ಚೆನ್ನೈ ಸೂಪರ್ ಕಿಂಗ್ಸ್ 
ಕ್ರೀಡೆ

ಚೆನ್ನೈ ಗೆದ್ದರೆ ಪ್ಲೇ ಆಫ್ ಖಚಿತ

ಎರಡು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ 8 ನೇ ಆವೃತ್ತಿಯ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪ್ಲೇ-ಆಫ್ ಸುತ್ತಿನ ಹೊಸ್ತಿಲಲ್ಲಿ...

ರಾಯಪುರ: ಎರಡು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ 8 ನೇ ಆವೃತ್ತಿಯ ಐಪಿಎಲ್ ಟಿ-20 ಕ್ರಿಕೆಟ್  ಟೂರ್ನಿಯಲ್ಲಿ ಪ್ಲೇ-ಆಫ್  ಸುತ್ತಿನ ಹೊಸ್ತಿಲಲ್ಲಿ ನಿಂತಿದ್ದು, ಇನ್ನೊಂದು ಪಂದ್ಯ ಗೆದ್ದಲ್ಲಿ ಈ ಪ್ರವೇಶ ಖಚಿತಪಡಿಸಿಕೊಳ್ಳಲಿದೆ. ಇದೇ ಕನಸಿನೊಂದಿಗೆ ತನ್ನ ಮುಂದಿನ ಸಮರಕ್ಕೆ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್, ಸಜ್ಜಾಗಿ ನಿಂತಿದೆ.
ರಾಯಪುರದಲ್ಲಿನ ಶಹೀದ್ ವೀರ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ತಂಡಕ್ಕೆ ಡೆಲ್ಲಿ ಡೇರ್‍ಡೆವಿಲ್ಸ್ ತಂಡ ಸವಾಲು ಒಡ್ಡಲಿದೆ. ಡೇರ್‍ಡೆವಿಲ್ಸ್ ಪಾಲಿಗೆ ಪ್ಲೇ-ಆಫ್  ಸುತ್ತು ಪ್ರವೇಶಿಸುವ ಯಾವುದೇ ಅರ್ಹತೆ ಉಳಿದಿಲ್ಲ. ಆಡಿದ 12 ಪಂದ್ಯಗಳಿಂದ 8  ಅಂಕಗಳನ್ನಷ್ಟೇ ಸಂಪಾದಿಸಿರುವ ಜೀನ್ ಪಾಲ್ ಡುಮಿನಿ ನಾಯಕತ್ವದ ಡೆಲ್ಲಿ, ಈಗಾಗಲೇ ಪ್ರಶಸ್ತಿಯ ಪೈಪೋಟಿಯಿಂದ ಹೊರಬಿದ್ದಿದೆ. ಇನ್ನೇನಿದ್ದರೂ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಗೌರವಕ್ಕಾಗಿ ಹೋರಾಟ ನಡೆಸಬೇಕಷ್ಟೇ. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ಆಸೆ ಬಲವಾಗಿದೆ. ಈ ವರಗೆ 12 ಪಂದ್ಯಗಳನ್ನಾಡಿದ್ದು, 8 ಜಯ ಮತ್ತು 4 ಸೋಲುಗಳೊಂದಿಗೆ  16 ಅಂಕ ಕಲೆ ಹಾಕಿದೆ. ಈ ಮೂಲಕ 8 ತಂಡದ ಳ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕುಳಿತಿದೆ. ಡೆಲ್ಲಿ ವಿರುದ್ಧ ಜಯಗಳಿಸಿದರೆ,ಪ್ಲೇ -ಆಫ್ ಸುತ್ತಿನಲ್ಲಿ  ತನ್ನ ಸ್ಥಾನ ಗಟ್ಟಿಗೊಳಿಸಿಕೊಳ್ಳಲಿದೆ. ಕಳೆದ ಮೂರೂ ಪಂದ್ಯಗಳಲ್ಲಿ ಅದ್ಭುತ ಜಯ ದಾಖಲಿಸಿರುವ ಚೆನ್ನೈ, ಇದೇ ಫಲಿತಾಂಶ ಪಡೆಯುವ ಲೆಕ್ಕಾಚಾರದಲ್ಲಿದೆ.