ಗಿಗಿ ಹ್ಯಾಡಿಡ್, ಲೂಯಿಸ್ ಹ್ಯಾಮಿಲ್ಟನ್ 
ಕ್ರೀಡೆ

ಗಾಸಿಪ್‍ಗೆ ಗುರಿಯಾದ ಲೂಯಿಸ್ ಹ್ಯಾಮಿಲ್ಟನ್

ಕಜ್ಜಿ ಹೋದ್ರೂ ಕಡಿತ ಹೋಗಲ್ಲ ಅಂತ ಅನ್ನೋ ಮಾತಿದೆ. ಹಾಗೇ, ಪ್ರೀತಿ ಹೋದ್ರೂ ಪ್ರೀತಿಸಿದವರ ಛಾಯೆ ಹೃದಯದಿಂದ ಬೇಗ ಮಾಸೋಲ್ಲ ಅನ್ನೋದು...

ಮೊನಾಕೊ: ಕಜ್ಜಿ ಹೋದ್ರೂ ಕಡಿತ ಹೋಗಲ್ಲ ಅಂತ ಅನ್ನೋ ಮಾತಿದೆ. ಹಾಗೇ, ಪ್ರೀತಿ ಹೋದ್ರೂ ಪ್ರೀತಿಸಿದವರ ಛಾಯೆ ಹೃದಯದಿಂದ ಬೇಗ ಮಾಸೋಲ್ಲ ಅನ್ನೋದು ಭಗ್ನಪ್ರೇಮಿಗಳ ಸಿದ್ಧಾಂತ. `ಇದು ಹೃದಯಗಳ ವಿಷಯ....' ಅಂತ ಸುಮ್ಮನಿರಬಹುದು.

ಆದರೆ, ಕೆಲವರಿರುತ್ತಾರೆ. ವರ್ಷಗಳಿಂದ ಪ್ರೀತಿಸಿ, ಜೊತೆಯಲ್ಲಿ ಸಂಸಾರ ಮಾಡಿಯೂ ಆಕೆಯಿಂದ ದೂರವಾದ ವಾರದಲ್ಲೇ ಮತ್ತೊಬ್ಬಳನ್ನು ಹುಡುಕಿಕೊಳ್ಳುತ್ತಾರೆ. ಅಂಥವರ ಪಟ್ಟಿಗೆ ಹೊಸ ಸೇರ್ಪಡೆ ಫಾರ್ಮುಲಾ ಒನ್ ಆಟಗಾರ ಲೂಯಿಸ್ ಹ್ಯಾಮಿಲ್ಟನ್.

ಮೊನ್ನೆ ಭಾನುವಾರ ನಡೆದ ಮೊನಾಕೊ ಜಿಪಿ ಸಂದರ್ಭದಲ್ಲಿ ಈ ವಿಶ್ವ ಚಾಂಪಿಯನ್, ಆಸ್ಟ್ರೇಲಿಯಾದ ಗಾಯಕಿ ಗಿಗಿ ಹ್ಯಾಡಿಡ್ ಜೊತೆ ಸುತ್ತಾಡಿದ್ದು ಈಗ ಗುಟ್ಟಾಗೇನೂ ಉಳಿದಿಲ್ಲ. ಎನ್‍ಡಿಟಿವಿ ಈ ಬಗ್ಗೆ ವರದಿ ಮಾಡಿದೆ. ಈಕೆ ಬರೀ ಸ್ನೇಹಿತೆಯೋ ಅಥವಾ ಪ್ರೇಯಸಿಯೋ ಎನ್ನುವುದು ಬಹಿರಂಗವಾಗಬೇಕಷ್ಟೇ.

ಅದಿರಲಿ, ಕಳೆದ ಆರು ವರ್ಷಗಳಿಂದ `ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ' ಎಂಬಂತೆ ಅನ್ಯೋನ್ಯವಾಗಿದ್ದ ಗಾಯಕಿ ನಿಕೋಲೆ ಶೆರಿಂಜರ್ ಅವರನ್ನು ಕಳೆದ ವಾರವಷ್ಟೇ ಹ್ಯಾಮಿಲ್ಟನ್ ದೂರ ಮಾಡಿಕೊಂಡಿದ್ದರು. ಅದಾಗಿ, ವಾರದೊಳಗೆ ಮತ್ತೊಬ್ಬಳ ಜೊತೆ ಸುತ್ತಾಡುತ್ತಿದ್ದಾರೆ. ಇದು ಈಗ ಹಲವರ ಗಮನ ಸೆಳೆದಿದ್ದು ಮಾಧ್ಯಮಗಳಲ್ಲಿ ಗಾಸಿಪ್ ಪ್ರಿಯರ ಆಹಾರವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?