ಸೈನಾ ನೆಹ್ವಾಲ್ 
ಕ್ರೀಡೆ

ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ : ಸೈನಾ ನೆಹ್ವಾಲ್‍ಗೆ 2ನೇ ಶ್ರೇಯಾಂಕ

ಭಾರತದ ಶಟಲ್ ಕ್ವೀನ್ ಹಾಗೂ ಹಾಲಿ ಚಾಂಪಿಯನ್ ಸೈನಾ ನೆಹ್ವಾಲ್, ಮೇ 26ರಿಂದ 31ರ ವರೆಗೆ ಸಿಡ್ನಿಯಲ್ಲಿ ನಡೆಯಲಿರುವ 750 ಸಾವಿರ ಡಾಲರ್ ಬಹುಮಾನ...

ಸಿಡ್ನಿ: ಭಾರತದ ಶಟಲ್ ಕ್ವೀನ್ ಹಾಗೂ ಹಾಲಿ ಚಾಂಪಿಯನ್ ಸೈನಾ ನೆಹ್ವಾಲ್, ಮೇ 26ರಿಂದ 31ರ ವರೆಗೆ ಸಿಡ್ನಿಯಲ್ಲಿ ನಡೆಯಲಿರುವ 750 ಸಾವಿರ ಡಾಲರ್ ಬಹುಮಾನ ಮೊತ್ತದ ಆಸ್ಟ್ರೇಲಿಯನ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಎರಡನೇ ಶ್ರೇಯಾಂಕಿತ ಆಟಗಾರ್ತಿಯಾಗಿದ್ದಾರೆ.

ವಿಶ್ವದ ಎರಡನೇ ಶ್ರೇಯಾಂಕಿತೆ ಸೈನಾ, ಕಳೆದ ವರ್ಷ ಸ್ಪೇನಿನ ಕರೊಲಿನಾ ಮರೀನ್ ಅವರನ್ನು ಪರಾಭವಗೊಳಿಸಿ ಪ್ರಶಸ್ತಿಯ ಗರಿ ಮೂಡಿಸಿಕೊಂಡಿದ್ದರು. ಈ ಬಾರಿ ಮೊದಲ ಸುತ್ತಿನ ಪಂದ್ಯದಲ್ಲಿ ಅವರು ಅರ್ಹತಾ ಸುತ್ತಿನ ಆಟಗಾರ್ತಿಯ ವಿರುದ್ಧ ಸೆಣಸುವ ಮೂಲಕ ತಮ್ಮ ಅಭಿಮಾನವನ್ನು ಆರಂಭಿಸಲಿದ್ದಾರೆ ಎಂದು ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾರತದ ಇನ್ನುಳಿದ ಆಟಗಾರರ ಪೈಕಿ ವಿಶ್ವದ 11ನೇ ಶ್ರೇಯಾಂಕಿತೆ ಪಿ.ವಿ. ಸಿಂಧು, ಮಹಿಳೆಯರ ಸಿಂಗಲ್ಸ್ ವಿಭಾಗದ ತಮ್ಮ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಮಾಡಿ ವಿಶ್ವಚಾಂಪಿಯನ್ ಚೀನಾದ ಯಿಹಾನ್ ವಾಂಗ್ ರನ್ನು ಎದುರಿಸಲಿದ್ದಾರೆ. ಇದು ಸಿಂಧುಗೆ ಕಠಿಣ ಸವಾಲಾಗಿದೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್ ನಾಲ್ಕನೇ ಶ್ರೇಯಾಂಕಿತ ಆಟಗಾರರಾಗಿದ್ದಾರೆ. ವಿಶ್ವದ ನಾಲ್ಕನೇ ಶ್ರೇಯಾಂಕಿತ ಶ್ರೀಕಾಂತ್, ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಡೆನ್ಮಾರ್ಕ್ ನ ಹ್ಯಾನ್ಸ್ ಕ್ರಿಸ್ಟಿಯನ್ ವಿಟಿಂಗಸ್ ವಿರುದ್ಧ ತಮ್ಮ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡಲಿದ್ದಾರೆ. ಮತ್ತೊಬ್ಬ ಉದಯೊನ್ಮುಖ ಆಟಗಾರ ಎಚ್.ಎಸ್. ಪ್ರಣಯ್ ಗೆ ಚೀನಾದ ಟಿಯಾನ್ ಹೌವೀ ಸಿಂಗಲ್ಸ್ ನಲ್ಲಿ ಮೊದಲ ಸವಾಲಾಗಿದ್ದಾರೆ. ಪರುಪಳ್ಳಿ ಕಶ್ಯಪ್ ಸಹ ಮೊದಲ ಸುತ್ತಿನಲ್ಲಿ ಕಠಿಣ ಎದುರಾಳಿ ವಿರುದ್ಧ ಸೆಣಸಬೇಕಾಗಿದ್ದು, ಚೀನಾದ ಆರನೇ ಶ್ರೇಯಾಂಕಿತ ವಾಂಗ್ ಝೆಂಗ್‍ಮಿಂಗ್ ಸವಾಲನ್ನು ಮೆಟ್ಟಿನಿಲ್ಲಬೇಕಾಗಿದೆ.

ಪುರುಷರ ಡಬಲ್ಸ್ ನಲ್ಲಿ ಪ್ರಣವ್ ಛೋಪ್ರಾ ಮತ್ತು ಅಕ್ಷಯ್ ದಿವಾಲ್ಕರ್ ಅವರು ಕೇ ಯೂನ್ ಮತ್ತು ಕಂಗ್ ಜುನ್‍ರನ್ನು ಎದುರಿಸುವ ಮೂಲಕ ತಮ್ಮ ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ, ಮಹಿಳೆಯರ ಡಬಲ್ಸ್ ನಲ್ಲಿ ಕಾಮನ್‍ವೆಲ್ತ್ ಗೇಮ್ಸ್ ಚಾಂಪಿಯನ್ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಅವರು ಡಚ್‍ನ ಸಮಂತಾ ಬಾರ್ನಿಂಗ್ ಮತ್ತು ಐರಿಶ್ ತ್ಯಾಬೆಲಿಂಗ್ ವಿರುದ್ಧ ತಮ್ಮ ಹೋರಾಟ ಆರಂಭಿಸಲಿದ್ದಾರೆ. ಆದರೆ, ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಯಾವೊಂದು ಜೋಡಿ ಸ್ಪರ್ಧೆಗಿಳಿದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT