿ.ಕೆ ವಿನೀತ್, ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇನ್ನು ರಕ್ಷಣಾತ್ಮಕ ವಿಭಾಗದಲ್ಲಿ ಜಾನ್ ಜಾನ್ಸನ್, ಜೋಷ್ ವಾಲ್ಕರ್ ಅತ್ಯುತ್ತಮ ಆಟಗಾರರಾಗಿದ್ದಾರೆ.
ಈಸ್ಟ್ ಬೆಂಗಾಲ್ ಪರ ಆರ್. ಮಾರ್ಟಿನ್ಸ್, ಪ್ರಮುಖ ಆಟಗಾರನಾಗಿದ್ದಾನೆ. ಪ್ರಸಕ್ತ ಟೂರ್ನಿಯಲ್ಲಿ 16 ಗೋಲು ದಾಖಲಿಸುವ ಮೂಲಕ ಅತಿ ಹೆಚ್ಚು ಗೋಲು ದಾಖಲಿಸಿರುವ ಆಟಗಾರ ಎಂಬ ಖ್ಯಾತಿ ಗಳಿಸಿದ್ದಾರೆ. ಇವರೊಂದಿಗೆ ಮೆಹತಬ್ ಹೊಸೈನ್ ಚಕ್ರವರ್ತಿ, ಸೊರೆನ್ ಥನಿ, ದೀಪಕ್ ಟರ್ಕೆ ಪ್ರಮುಖ ಆಟಗಾರರಾಗಿದ್ದಾರೆ.