ಸೆಪ್ ಬ್ಲಾಟರ್ 
ಕ್ರೀಡೆ

ಬ್ಲಾಟರ್ ಮತ್ತೆ ಫಿಫಾ ಲೀಡರ್

ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಯ (ಫಿಫಾ) ಹಾಲಿ ಅಧ್ಯಕ್ಷ ಸೆಪ್ ಬ್ಲಾಟರ್, ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ. ಶುಕ್ರವಾರ...

ಜೂರಿಚ್: ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಯ (ಫಿಫಾ) ಹಾಲಿ ಅಧ್ಯಕ್ಷ ಸೆಪ್ ಬ್ಲಾಟರ್, ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ. ಶುಕ್ರವಾರ ನಡೆದ ಫಿಫಾದ 65ನೇ ವಾರ್ಷಿಕ ಅಧಿವೇಶನದ ವೇಳೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ತಮ್ಮ ಪ್ರತಿಸ್ಪರ್ಧಿ  ಜೋರ್ಡಾನ್‍ನ ಪ್ರಿನ್ಸ್ ಅಲಿ ಬಿನ್ ಅಲ್ -ಹುಸೇನ್ ಅವರನ್ನು 60 ಮತಗಳಿಂದ ಸೋಲಿಸಿ ಸತತ ಐದನೇ ಅವಧಿಗೆ ಪುನರಾಯ್ಕೆಗೊಂಡಿದ್ದಾರೆಂದು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಮತದಾನದಲ್ಲಿ ಒಟ್ಟು 209 ಫಿಫಾ ಸದಸ್ಯ ರಾಷ್ಟ್ರಗಳು ಪಾಲ್ಗೊಂಡಿದ್ದವು. ಒಟ್ಟು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಮೊದಲ ಹಂತದ ಮತದಾನ ಎಣಿಕೆಯಲ್ಲಿ ಬ್ಲಾಟರ್ ಅವರಿಗೆ 133 ಮತಗಳು ಬಂದರೆ, ಪ್ರಿನ್ಸ್ ಗೆ
73 ಮತಗಳು ಲಭ್ಯವಾದವು. ಆಗಲೇ ಪ್ರಿನ್ಸ್ ಅವರ ಸೋಲು ಖಚಿತವಾಗಿತ್ತು. ಮೊದಲ ಸುತ್ತಿನ ಎಣಿಕೆಯಲ್ಲೇ ಫಲಿತಾಂಶ ಬಹುತೇಕ ನಿರ್ಧಾರವಾಗಿತ್ತು. ಹಾಗಾಗಿ, 2ನೇ ಸುತ್ತಿನ ಮತ ಎಣಿಕೆ ಬಾಕಿಯಿದ್ದಾಗಲೇ ಪ್ರಿನ್ಸ್ ಅವರು ಚುನಾವಣೆ ಪ್ರಕ್ರಿಯೆಯಿಂದ ಹೊರನಡೆಯಲು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ, ಎರಡನೇ ಸುತ್ತಿನ ಮತ ಎಣಿಕೆ ಸಾಧ್ಯವಾಗಲಿಲ್ಲ. ನಂತರ, ಬ್ಲಾಟರ್ ಅವರನ್ನು ವಿಜಯಿ ಎಂದು ಘೋಷಿಸಲಾಯಿತು. 1999ರಿಂದ ಈವರೆಗೆ ಅಧ್ಯಕ್ಷರಾಗಿದ್ದ ಬ್ಲಾಟರ್ ಈಗ ಸತತ 5ನೇ ಅವಧಿಗೆ ಫಿಫಾ ಅಧ್ಯಕ್ಷಗಿರಿಗೆ ಏರಿದ್ದಾರೆ.