ಪಂದ್ಯದಿಂದ ಪಂದ್ಯಕ್ಕೆ ಎಲ್ಲ ವಿಭಾಗಗಳಲ್ಲೂ ಸದೃಢವಾಗಿ ಮೂಡಿ ಬರುತ್ತಿರುವ ಚೆನ್ನೈಗೆ ಸೋಲುಣಿಸುವುದು ಕಷ್ಟದ ಮಾತು. ಪ್ರತಿಯೊಬ್ಬ ಆಟಗಾರ ಅಗತ್ಯಕ್ಕೆ ತಕ್ಕಂತೆ ತನ್ನ ಸಾಮಥ್ರ್ಯ ಪ್ರದರ್ಶಿಸಬಲ್ಲ. ಹಾಗಾಗಿ, ಅಡೆತಡೆಗಳು ಎದುರಾದರೂ,
ಸಮರ್ಥವಾಗಿ ಮೆಟ್ಟಿನಿಂತು ಗೆದ್ದುಬಂದ ಉದಾಹರಣೆಗಳು ಅನೇಕ. ಪ್ರಮುಖವಾಗಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡುವ ಆರಂಭಿಕರಾದ ಬ್ರೆಂಡನ್ ಮೆಕಲಂ ಮತ್ತು ಡ್ವೈನ್ ಸ್ಮಿತ್  ಚೆನ್ನೈ ಪಾಲಿಗೆ ಆಪತ್ಬಾಂದವರು. ಅದರಲ್ಲೂ ನ್ಯೂಜಿಲೆಂಡ್ ಮೂಲದ ಮೆಕಲಂ ಹೆಚ್ಚು ಅಪಾಯಕಾರಿ. ಚೆನ್ನೈನಲ್ಲಿ ನಡೆದಿದ್ದ ರಾಜಸ್ಥಾನ ರಾಯಲ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಮೆಕಲಂ ಅಬ್ಬರಿಸಿದ ರೀತಿ ಎದುರಾಳಿಯನ್ನು ಬೆಚ್ಚಿಬೀಳಿಸಿತ್ತು. ಈ ಪಂದ್ಯದಲ್ಲಿ ತಂಡದ ಇತರೆ ಪ್ರಮುಖ ಬ್ಯಾಟ್ಸ್ಮೆನ್ಗಳು ಕೈ ಕೊಟ್ಟರೂ , ಮೆಕಲಂ ಏಕಾಂಗಿಯಾಗಿ ಸಿಡಿದು ಕೇವಲ 61 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್‍ಗಳ ಸಹಾಯದಿಂದ 81 ರನ್ ಸಿಡಿಸಿ ತಮ್ಮ ಪಡೆಗೆ 157 ರನ್‍ಗಳ ಸ್ಪರ್ಧಾತ್ಮಕ ಮೊತ್ತ ತಂದುಕೊಟ್ಟಿದ್ದರು . ರಾಜಸ್ಥಾನ  ರಾಯಲ್ಸ್ ಎದುರು ಚೆನ್ನೈ 12 ರನ್ಗಳ ಜಯ ದಾಖಲಿಸಿತ್ತು.  ಮಧ್ಯಮ ಕ್ರಮಾಂಕದಲ್ಲಿ ಬರುವ ಸುರೇಶ್ ರೈನಾ, ಫಫ್ ಡು ಪ್ಲೆಸಿಸ್ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಸಾಕಷ್ಟು ಅನುಭವವುಳ್ಳವರಾಗಿದ್ದಾರೆ. ಹಾಗಾಗಿ, ಅಗ್ರಕ್ರಮಾಂಕದ ಈ ಐವರೂ ದಾಂಡಿಗರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪಳಗಿರುವುದರಿಂದ ಅವರ ಅಬ್ಬರಕ್ಕೆ ಕಡಿವಾಣ ಹಾಕಲು ಎದುರಾಳಿ ತಂಡಗಳ ಬೌಲರ್‍ಗಳು ಶತಪ್ರಯತ್ನ ನಡೆಸಬೇಕಾಗುತ್ತದೆ. ಹಾಗೆಯೇ  ಬೌಲಿಂಗ್ ವಿಭಾಗ ಕೂಡ ಅನುಭವಿಗಳಿಂದ ಕೂಡಿದೆ. ಆಶಿಶ್ ನೆಹ್ರಾ, ಮೋಹಿತ್ ಶರ್ಮಾ , ಡ್ವೈನ್ ಬ್ರಾವೊ, ಜಡೇಜಾ ಅವರ ನಿಖರ ದಾಳಿ ದಿಗ್ಗಜ ಬ್ಯಾಟ್ಸ್‍ಮನ್‍ಗಳನ್ನು ಬಂಧಿಸಿಡುತ್ತದೆ. ಬ್ಯಾಟ್ಸ್‍ಮನ್‍ಗಳು ಕೈಕೊಟ್ಟು, ತಂಡ ಅಲ್ಪ ಮೊತ್ತ ಗಳಿಸಿದರೆ, ಅದನ್ನು ಬಲವಾಗಿ ಸಮರ್ಥಿಸಿಕೊಳ್ಳುವ ಶಕ್ತಿ ಬೌಲರ್ ಗಳಿಗಿದೆ.  ಹಾಗಾಗಿ, ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಅಖಾಡದಲ್ಲಿ ಹೆಚ್ಚು ಸಮತೋಲನದಿಂದ ಕೂಡಿರುವ ತಂಡವಾಗಿ  ಕಂಡುಬರುತ್ತದೆ. ಇಂತಹ ಸಮರ್ಥ ಸೇನೆ ಹೊಂದಿರುವ ಚೆನ್ನೈ ವಿರುದ್ಧ ಡೆಲ್ಲಿ ಡೇರ್‍ಡೆವಿಲ್ಸ್ ಜಯಗಳಿಸಬೇಕಾದರೆ, ಶಕ್ತಿಮೀರಿ ಹೋರಾಟ ನಡೆಸಬೇಕಾಗುತ್ತದೆ. ಟೂರ್ನಿಯಲ್ಲಿ ಅಸ್ಥಿರ ಪ್ರದರ್ಶನ ನೀಡುತ್ತಿರುವ ಡುಮಿನಿ ಪಡೆ ಕಳೆದ ನಾಲ್ಕು ಪಂದ್ಯಗಳಲ್ಲಿ ನಿರಂತರ ಸೋಲಿನ ಕಹಿ ಉಂಡಿದೆ. ಈ ಹಿಂದೆ ಮೇ 1ರಂದು ತಮ್ಮ ಕೊನೆಯ ಗೆಲವು ದಾಖಲಿಸಿದ್ದ ಡೆಲ್ಲಿ ಆಟಗಾರರು ಮತ್ತೆ ಜಯಕ್ಕಾಗಿ ಹಾತೊರೆಯುತ್ತಿದ್ದಾರೆ. ಖಿಂಟಾನ್ ಡಿ ಕಾಕ್, ಶ್ರೇಯಸ್ ಅಯ್ಯರ್, ಡುಮಿನಿ, ಯುವರಾಜ್, ಕೇದಾರ್ ಜಾಧವ್, ಸೌರಭ್ ತಿವಾರಿ, ಅಲ್ಬಿ ಮಾರ್ಕೆಲ್‍ರಂತಹ ಪ್ರತಿಭಾನ್ವಿತರ ದಂಡು ತಂಡದಲ್ಲಿದ್ದರು ಸಹ ಯಾರೂ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಅತಿ ಹೆಚ್ಚು ಮೊತ್ತ ನೀಡಿ ಖರೀದಿಸಲಾಗಿದ್ದ ಯುವರಾಜ್‍ರ ದಯನೀಯ ವೈಫಲ್ಯ ತಂಡದತಂಡದ ಮೇಲೆ ಹೆಚ್ಚಿನ ಪರಿಣಾ ಬೀರಿದೆ. ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿ ಹೊರಬೇಕಾದ  ಯುವರಾಜ್, ಕೈಕೊಡುತ್ತಿರುವುದು  ತಂಡಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಏಕೆಂದರೆ, ಮಧ್ಯಮ  ಕ್ರಮಾಂಕದ ಇತರೆ ಆಟಗಾರರ ಪೈಕಿ  ಯುವರಾಜ್ ಹೆಚ್ಚು ಸಮರ್ಥರೆನಿಸಿದ್ದರು. ಬೌಲಿಂಗ್ ವಿಭಾಗದಲ್ಲಿ ಕೂಡ ಜಹೀರ್ ಖಾನ್, ಕೌಲ್ಟರ್ ನೀಲ್, ಅಲ್ಬಿ, ಅಮಿತ್ ಮಿಶ್ರಾ  ಮತ್ತು ಡುಮಿನಿ ಅನುಭವಿ ಗಳಾಗಿದ್ದರೂ ಎದುರಾಳಿ ಬ್ಯಾಟ್ಸ್‍ಮನ್‍ಗಳ ಮೇಲೆ ಪ್ರಭಾವ ಬೀರುತ್ತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