ಮುಂಬೈ: ಪಂದ್ಯದ ವೇಳೆ ಅಂಪೈರ್ಗಳ ನಿರ್ಧಾರಕ್ಕೆ ಅಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಮಿಚೆಲ್ ಮೆಕ್ಲೆನಾಘನ್ ಅವರು ವಾಗ್ದಂಡನೆಗೆ ಗುರಿಯಾಗಿದ್ದಾರೆ.
ಗುರುವಾರ ನಡೆದಿದ್ದ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿತ್ತು. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಸಿಸಿಐ, ಮೆಕ್ಲೆನಾಘನ್ ಅವರು ಮೊದಲ ಹಂತದ ಪ್ರಮಾದವೆಸಗಿದ್ದು, ಹಾಗಾಗಿ, ಅವರಿಗೆ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.
ಗುರುವಾರದ ಪಂದ್ಯದಲ್ಲಿ ಮುಂಬೈ ತಂಡ, ಕೋಲ್ಕತಾ ತಂಡವನ್ನು ಕೇವಲ 5 ರನ್ಗಳಿಂದ ಸೋಲಿಸಿತ್ತು.