ಕ್ರೀಡೆ

ಶೂಟಿಂಗ್ ವಿಶ್ವಕಪ್: ಫೈನಲ್ಸ್ ಪ್ರವೇಶಿಸಲು ಬಿಂದ್ರಾ, ಗಗನ್ ವಿಫಲ

Srinivas Rao BV

ನವದೆಹಲಿ: ಅಮೆರಿಕಾ(ಯು.ಎಸ್) ನಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಶೂಟಿಂಗ್  ಸ್ಪೋರ್ಟ್ ಫೆಡರೆಶನ್ ವಿಶ್ವಕಪ್ ಪಂದ್ಯಾವಳಿಯಲ್ಲಿ  ಫೈನಲ್ ಪ್ರವೇಶಿಸಲು ಅಭಿನವ್ ಬಿಂದ್ರಾ ಮತ್ತು ಗಗನ್ ನಾರಂಗ್ ವಿಫಲರಾಗಿದ್ದಾರೆ. 10 ಮೀ. ಏರ್ ರೈಫಲ್ ವಿಭಾಗದಲ್ಲಿ ಗಗನ್ ನಾರಂಗ್ ಹಾಗು ಅಭಿನವ್ ಬಿಂದ್ರಾ ಭಾಗವಹಿಸಿದ್ದರು.

ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಪದಕ ಪಡೆದಿದ್ದ ಅಭಿನವ್ ಬಿಂದ್ರಾ ಮತ್ತು ಗಗನ್ ನಾರಂಗ್ ಫೈನಲ್ ಪ್ರವೇಶಿಸುವ ಬಗ್ಗೆ ನಿರೀಕ್ಷೆ ಹೆಚ್ಚಿತ್ತು.

ಆದರೆ  ಫೈನಲ್ಸ್ ನಿಂದ ಹೊರಬಿದ್ದಿರುವುದು  ಅಭಿಮಾನಿಗಳಿಗೆ ತೀವ್ರ ನಿರಾಸೆಯುಂಟಾಗಿದೆ. ಬಿಂದ್ರಾ ಹಾಗು ನಾರಂಗ್  ಫೈನಲ್ಸ್ ಪ್ರವೇಶಿಸಲು ವಿಫಲರಾಗಿದ್ದರೆ, 50 ಮೀ. ರೈಫಲ್ ವಿಭಾಗದಲ್ಲಿ ಭಾರತೀಯ ತಂಡದ ಹಿರಿಯ ಶೂಟರ್ ಜಿತು ರೈ, ಅರ್ಹತಾ ಸುತ್ತಿನಲ್ಲಿ ಪ್ರಗತಿ ಸಾಧಿಸಿದ್ದಾರೆ.     

ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೊರ್ಟ್ ಫೆಡರೆಶನ್ ವಿಶ್ವಕಪ್ ಪಂದ್ಯಾವಳಿಯ ಮೊದಲ ದಿನ, 10 ಮೀ. ಏರ್ ರೈಫಲ್ ವಿಭಾಗದಲ್ಲಿ ಅಭಿನವ್ ಬಿಂದ್ರಾ 624.6 ಅಂಕ ಗಳಿಸುವ ಮೂಲಕ, ಸಂಜಿವ್ ರಜಪೂತ್ ಮತ್ತು ನಾರಂಗ್ 623 ಮತ್ತು 622,9 ಅಂಕಗಳೊಂದಿಗೆ ಅರ್ಹತಾ ಸುತ್ತಿನ ಪಂದ್ಯಾವಳಿಯನ್ನು ಪೂರ್ಣಗೊಳಿಸಿದ್ದರು.

ವಿಶ್ವಕಪ್ ಟೂರ್ನಿ ಯ 50 ಮೀ. ರೈಫಲ್ ವಿಭಾಗದಲ್ಲಿ ಸ್ಪರ್ಧಿಸಿರುವ ಓಂ ಪ್ರಕಾಶ್, ಜಿತು, ಪ್ರಕಾಶ್ ನಂಜಪ್ಪ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಆಯ್ಕೆಗೊಂಡಿದ್ದು, ಫೈನಲ್ ಪ್ರವೇಶಕ್ಕಾಗಿ ಶುಕ್ರವಾರ ನಡೆಯಲಿರುವ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. 

SCROLL FOR NEXT