ರೋಜರ್ ಫೆಡರರ್ 
ಕ್ರೀಡೆ

ರೋಮ್ ಮಾಸ್ಟರ್ಸ್(ಇಟಲಿ ಓಪನ್) ಟೆನಿಸ್ ಟೂರ್ನಿ ಸೆಮೀಸ್‍ಗೆ ಫೆಡರರ್

ಕ್ಲೇ ಕೋರ್ಟ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ಮಾಜಿ ನಂಬರ್ ಒನ್ ಆಟಗಾರ ಸ್ವಿಜರ್ಲೆಂಡ್‍ನ ರೋಜರ್ ಫೆಡರರ್, ರೋಮ್ ಮಾಸ್ಟರ್ಸ್ (ಇಟಲಿ ಓಪನ್) ಟೆನಿಸ್ ಟೂರ್ನಿಯ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ...

ರೋಮ್: ಕ್ಲೇ ಕೋರ್ಟ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ಮಾಜಿ ನಂಬರ್ ಒನ್ ಆಟಗಾರ ಸ್ವಿಜರ್ಲೆಂಡ್‍ನ ರೋಜರ್ ಫೆಡರರ್, ರೋಮ್ ಮಾಸ್ಟರ್ಸ್ (ಇಟಲಿ ಓಪನ್) ಟೆನಿಸ್ ಟೂರ್ನಿಯ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟಫೈನಲ್ ಪಂದ್ಯದಲ್ಲಿ ರೋಜರ್ ಫೆಡರರ್ ತಮ್ಮ ಎದುರಾಳಿ 6ನೇ ಶ್ರೇಯಾಂಕಿತ ಥಾಮಸ್ ಬೆರ್ಡಿಚ್ ವಿರುದ್ಧ 6-3, 6-3 ಸೆಟ್‍ಗಳ ಅಂತರದಲ್ಲಿ ಗೆಲವು ದಾಖಲಿಸಿದರು. ಪಂದ್ಯದ ಆರಂಭದಿಂದ ಅಂತ್ಯದವರೆಗೂ ಎದುರಾಳಿಯ ವಿರುದ್ಧ ಪ್ರಾಬಲ್ಯ ಸಾಧಿಸಿದ ಫೆಡರರ್, ಪಂದ್ಯದ ಯಾವುದೇ ಹಂತದಲ್ಲಿ ಬೆರ್ಡಿಚ್ ಅವರಿಂದ ಪೈಪೋಟಿ ಎದುರಿಸಲಿಲ್ಲ.

ಮೊದಲ ಸೆಟ್‍ನಲ್ಲಿ 6-3 ಅಂತರದ ಸುಲಭ ಮುನ್ನಡೆ ಸಾಧಿಸಿದ ಫೆಡರರ್, ಎರಡನೇ ಸೆಟ್‍ನಲ್ಲೂ ಅದೇ ಪ್ರದರ್ಶನ ಮುಂದುವರಿಸುವ ಮೂಲಕ ಪಂದ್ಯದಲ್ಲಿ ಸುಲಭ ಗೆಲವು ದಾಖಲಿಸಿದರು. ರೋಜರ್ ತಮ್ಮ ಮುಂದಿನ ಪಂದ್ಯದಲ್ಲಿ ರಾಫೆಲ್ ನಡಾಲ್ ಹಾಗೂ ಸ್ಟಾನಿಸ್ಲಾಸ್ ವಾವ್ರಿಂಕಾ ನಡುವಣ ಕದನದಲ್ಲಿ ಗೆಲವು ದಾಖಲಿಸುವ ಆಟಗಾರನ ವಿರುದ್ಧ ಸೆಣಸಲಿದ್ದಾರೆ.

