ಬ್ರೆಟ್ ಲೀ 
ಕ್ರೀಡೆ

ಸೌರವ್ ಗಂಗೂಲಿ ಕ್ರಿಕೆಟ್ ಜ್ಞಾನ ಟೀಂ ಇಂಡಿಯಾಗೆ ಸಿಗಲಿ

ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಟೀಂ ಇಂಡಿಯಾಗೆ ತರಬೇತುದಾರರಾಗಿ ನೇಮಕಗೊಂಡರೆ ಅದು ತಂಡಕ್ಕೆ ಹೆಚ್ಚು ಅನುಕೂಲ ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ತಿಳಿಸಿದ್ದಾರೆ....

ಮೆಲ್ಬರ್ನ್ : ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಟೀಂ ಇಂಡಿಯಾಗೆ ತರಬೇತುದಾರರಾಗಿ ನೇಮಕಗೊಂಡರೆ ಅದು ತಂಡಕ್ಕೆ ಹೆಚ್ಚು ಅನುಕೂಲ ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ತಿಳಿಸಿದ್ದಾರೆ, ಕ್ರಿಕೆಟ್ ಬಗ್ಗೆ ಅವರಲ್ಲಿರುವ ಅಪಾರ ಜ್ಞಾನದಿಂದ ಹಾಗೂ ಮಾರ್ಗದರ್ಶನದಿಂದ ಟೀಂ ಇಂಡಿಯಾ ಅತ್ಯುತ್ತಮ ತಂಡವಾಗಿ ಹೊರಹೊಮ್ಮಬಲ್ಲದು ಎಂದು ಅವರು ತಿಳಿಸಿದ್ದಾರೆಂದು ಪತ್ರಿಕೆಯೊಂದು ವರದಿ ಮಾಡಿದೆ.

ಈ ಹಿಂದೆ ಟೀಂ ಇಂಡಿಯಾ ಕೋಚ್ ಆಗಿದ್ದ ಡಂಕನ್ ಪ್ಲೆಚರ್ ಅವರ ಅವಧಿಯು ಇದೇ ವರ್ಷ ನಡೆದಿದ್ದ ವಿಶ್ವಕಪ್ ನೊಂದಿಗೆ ಮುಕ್ತಾಯಗೊಂಡಿದೆ. ಹಾಗಾಗಿ ಸದ್ಯಕ್ಕೆ ಬ್ಲೂ ಬಾಯ್ಸ್ ತಂಡದ ತರಬೇತುದಾರರ ಸ್ಥಾನ ಖಾಲಿ ಇದೆ.ಈ ಸ್ಥಾನಕ್ಕೆ ಗಂಗೂಲಿ ಅವರು ನೇಮಕಗೊಳ್ಳುತ್ತಾರೆ ಎಂಬ ವದಂತಿಗಳು ಕೆಲ ದಿನಗಳ ಹಿಂದೆ ಸುಳಿದಾಡಿದ್ದವು. ಈ ಹಿನ್ನೆಲೆಯಲ್ಲಿ ಬ್ರೆಟ್ ಲೀ ಅವರು ಈ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಕ್ರಿಕೆಟ್ ನ ಮೂರು ಮಾದರಿಗಳಾದ ಏಕದಿನ, ಹಾಗೂ ಟಿ 20 ಪಂದ್ಯಗಳಲ್ಲಿ ಸಾಕಷ್ಟು ಬಾರಿ ಆಡಿ ಅನುಭವ ಹೊಂದಿರುವ ಅವರು ಈ ಹಿಂದೆ ಟೀಂ ಇಂಡಿಯಾ ನಾಯಕನಾಗಿಯೂ ಉತ್ತಮವಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಕ್ರಿಕೆಟ್ ನಲ್ಲಿ ಅವರು ಗಳಿಸಿರುವ ಜ್ಞಾನದ ಜೊತೆಗೆ ಅವರು ನಾಯಕರಾಗಿ  ಹಿಂದೊಮ್ಮೆ ತಂಡವನ್ನು ಮುನ್ನಡೆಸಿದ್ದ ಅನುಭವ ಅವರನ್ನು ಮತ್ತಷ್ಟು ಪರಿಪಕ್ವವಾಗಿಸಿದೆ. ಈ ಹಿನ್ನೆಲೆಯಲ್ಲಿ ಗಂಗೂಲಿ ಅವರು ಟೀಂ ಇಂಡಿಯಾ ತರಬೇತುದಾರರಾದರೇ ತಂಡಕ್ಕೆ ಹೆಚ್ಚು ಉಪಯೋಗವಾಗುತ್ತದೆ ಎಂದು ಬ್ರೆಟ್ ಲೀ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತೈಲ ಖರೀದಿಸುವುದು ಅಥವಾ ಖರೀದಿಸದಿರುವುದು ಉಕ್ರೇನ್ ಯುದ್ಧವನ್ನು ಪರಿಹರಿಸುವುದಿಲ್ಲ: ಕೈವ್‌ನಲ್ಲಿ ರಾಜತಾಂತ್ರಿಕತೆಗೆ EAM ಜೈಶಂಕರ್ ಕರೆ

3 ದಿನಗಳ ವಿಧಾನಮಂಡಲ ಅಧಿವೇಶನ: ಬರ, ಕಸ್ತೂರಿ ರಂಗನ್ ವರದಿ ಬಗ್ಗೆ ಮಹತ್ವದ ಚರ್ಚೆ

ಸತತ ನಷ್ಟದಿಂದ ಚೇತರಿಕೆ ಕಂಡ ಚಿನ್ನದ ಬೆಲೆ, ಈಗ 10 ಗ್ರಾಂ ದರ ಎಷ್ಟು ಗೊತ್ತಾ?

KPSC ಹಗರಣ: ಮೊದಲ ತಲೆದಂಡ, IAS ಜ್ಞಾನೇಂದ್ರ ಕುಮಾರ್ ಅಮಾನತು

ಮಹಿಳಾ PSIಗೆ ಕಪಾಳಮೋಕ್ಷ ಪ್ರಕರಣ: ಬಿಜೆಪಿ ಶಾಸಕ ಸುರೇಶ್‌ಗೌಡ ಪುತ್ರಿಗೆ ಕೋರ್ಟ್ ಶಾಕ್, ಜಾಮೀನು ಅರ್ಜಿ ತಿರಸ್ಕೃತ