ಸಾನಿಯಾ ಮಿರ್ಜಾ, ಮಾರ್ಟಿನಾ ಹಿಂಗಿಸ್ 
ಕ್ರೀಡೆ

ಕ್ವಾರ್ಟರ್ ಫೈನಲ್ ಗೆ ಸಾನಿಯಾ - ಹಿಂಗಿಸ್

ಕಳೆದವಾರ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದ್ದ ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡ್ ನ ಮಾರ್ಟಿನಾ ಹಿಂಗಿಸ್ ಜೋಡಿ ,

ರೋಮ್: ಕಳೆದವಾರ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದ್ದ ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡ್ ನ ಮಾರ್ಟಿನಾ ಹಿಂಗಿಸ್ ಜೋಡಿ , ಈಗ ರೋಮ್ ಮಾಸ್ಟರ್ಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಸುತ್ತಿಗೆ ಪ್ರವೇಶಿಸಿದೆ.
ಬುಧವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಭಾರತ ಹಾಗೂ ಸ್ವಿಸ್ ಜೋಡಿ ತಮ್ಮ ಎದುರಾಳಿ ರುಮೇನಿಯಾದ ಇರಿನಾ ಕೆಮಿಲಿ ಬೇಗು ಮತ್ತು ಮೋನಿಕಾ ನಿಕಲಸ್ಸು ವಿರುದ್ಧ 6-4, 6-1 ಸೆಟ್ ಗಳ ಅಂತರದಲ್ಲಿ ಗೆಲುವು ದಾಖಲಿಸಿ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶ ಪಡೆದಿದೆ.
ಮ್ಯಾಡ್ರಿಡ್ ಓಪನ್ ಟೂರ್ನಿಯಲ್ಲಿ ಮಹಿಳೆಯರ ವಿಭಾಗದಲ್ಲಿ ಸೋಲನುಭವಿಸಿದ್ದ ಸಾನಿಯಾ ಹಾಗೂ ಹಿಂಗಿಸ್ ಜೋಡಿ ಡಬ್ಲ್ಯೂ ಎ ಮಹಿಳೆಯರ ಡಬಲ್ಸ್ ರ್ಯಾಂಕಿಂಗ್ ನ ತಂಡ ವಿಭಾಗದಲ್ಲಿ ಅಗ್ರಸ್ಥಾನ ಕಳೆದುಕೊಂಡಿತ್ತು.  ಹಾಗಾಗಿ ಟೂರ್ನಿಯಲ್ಲಿ  ಮತ್ತೆ ಈ ಜೋಡಿ ಗೆಲ್ಲುವ ಆಸೆಯೊಂದಿಗೆ ಕಣಕ್ಕಿಳಿದಿದೆ.
ಪಂದ್ಯದ ಆರಂಭದಿಂದಲೇ ರುಮೇನಿಯಾ ಜೋಡಿ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿ ಬಿಗಿ ಹಿಡಿತ ಸಾಧಿಸಿದ ಸಾನಿಯಾ ಹಾಗೂ ಹಿಂಗಿಸ್, ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಿದರು. ಪಂದ್ಯದ  ಆರಂಭದಲ್ಲಿ ಎದುರಾಳಿ ಆಟಗಾರ್ತಿಯರು ಪ್ರತಿರೋಧ ನೀಡುವ ಪ್ರಯತ್ನ ನಡೆಸಿದರಾದರೂ ಯಶಸ್ವಿಯಾಗಲಿಲ್ಲ.  