ಪೂವಮ್ಮ 
ಕ್ರೀಡೆ

ಏಷ್ಯನ್ ಅಥ್ಲೆಟಿಕ್ಸ್ ಗೆ ತಂಡ ಪ್ರಕಟ ಪೂವಮ್ಮ, ವಿಕಾಸ್‍ಗೌಡ ಆಯ್ಕೆ

ಮುಂದಿನ ತಿಂಗಳು ಚೀನಾದ ವುಹಾನ್ನಲ್ಲಿ ನಡೆಯಲಿರುವ 21ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ಗಾಗಿ ತೆರಳಲಿರುವ ಭಾರತ ತಂಡವನ್ನು...

ನವದೆಹಲಿ: ಮುಂದಿನ ತಿಂಗಳು ಚೀನಾದ ವುಹಾನ್ನಲ್ಲಿ ನಡೆಯಲಿರುವ 21ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ಗಾಗಿ ತೆರಳಲಿರುವ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಎಂ.ಆರ್. ಪೂವಮ್ಮ ಅವರು ಸ್ಥಾನ ಪಡೆದಿದ್ದಾರೆ.

ಒಟ್ಟು 47 ಕ್ರೀಡಾಳುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಜೂ. 3ರಿಂದ 7ರವರೆಗೆ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಈ ತಂಡ ಪಾಲ್ಗೊಳ್ಳಲಿದೆ ಎಂದು ಐಬಿಎನ್ ಲೈವ್ ಜಾಲತಾಣ ವರದಿ ಮಾಡಿದೆ. ಭಾರತದ 4ಗಿ 400 ಮೀ. ರಿಲೇ ವಿಭಾಗದಲ್ಲಿ ಪೂವಮ್ಮ ಅವರು ಆಯ್ಕೆಯಾಗಿದ್ದು, ಈ ತಂಡದಲ್ಲಿ ಟಿಂಟು ಲೂಕಾ, ದೇಬಶ್ರೀ ಮಜುಂದಾರ್, ಜಿಸ್ನಾ ಮ್ಯಾಥ್ಯೂ, ಅಂಜು ಥಾಮಸ್ ಅವರಿದ್ದಾರೆ.

ಅಕ್ಕುಂಜಿ ಇಲ್ಲ: ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಯೋಜನೆ (ಟಿಒಪಿ)ಗೆ ಆಯ್ಕೆಯಾಗಿರುವ ಕರ್ನಾಟಕದ ಅಶ್ವಿನಿ ಅಕ್ಕುಂಜಿ ಹಾಗೂ ಮಂದೀಪ್ ಕೌರ್, ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಐಎಎಫ್ ಮುಖ್ಯಸ್ಥ ಮನೀಶ್ ಕುಮಾರ್, ಅಶ್ವಿನಿ ಅಕ್ಕುಂಜಿ, ಮಂದೀಪ್ ಕೌರ್, ಸಿನಿ ಜೋಸ್, ಪ್ರಿಯಾಂಕಾ ಪನ್ವಾರ್, ಜೌನಾ ಮರ್ಮು ಅವರನ್ನು ಒಲಿಂಪಿಕ್ಸ್ಗಾಗಿ ತಯಾರಿಗೊಳಿಸಲಾಗುತ್ತಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್