ರಾಹುಲ್ ದ್ರಾವಿಡ್ 
ಕ್ರೀಡೆ

ಡಿವಿಲಿಯರ್ಸ್ ಹೊಡೆತ ಕನಸಿನಲ್ಲೂ ಸಾಧ್ಯವಿಲ್ಲ: ದ್ರಾವಿಡ್

ರಸಕ್ತ ಜಾಗತಿಕ ಕ್ರಿಕೆಟ್‍ನಲ್ಲಿ ಬ್ಯಾಟಿಂಗ್ ಶೈಲಿಗೆ ಒಂದು ಹೊಸ ವ್ಯಾಖ್ಯಾನ ನೀಡಿರುವ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರ ಆಟವನ್ನು...

ಮುಂಬೈ: ಪ್ರಸಕ್ತ ಜಾಗತಿಕ ಕ್ರಿಕೆಟ್‍ನಲ್ಲಿ ಬ್ಯಾಟಿಂಗ್ ಶೈಲಿಗೆ ಒಂದು ಹೊಸ ವ್ಯಾಖ್ಯಾನ ನೀಡಿರುವ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರ ಆಟವನ್ನು ಭಾರತದ ಮಾಜಿ ನಾಯಕ ರಾಜಸ್ಥಾನ ರಾಯಲ್ಸ್ ತಂಡದ ಮಾರ್ಗದರ್ಶಕ ರಾಹುಲ್ ದ್ರಾವಿಡ್ ಮುಕ್ತವಾಗಿ ಪ್ರಶಂಸಿದ್ದಾರೆ.

ಸಾಕಷ್ಟು ಬಾರಿ ಎಬಿ ಡಿವಿಲಿಯರ್ಸ್ ಆವರ ಆಟವನ್ನು ನೋಡಿ ಆನಂದಿಸಿದ್ದೇನೆ. ಅಲ್ಲದೆ ಅಚ್ಚರಿಯನ್ನು ಪಟ್ಟಿದ್ದೇನೆ. ಅವರ ಹೊಡೆತಗಳನ್ನು ನಾನು ಕನಸಿನಲ್ಲೂ ಪ್ರಯೋಗಿಸಲು ಸಾಧ್ಯವಿಲ್ಲ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎನ್ ಜಿಒವೊಂದರ ಜತೆ ಕೈಜೋಡಿಸಿದ ಸಮಾರಂಭದಲ್ಲಿ
ಭಾಗವಹಿಸಿ ಮಾತನಾಡಿದ ದ್ರಾವಿಡ್, ಡಿವಿಲಿಯರ್ಸ್ ಹಾಗೂ ನ್ಯೂಜಿಲೆಂಡ್‍ನ ಬ್ರೆಂಡನ್ ಮೆಕಲಂ ಯುವ ಜನತೆಗೆ ಸ್ಫೂರ್ತಿಯಾಗಿದ್ದಾರೆ.

ವಿವಿಯನ್ ರಿಚರ್ಡ್ಸ್ ಮೊದಲು ಆಕ್ರಮಣಕಾರಿ ಆಟವಾಡುವುದನ್ನು ಪರಿಚಯಿಸಿದರು. ನಂತರ ಶ್ರೀಲಂಕಾದ ಸನತ್ ಜಯಸೂರ್ಯ ಹಾಗೂ ರಮೇಶ್ ಕಲುವಿತರಣ ಏಕದಿನದಲ್ಲಿ ಆರಂಭಿಕ 15 ಓವರ್‍ಗಳಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟರು. ವೀರೇಂದ್ರ ಸೆಹವಾಗ್ ಟೆಸ್ಟ್‍ನಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಡಿವಿಲಿಯರ್ಸ್ ಕ್ರಿಕೆಟ್‍ನ ಮೂರು ಮಾದರಿಯಲ್ಲಿ ಪರಿಸ್ಥಿತಿಗೆ ತಕ್ಕಂತೆ ಆಡುವು ಸಾಮರ್ಥ್ಯ ಹೊಂದಿದ್ದಾರೆ. ಹಾಗಾಗಿ ಪ್ರತಿ ಆಟಗಾರ ತನ್ನದೇ ಆದ ಸಾಮರ್ಥ್ಯ ಹೊಂದಿರುತ್ತಾರೆ ಎಂದರು.

ಪೀಟರ್ಸನ್ ಸಂಗತಿ ದುರಾದೃಷ್ಟಕರ: ಇಂಗ್ಲೆಂಡ್ ತಂಡದಲ್ಲಿ ಕೆವಿನ್ ಪೀಟರ್ಸನ್‍ಗೆ ಸ್ಥಾನ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ದ್ರಾವಿಡ್, ಕೆವಿನ್ ಪೀಟರ್ಸನ್ ಜತೆಗಿನ ಒಡನಾಟವನ್ನು ಆನಂದಿಸಿದ್ದೇನೆ. ಆದರೆ ಅವರಿಗೆ ಇಂಗ್ಲೆಂಡ್ ತಂಡದಲ್ಲಿ ಆಡಲು ಅವಕಾಶ ನೀಡುವುದಿಲ್ಲ ಎಂದು ಸೂಚನೆ ನೀಡಿರುವ ಪ್ರಕರಣ ದುರಾದೃಷ್ಟಕರವಾದುದು.
ಈ ನಿರ್ಣಯ ಮುಂಬರುವ ಆ್ಯಶಸ್‍ನಲ್ಲಿ ಆ್ಯಂಡ್ರೂ ಸ್ಟ್ರಾಸ್ ಮತ್ತು ಅಲಸ್ಟೇರ್ ಕುಕ್ ಅವರ ಮೇಲೆ ಒತ್ತಡ ಹೆಚ್ಚಿಸಲಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!