ಹಾಗಾಗಿ ಭಾರತ ಮತ್ತು ಸ್ವಿಸ್ ಜೋಡಿ 6 -4 ಅಂತರದಲ್ಲಿ ಮುನ್ನಡೆ ಕಂಡುಕೊಂಡಿತು. ಇನ್ನು ಎರಡನೇ ಸೆಟ್ ನಲ್ಲಿ ಎದುರಾಳಿ ಜೋಡಿ ಮೇಲೆ ಒತ್ತಡ ಹಾಕಿದ ಸಾನಿಯಾ ಮತ್ತು ಹಿಂಗಿಸ್ 6-1 ಅಂಕಗಳ ಸುಲಭ ಮುನ್ನಡೆಯೊಂದಿಗೆ ಪಂದ್ಯವನ್ನು ಜಯಿಸಿದರು. ಸಾನಿಯಾ ಜೋಡಿ ಪಂದ್ಯದಲ್ಲಿ ಏಳು ಬ್ರೇಕ್ ಪಾಯಿಂಟ್ ಗಳನ್ನು ಸಂಪಾದಿಸಿತು.
ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ರೋಮೇನಿಯಾದ ಫ್ಲೋರಿನ್ ಮರ್ಜಿಯಾ ಜೋಡಿ, ಎದುರಾಳಿ ಅರ್ಜೆಂಟೀನಾದ ಲಿಯೋನಾರ್ಡೋ ಮೇಯರ್ ಮತ್ತು ಜುವಾನ್ ಮೋನಾಕೋ ಜೋಡಿ ವಿರುದ್ಧ 6-1, 6-3 ಸೆಟ್ ಗಳ ಗೆಲುವು ದಾಖಲಿಸಿತು.  ಮ್ಯಾಡ್ರಿಡ್ ಓಪನ್ ಟೂರ್ನಿಯ ಸೆಮಿಫೈವನಲ್ ಪಂದ್ಯದಲ್ಲಿ ಪೆಟ್ರಾ ವಿರುದ್ಧ ಸೋಲನುಭವಿಸಿದ್ದ ಸೆರೆನಾ ತಮ್ಮ ಸತತ 27 ಪಂದ್ಯಗಳ ಗೆಲುವಿನ ಓಟಕ್ಕೆ ಅಂತ್ಯವಾಡಿದರು. ಈ ಪಂದ್ಯದಲ್ಲಿ ಅನಸ್ಟಾಸಿಯಾ ವಿರುದ್ಧ ಪ್ರಾಬಲ್ಯ ಮೆರೆದು ಗೆಲುವು ದಾಖಲಿಸಿದ್ದಾರೆ.
ಜೊಕೊವಿಚ್ ಗೆ ಜಯ: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ಸರ್ಬಿಯಾದ ನೋವಾಕ್ ಜೊಕೊವಿಚ್, ಸ್ಪೇನ್ ನ ಆಟಗಾರ ನಿಕೋಲಸ್ ಆಲ್ಮರ್ಗೋ ವಿರುದ್ಧ ಗೆಲುವು ದಾಖಲಿಸಿದ್ದಾರೆ. ಮ್ಯಾಡ್ರಿಡ್ ಓಪನ್ ಟೂರ್ನಿಯಿಂದ ಹೊರಗುಳಿದು ವಿಶ್ರಾಂತಿ ಪಡೆದಿದ್ದ ಜೊಕೊವಿಚ್ ಮೊದಲ ಪಂದ್ಯದಲ್ಲಿ 6-1, 6-7(5), 6-3 ಸೆಟ್ ಗಳ ಅಂತರದಲ್ಲಿ ಜಯಿಸಿದರು.
ಮ್ಯಾಡ್ರಿಡ್ ಓಪನ್ ಪ್ರಶಸ್ತಿ ಗೆದ್ದ   ಡಿ ಮುರ್ರೆ ತಮ್ಮ ಪ್ರತಿಸ್ಫರ್ಧಿ ಆಟಗಾರ ಜೆರ್ಮಿ ಚಾರ್ಡಿ ವಿರುದ್ಧ  6-4, 6-3, ಸೆಟ್ ಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಈ ಮೂಲಕ ಪ್ರಸಕ್ತ ಸಾಲಿನಲ್ಲಿ ಮರ್ರೆ ಕ್ಲೋ ಕೋರ್ಟ್ನಲ್ಲಿ 10-0 ಗೆಲುವಿನ ಮುನ್ನಡೆ ಸಾಧಿಸಿದ್ದಾರೆ.




Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT