ಸಾನಿಯಾ ಮಿರ್ಜಾ -ಮಾರ್ಟಿನಾ ಹಿಂಗಿಸ್ 
ಕ್ರೀಡೆ

ಸಾನಿಯಾ -ಹಿಂಗಿಸ್ ಜೋಡಿ ಫೈನಲ್‍ಗೆ

ಭಾರತದ ಹಿರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಅವರು ಜೊತೆಗಾತಿ, ಸ್ವಿಡ್ಜರ್ಲೆಂಡ್‍ನ ಮಾರ್ಟಿನಾ ಹಿಂಗಿಸ್ ಜೋಡಿ...

ರೋಮ್ :  ಭಾರತದ ಹಿರಿಯ ಟೆನಿಸ್ ಆಟಗಾರ್ತಿ ಸಾನಿಯಾ  ಮಿರ್ಜಾ ಹಾಗೂ ಅವರು ಜೊತೆಗಾತಿ, ಸ್ವಿಡ್ಜರ್ಲೆಂಡ್‍ನ ಮಾರ್ಟಿನಾ ಹಿಂಗಿಸ್ ಜೋಡಿ, ರೋಮ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪ್ರಶಸ್ತಿ ಸುತ್ತನ್ನು ತಲುಪಿದೆ.
ಶನಿವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ಈ ಜೋಡಿ,  ಫ್ರಾನ್ಸ್ ನ  ಕ್ಯಾರೊಲಿನ್ ಗಾರ್ಸಿಯಾ ಹಾಗೂ ಸ್ಲೊವಾಕಿಯಾದ ಕಟಾರಿನಾ ಸ್ರೆಬೊಟ್ನಿಕ್ ಜೋಡಿಯನ್ನು 6-2, 7-6 (7--5) ಸೆಟ್‍ಗಳ ಅಂತರದಲ್ಲಿ ಪರಾಭವಗೊಳಿಸಿತು.  ಸುಮಾರು 27 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮೊದಲ ಸೆಟ್ ಅನ್ನು ಅನಾಯಾಸವಾಗಿ ಗೆದ್ದ ಸಾನಿಯಾ-ಹಿಂಗಿಸ್ ಜೋಡಿಯು, ಎರಡನೇ ಸೆಟ್‍ನಲ್ಲಿ ಎದುರಾಳಿ ಜೋಡಿಯಿಂದ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಆದರೂ, ಮಣಿಯದೇ ತೀವ್ರ ಪೈಪೋಟಿ ನೀಡಿದ ಫಲವಾಗಿ, ದ್ವಿತೀಯ ಸೆಟ್ ಟೈಬ್ರೇಕರ್ ಗೆ ಬಂದು ನಿಂತಿತು. ಆನಂತರ ಮುಂದುವರಿದ ಪಂದ್ಯದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸಾನಿಯಾ-ಹಿಂಗಿಸ್, ಈ ಸೆಟ್‍ನೊಂದಿಗೆ ಪಂದ್ಯವನ್ನೂ ಗೆಲ್ಲುವಲ್ಲಿ ಯಶಸ್ವಿಯಾ ದರು.


ಪ್ರಶಸ್ತಿ ಸುತ್ತಿನಲ್ಲಿ ಹಂಗೇರಿ-ಫ್ರಾನ್ಸ್ ನ  ಜೋಡಿಯಾದ ಟಿಮಿಯಾ  ಬ್ಯಾಬೊಸ್ ಹಾಗೂ ಕ್ರಿಸ್ಟಿನಾ ಮ್ಲಾಡೆನೊವಿಕ್ ಜೋಡಿಯನ್ನು ಎದುರಿಸಲಿರುವ ಭಾರತ-ಸ್ವಿಸ್ ಜೋಡಿ, ಟ್ರೋಫಿಯೊಂದಿಗೆ ಸುಮಾರು 23 ಕೋಟಿ 76 ಲಕ್ಷ ರು. ಮೊತ್ತದ ಬಹುಮಾನವನ್ನು ಪಡೆಯುವ ಹೊಸ್ತಿಲಲ್ಲಿ ನಿಂತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್