ಸ್ಟೀಫನ್ ಕಾನ್‌ಸ್ಟಾಂಟೀನ್ 
ಕ್ರೀಡೆ

ಫಿಫಾ ವಿಶ್ವಕಪ್ ಅರ್ಹತಾ ಸುತ್ತು: ಸಂಭಾವ್ಯ ಭಾರತ ತಂಡ ಪ್ರಕಟ

ಮುಂದಿನ ತಿಂಗಳು ನಡೆಯಲಿರುವ ಫಿಫಾ ವಿಶ್ವಕಪ್ 2018ರ ಅರ್ಹತಾ ಸುತ್ತಿನ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಆಟಗಾರರ ಪಟ್ಟಿಯನ್ನು ಕೋಚ್ ಸ್ಟೀಫನ್...

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಫಿಫಾ ವಿಶ್ವಕಪ್ 2018ರ ಅರ್ಹತಾ ಸುತ್ತಿನ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಆಟಗಾರರ ಪಟ್ಟಿಯನ್ನು ಕೋಚ್ ಸ್ಟೀಫನ್ ಕಾನ್‌ಸ್ಟಾಂಟೀನ್  ಬಿಡುಗಡೆ ಮಾಡಿದ್ದಾರೆ.

ಭಾರತ ತಂಡ ಮೊದಲ ಪಂದ್ಯವನ್ನು ಜೂನ್ 11ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಓಮನ್ ವಿರುದ್ಧ ಸೆಣಸಲಿದ್ದು, ನಂತರ ಜೂನ್ 16ರಂದು ಎರಡನೇ ಪಂದ್ಯದಲ್ಲಿ ಗುಹಮ್ ವಿರುದ್ಧ ಅದರ ತವರಿನ ಅಂಗಣದಲ್ಲಿ ಆಡಲಿದೆ.

ಈ ಮಹತ್ವದ ಪಂದ್ಯಗಳಿಗೆ ಬುಧವಾರ 38 ಆಟಗಾರರ ಸಂಭಾವ್ಯರ ಪಟ್ಟಿ ಬಿಡುಗಡೆ ಮಾಡಿದೆ. ನಂತರ 26 ಆಟಗಾರರ ಅಂತಿಮ ತಂಡವನ್ನು ಆಯ್ಕೆ ಮಾಡಲಾಗುವುದು ಎಂದು ಎನ್‍ಡಿಟಿವಿ ವರದಿ ಮಾಡಿದೆ. ಐ-ಲೀಗ್ ಟೂರ್ನಿ ಮುಕ್ತಾಯಕ್ಕೂ ಮುನ್ನ ಅಂತಿಮ ತಂಡವನ್ನು ಆಯ್ಕೆ ಮಾಡಲಾಗುವುದು.

ತಂಡ ಆಯ್ಕೆಯಾದ ನಂತರ ಜೂನ್ 4ರಿಂದ ಬೆಂಗಳೂರಿನಲ್ಲಿ ತರಬೇತಿ ಶಿಬಿರ ಆರಂಭಿಸಲಾಗುವುದು. ನಮಗೆ ಅಗತ್ಯವಿದ್ದ ವೇದಿಕೆ ಈಗ ಸಿಕ್ಕಿದೆ. ಭಾರತ ತಂಡ ಈಗ ಏಷ್ಯಾದಲ್ಲಿನ ಪ್ರಬಲ ತಂಡಗಳೊಂದಿಗೆ ಸೆಣಸಲು ಸಜ್ಜಾಗಿದೆ. ಇದು ಪ್ರಬಲ ತಂಡಗಳು ಪರಸ್ಪರ ಸೆಣಸುವ ವೇದಿಕೆಯಾಗಿದೆ. ಈ ಹಂತದಲ್ಲಿ ಆಡುವುದರಿಂದ ತಂಡದ ಮೇಲೆ ಜವಾಬ್ದಾರಿ ಹೆಚ್ಚಲಿದೆ ಎಂದು ಸ್ಟೀಫನ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!