ಅಡಗಿತು ವಿರೋಧಿಗಳ ಸದ್ದು: ಭ್ರಷ್ಟಾಚಾರ, ಮ್ಯಾಚ್ ಫಿ ಕ್ಸಿಂಗ್ ಸೇರಿದಂತೆ ಹಲವಾರುಹಗರಣಗಳ ಕೂಪವಾಗಿದ್ದ ಪಿಫಾ ನ ಅಧ್ಯಕ್ಷರಾಗಿದ್ದ ಬ್ಲಾಟರ್ ಅವರ ಪದಚ್ಯುತಿಗೆ
ಹಲವಾರು ದೇಶಗಳಲ್ಲಿನ ಫುಟ್ಬಾಲ್ ಸಂಸ್ಥೆಗಳು ಆಗ್ರಹಿಸಿದ್ದವು. ಅವುಗಳಲ್ಲಿ
ಅಮೆರಿಕ ಹಾಗೂ ಯೂರೋಪ್ ರಾಷ್ಟ್ರಗಳ ಫುಟ್ಬಾಲ್ ಸಂಸ್ಥೆಗಳು ಪ್ರಮುಖ. ಈ ಎಲ್ಲಾ ವಿರೋಧಗಳ ನಡುವೆಯೂ ಬ್ಲಾಟರ್ ಜಯಶಾಲಿಯಾಗಿದ್ದು ವಿಶೇಷ. ಏಷ್ಯಾ ರಾಷ್ಟ್ರಗಳಲ್ಲಿನ ಫುಟ್ಬಾಲ್ ಸಂಸ್ಥೆಗಳು ಹಾಗೂ ಇತರ ಪುಟ್ಟಪುಟ್ಟ ದೇಶಗಳ ಫುಟ್ಬಾಲ್ ಸಂಸ್ಥೆಗಳು ಬ್ಲಾಟರ್ ಬೆನ್ನಿಗೆ ನಿಂತಿದ್ದರಿಂದ ಅವರೇ ಜಯಶಾಲಿಯಾದರು.
ಎರಡು ತಾಸುಗಳ ಪ್ರಕ್ರಿಯೆ: ಇಡೀಚುನಾವಣಾ ಪ್ರಕ್ರಿಯೆ ಮುಗಿದು ವಿಜಯಿಯನ್ನು ಘೋಷಿಸಲು ಸುಮಾರು 2 ಗಂಟೆ ಕಾಯಬೇಕಾಯಿತು. ಮತ ಚಲಾಯಿಸಬೇಕಿದ್ದ 209 ರಾಷ್ಟ್ರಗಳ ಫುಟ್ಬಾಲ್ ಸಂಸ್ಥೆಗಳ ರಾಯಭಾರಿಗಳನ್ನು ಪ್ರತ್ಯೇಕವಾಗಿ ವೇದಿಕೆ ಮೇಲೆ ಆಮಂತ್ರಿಸಿ ಮತದಾನ ಮಾಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರ, ಮತ ಪೆಟ್ಟಿಗೆಯಲ್ಲಿದ್ದ ಚೀಟಿಗಳನ್ನು ಹರಡಿ, ಕೈಯ್ಯಲ್ಲಿ ಎಣಿಕೆ  ಮಾಡಿದ ನಂತರವಿಜಯಿಯನ್ನು ಘೋಷಿಸಲಾಯಿತು.
ಹುಸಿ ಬಾಂಬ್ ಬೆದರಿಕೆ: ಫಿಫಾ ಅಧಿವೇಶನ ಆಯೋಜನೆಗೊಂಡಿದ್ದ ಜೂರಿಚ್ ಹಾಲೆನ್ ಕ್ರೀಡಾಂಗಣಕ್ಕೆ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಕರೆಯೊಂದು ಎಲ್ಲರಲ್ಲೂ ಗಾಬರಿಯನ್ನುಂಟು ಮಾಡಿತ್ತು. ನಂತರ, ಬಾಂಬ್ ನಿಷ್ಕ್ರಿಯ ದಳದೊಂದಿಗೆ ಇಡೀ ಕ್ರೀಡಾಂಗಣವನ್ನು ಜಾಲಾಡಿದರು. ಆದರೆ, ಎಲ್ಲೂ ಬಾಂಬ್ ಪತ್ತೆಯಾಗಲಿಲ್ಲ. ಬಾಂಬ್ ಕರೆ ಹುಸಿಯೆಂಬುದು ಸಾಬೀತಾದ ನಂತರ ಸಭೆ ನಡೆಸಲು ಫಿಫಾಗೆ ಅನುವು ಮಾಡಿ
ಕೊಡಲಾಯಿತು.
