ಸಾಫ್ ಗೇಮ್ಸ್ಗೆ ಕೇರಳ ಸಜ್ಜು
ನ್ಯಾಷನಲ್ ಗೇಮ್ಸ್ ಗೆ ಆತಿಥ್ಯ ವಹಿಸಿದ ಬೆನ್ನಲ್ಲೇ ಕೇರಳ ಸೌತ್ ಏಷ್ಯನ್ ಫೆಡರೇಶನ್ ಗೇಮ್ಸ್ (ಸಾಫ್ ಗೇಮ್ಸ್)ಗೆ ಆತಿಥ್ಯ ವಹಿಸಲು ಸಜ್ಜಾಗಿದೆ...
ನವದೆಹಲಿ: ನ್ಯಾಷನಲ್ ಗೇಮ್ಸ್ ಗೆ ಆತಿಥ್ಯ ವಹಿಸಿದ ಬೆನ್ನಲ್ಲೇ ಕೇರಳ ಸೌತ್ ಏಷ್ಯನ್ ಫೆಡರೇಶನ್ ಗೇಮ್ಸ್ (ಸಾಫ್ ಗೇಮ್ಸ್)ಗೆ ಆತಿಥ್ಯ ವಹಿಸಲು ಸಜ್ಜಾಗಿದೆ. ಇಂದು ನಡೆದ ಸಭೆಯಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ 12ನೇ ಸಾಫ್ ಗೇಮ್ಸ್ ಕೇರಳದಲ್ಲಿ ನಡೆಸಲು ತೀರ್ಮಾನ ಕೈಗೊಂಡಿದೆ.
ಈ ವರ್ಷ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಸಾಫ್ ಗೇಮ್ಸ್ ನಡೆಯಲಿದೆ. ಈ ಬಗ್ಗೆ ಗುರುವಾರ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ.
ಕೇರಳದ ರಾಜಧಾನಿಯಾದ ತಿರುವನಂತಪುರದಲ್ಲಿ ಸಾಫ್ಗೇಮ್ಸ್ ನಡೆಯಲಿದೆ. 22 ಆಟಗಳು ಸಾಫ್ ಗೇಮ್ಸ್ನಲ್ಲಿ ಒಳಗೊಂಡಿದ್ದು, ಪ್ರಸ್ತುತ ಕ್ರೀಡಾಕೂಟ 12 ದಿನಗಳ ಕಾಲ ನಡೆಯಲಿದೆ.
ಭಾರತ ಸೇರಿದಂತೆ ಪಾಕಿಸ್ತಾನ್, ಶ್ರೀಲಂಕಾ, ಅಫ್ಘಾನಿಸ್ತಾನ್, ಬಾಂಗ್ಲಾದೇಶ್, ನೇಪಾಳ , ಭೂತಾನ್, ಮಾಲ್ಡೀವ್ಸ್ ಮೊದಲಾದ ದೇಶಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಲಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.