ಫೆರರ್ ಗೆ ಜಯ: ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಡೆವಿಡ್ ಫೆರರ್ ಗೆಲವು ದಾಖಲಿಸಿದ್ದಾರೆ. ಬೆಲ್ಜಿಯಂನ ಡೇವಿಡ್ ಗೊಫಿನ್ ವಿರುದ್ಧ ಪಂದ್ಯದಲ್ಲಿ 6-2, 4-6, 6-3 ಸೆಟ್‍ಗಳ ಅಂತರದಲ್ಲಿ ಜಯ ಸಾಧಿಸಿದರು. ಪರಸ್ಪರ ಹೋರಾಟದಿಂದ ಕೂಡಿದ್ದ ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದ್ದ ಡೆವಿಡ್ ಫೆರರ್ 6-2 ಅಂತರದ ಮುನ್ನಡೆ ಕಾಯ್ದುಕೊಂಡರು. ಇನ್ನು ಎರಡನೇ ಸೆಟ್ ನಲ್ಲಿ ಗೊಫಿನ್ ಅವರಿಂದ ತೀವ್ರ ಪೈಪೋಟಿ ಎದುರಿಸಿದ ಫೆರರ್ 4-6 ಅಂತರದಲ್ಲಿ ಹಿನ್ನಡೆ ಅನುಭವಿಸಿದರು. ಇನ್ನು ಅಂತಿಮ ಸೆಟ್‍ನಲ್ಲಿ ಮರು ಹೋರಾಟ ನಡೆಸಿದ ಫೆರರ್ ಆಕರ್ಷಕ ಪ್ರದರ್ಶನ ನೀಡಿ 6-3 ಅಂತರದಲ್ಲಿ ಮುನ್ನಡೆ ಪಡೆದು ಗೆಲವು ಪಡೆದರು.

ಫೆರರ್-ಜೊಕೊ ಕಾದಾಟ: ಫೆರರ್ ತಮ್ಮ ಸೆಮಿಫೈನಲ್ ಪಂದ್ಯದಲ್ಲಿ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಚ್ ವಿರುದ್ಧ ಕಾದಾಟ ನಡೆಸಲಿದ್ದಾರೆ. ಶುಕ್ರವಾರ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್‍ನಲ್ಲಿ ಜೊಕೊವಿಚ್ ಅವರು, ಜಪಾನ್‍ನ ನಿಶಿಕೋರಿ ವಿರುದ್ಧ 6-3, 6-3 ಹಾಗೂ 6-1 ಸೆಟ್‍ಗಳ ಅಂತರದಲ್ಲಿ ಜಯ ಸಾಧಿಸಿದರು.

ಕ್ವಾರ್ಟರ್ ಗೆ ಸಿಮೊನಾ: ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಎರಡನೇ ಶ್ರೇಯಾಂಕಿತ ಆಟಗಾರ್ತಿ ಸಿಮೊನಾ ಹಾಲೆಪ್ ತಮ್ಮ ಎದುರಾಳಿ ಅಲೆಕ್ಸಾಂಡ್ರಾ ಡುಲ್ಗೆರು ವಿರುದ್ಧ ಗೆಲವು ನಗೆ ಬೀರಿದ್ದಾರೆ. ಪಂದ್ಯದುದ್ದಕ್ಕೂ ಅಲೆಕ್ಸಾಂಡ್ರಾ ಮೇಲೆ ಸವಾರಿ ನಡೆಸಿದ ಹಾಲೆಪ್ 6-1, 6-0 ಸೆಟ್ ಗಳ ಅಂತರದಲ್ಲಿ ಸುಲಭವಾದ ಗೆಲವು ತಮ್ಮದಾಗಿಸಿಕೊಂಡರು. ಹಾಲೆಪ್ ಅವರ ಆಕ್ರಮಣಕಾರಿ ಆಟದ ಮುಂದೆ ಮಂಕಾದ ಅಲೆಕ್ಸಾಂಡ್ರಾ ಪಂದ್ಯದಲ್ಲಿ ಕೇವಲ 1 ಅಂಕಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.

ಸೆರೆನಾ ಹೊರಕ್ಕೆ
ರೋಮ್:
ವಿಶ್ವದ ನಂಬರ್ ಒನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮೊಣಕೈ ಗಾಯದ ಸಮಸ್ಯೆಗೆ ಸಿಲುಕಿದ್ದು, ರೋಮ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಟೂರ್ನಿಯಿಂದ ಹೊರ ನಡೆಯುವುದು ನನಗೆ ಇಷ್ಟವಿಲ್ಲ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಇದು ಅತ್ಯುತ್ತಮ ನಿರ್ಧಾರ ಎಂದು ಸೆರೆನಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