`ಪ್ಯಾಲೆಸ್ತೀನ್' ಗಲಾಟೆ: ಸಭೆಯ ನಡೆಯುವ ಸಂದರ್ಭದಲ್ಲಿ, ಪ್ಯಾಲೆಸ್ತೀನ್ ಫುಟ್ಬಾಲ್
ಸಂಸ್ಥೆಯ ರಾಯಭಾರಿಯೊಬ್ಬರು ತಮ್ಮ ಆಸನದಿಂದ ಎದ್ದು ನಿಂತು ಇಸ್ರೇಲ್
ಫುಟ್ಬಾಲ್ ಸಂಸ್ಥೆಯನ್ನು ನಿಷೇಧಗೊಳಿ ಸಬೇಕೆಂದು ಆಗ್ರಹಿಸಿ ಘೋಷಣೆಗಳನ್ನು
ಕೂಗಿದರು. ಆನಂತರ ನಡೆದ ಬೆಳವಣಿಗೆಗಳಲ್ಲಿ, ಇಸ್ರೇಲ್ ಫುಟ್ಬಾಲ್ ಸಂಸ್ಥೆಯನ್ನು ನಿಷೇಧಗೊಳಿಸಲು ಆಗ್ರಹಿಸಿ ತಾನು ಮಂಡಿಸಬೇಕಿದ್ದ ಗೊತ್ತುವಳಿಯನ್ನು ಪ್ಯಾಲೆಸ್ತೀನ್ ಫುಟ್ಬಾಲ್ ಸಂಸ್ಥೆ ಕೈಬಿಟ್ಟಿತು.
ಬ್ರೆಜಿಲ್ ತನಿಖೆ: ಸ್ವಿಡ್ಜರ್ಲೆಂಡ್‍ನ ಜೂರಿಚ್ ನಲ್ಲಿ ಬುಧವಾರ ಬಂಧನಕ್ಕೊಳಗಾದ ಪಿಫಾ ಅಧಿಕಾರಿ ಪ್ರಕರಣವನ್ನು ಬ್ರೆಜಿಲ್ ಫುಟ್ಬಾಲ್ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ (ಸಿಬಿಎಫ್) ಗಂಭೀರವಾಗಿ ಪರಿಗಣಿಸಿದೆ.
ಬಂಧಿತ ಅಧಿಕಾರಿಗಳಲ್ಲಿ ಸಿಬಿಎಫ್  ಅಧ್ಯಕ್ಷ ಜೋಸ್ ಮಾರಿಯಾ ಮಾರ್ಸಿನ್ ಅವರೂ ಒಬ್ಬರಾಗಿರುವುದರಿಂದ, ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಅಲ್ಲಿನ ಸರ್ಕಾರ ಮುಂದಾಗಿದೆ.
ಈ ಬಗ್ಗೆ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬ್ರೆಜಿಲ್ ಸಂಸತ್ ಸದಸ್ಯ ಹಾಗೂ ರಾಷ್ಟ್ರೀಯ ಫುಟ್ಬಾಲ್ ತಂಡದ ಮಾಜಿ ಆಟಗಾರ ರೊಮಾರಿಯೋ ಅವರು, ಮಾರ್ಸಿನ್ ಅವರ ಬಂಧನ ಹಿನ್ನೆಲೆಯಲ್ಲಿ, ಸಿಬಿಎಫ್್ನಲ್ಲಿ ನಡೆದಿರಬಹುದಾದ ಭ್ರಷ್ಟಾಚಾರಗಳ ಬಗ್ಗೆಯೂ ತನಿಖೆ ನಡೆಸ ಲಾಗುವುದು ಎಂದು ಹೇಳಿರುವುದಾಗಿ, ದ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.
`ಜಗತ್ತಿನ ಪ್ರಮುಖ ಕ್ರೀಡಾ ಸಂಸ್ಥೆಯೊಂದರಲ್ಲಿ ಅಡಗಿದ್ದ ಕಳ್ಳಕಾಕರ ಬಂಧನವಾಗಿರುವುದು ಸಂತಸದ ವಿಚಾರ' ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್