ನವದೆಹಲಿ: ಪ್ರಸಕ್ತ ಸಾಲಿನ ಐಪಿಎಲ್ ಆಟಗಾರರ ಹರಾಜಿನಲ್ಲಿ ರು. 16 ಕೋಟಿಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪಾಲಾಗಿದ್ದ ಯುವರಾಜ್ ಸಿಂಗ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.
8ನೇ ಆವೃತ್ತಿಯಲ್ಲಿ ಯುವರಾಜ್ ದಯನೀಯ ವೈಫಲ್ಯ ಅನುಭವಿಸಿ, ತಮ್ಮ ಮೇಲಿನ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಟೂರ್ನಿಯಲ್ಲಿ ಅವರು ಗಳಿಸಿರುವ ರನ್ ಹಾಗೂ ಅವರ ಸಂಭಾವನೆಯನ್ನು ಜೀ ನ್ಯೂಸ್ ಹೋಲಿಕೆ ಮಾಡಿದೆ. ಈ ತಾಳೆ ನೋಡಿದರೆ, ಯುವರಾಜ್ ಗಳಿಸಿರುವ ಪ್ರತಿ ರನ್‍ಗೆ ರು. 8.5 ಲಕ್ಷ ಸಂಭಾವನೆ ಪಡೆದುಕೊಂಡಂತಾಗಿದೆ.
ಅಂದರೆ, ಯುವರಾಜ್ ಸಿಂಗ್ ಈ ಬಾರಿಯ ಐಪಿಎಲ್ ನಲ್ಲಿ ಆಡಿರುವ 14 ಪಂದ್ಯಗಳಿಂದ 19.07ರ ಸರಾಸರಿಯಲ್ಲಿ 2 ಅರ್ಧ ಶತಕ ಸೇರಿದಂತೆ ಕೇವಲ 248 ರನ್ ದಾಖಲಿಸಿದ್ದಾರೆ. ಅಲ್ಲದೆ 118.09 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಅವರ ಹರಾಜಿನ ಮೊತ್ತ ಮತ್ತು ಗಳಿಸಿರುವ ರನ್‍ಗಳನ್ನು ತಾಳೆ ಹಾಕಿದಾಗ ಡೆಲ್ಲಿ ಡೇರ್ ಡೆವಿಲ್ಸ್‍ನ ಈ ಬ್ಯಾಟ್ಸ್ ಮನ್ ನ ಪ್ರತಿ ರನ್ ಮೌಲ್ಯ ರು. 8.5 ಲಕ್ಷವಾಗಿದೆ. ಈ ಸಲದ ಐಪಿಎಲ್‍ನಲ್ಲಿ ಡೆಲ್ಲಿ 14 ಪಂದ್ಯಗಳಿಂದ 11 ಅಂಕ ಮಾತ್ರ ಗಳಿಸಿ 7ನೇ ಸ್ಥಾನದೊಂದಿಗೆ ತನ್ನ ಹೋರಾಟಕ್ಕೆ ತೆರೆ ಎಳೆದುಕೊಂಡಿದೆ.