ಭಾರತ ಫುಟ್ಬಾಲ್ ತಂಡ 
ಕ್ರೀಡೆ

ಗುಹಾಮ್ ವಿರುದ್ಧ ಪಂದ್ಯಕ್ಕೆ ಭಾರತ ತಂಡ ಪ್ರಕಟ

ಇದೇ ತಿಂಗಳು ತವರಿನ ಅಂಗಣದಲ್ಲಿ ನಡೆಯಲಿರುವ ಗುಹಾಮ್ ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಕ್ಕೆ ತಂಡದ ಕೋಚ್ ಸ್ಟೀಫನ್ ಕಾನ್ಸ್ ಟಾಂಟೀನ್...

ಇದೇ ತಿಂಗಳು ತವರಿನ ಅಂಗಣದಲ್ಲಿ ನಡೆಯಲಿರುವ ಗುಹಾಮ್ ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಕ್ಕೆ ತಂಡದ ಕೋಚ್ ಸ್ಟೀಫನ್ ಕಾನ್ಸ್ ಟಾಂಟೀನ್ ಭಾರತ ತಂಡವನ್ನು ಪ್ರಕಟಿಸಿದ್ದಾರೆ.

ಭಾರತ-ಗುವಾಮ್ ನಡುವಿನ ಪಂದ್ಯ ಬೆಂಗಳೂರಿನ ಶ್ರೀಕಂಠೀರವ ಸ್ಟೇಡಿಯಂನಲ್ಲಿ ನ.12 ರಂದು ನಡೆಯಲಿದೆ. ಜೂನ್‌ನಲ್ಲಿ ನಡೆದ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಗುವಾಮ್ ವಿರುದ್ಧ ಅದರದೇ ನೆಲದಲ್ಲಿ 1-2 ರಿಂದ ಸೋಲುವ ಮೂಲಕ ಮುಖಭಂಗ ಅನುಭವಿಸಿತ್ತು.

 ‘ಡಿ’ ಗುಂಪಿನಲ್ಲಿ ಈ ತನಕ ಆಡಿರುವ ಎಲ್ಲ ಐದೂ ಪಂದ್ಯಗಳನ್ನು ಸೋತಿರುವ ಭಾರತ ಈಗಾಗಲೇ ಫೈನಲ್ ಸುತ್ತಿಗೆ ಅರ್ಹತೆ ಪಡೆಯುವ ಅವಕಾಶ ಕಳೆದುಕೊಂಡಿದೆ. ಗುಂಪು ಹಂತದಲ್ಲಿ ವಿಜೇತರಾಗುವ 8 ತಂಡಗಳು ಹಾಗೂ ನಾಲ್ಕು ಶ್ರೇಷ್ಠ ರನ್ನರ್ಸ್‌ಅಪ್ ತಂಡಗಳು(ಒಟ್ಟು 12 ತಂಡಗಳು) 2018ರ ಫಿಫಾ ವಿಶ್ವಕಪ್ ಹಾಗೂ 2019ರ ಎಎಫ್‌ಸಿ ಏಷ್ಯನ್ ಕಪ್ ಫೈನಲ್ಸ್‌ನ ಅಂತಿಮ ಅರ್ಹತಾ ಸುತ್ತಿಗೆ ತೇರ್ಗಡೆಗೊಳ್ಳಲಿದೆ.

ಭಾರತ ತಂಡ:

ಗೋಲ್‌ಕೀಪರ್‌ಗಳು: ಸುಬ್ರತಾ ಪಾಲ್, ಗುರುಪ್ರೀತ್ ಸಿಂಗ್ ಸಂಧು, ಕರಣ್‌ಜೀತ್ ಸಿಂಗ್,ಲಕ್ಷ್ಮೀಕಾಂತ್ ಕಟ್ಟಿಮನಿ.

ಡಿಫೆಂಡರ್‌ಗಳು: ಅರ್ನಬ್ ಮಂಡಳ್, ಸಂದೇಶ್ ಜಿಂಗಾನ್, ಐಬಾರ್ಲಂಗ್ ಖೋಗ್‌ಜೀ, ಲಾಲ್‌ಚುಯಾನ್‌ಮಾವಿಯಾ, ನಾರಾಯಣ್ ದಾಸ್, ಪ್ರೀತಂ ಕೊಟಲ್, ಅಗಿಸ್ಟೈನ್ ಫೆರ್ನಾಂಡಿಸ್, ರಾಬಿನ್ ಗುರಂಗ್.

ಮಿಡ್‌ಫೀಲ್ಡರ್‌ಗಳು: ಯುಗೆನ್ಸನ್ ಲಿಂಗ್ಡೊ, ಕೇವಿನ್ ಲೊಬೊ, ಸ್ನೇಹಜ್ ಸಿಂಗ್, ಪ್ರಣಯ್ ಹಲ್ದರ್, ಫ್ರಾನ್ಸಿಸ್ ಫೆರ್ನಾಂಡಿಸ್, ರಾವ್ಲಿನ್ ಬಾರ್ಗೆಸ್, ರಾಮಿಯೊ ಫೆರ್ನಾಂಡಿಸ್, ಬಿಕಾಶ್ ಜೈರು, ಹರ್ಮನ್‌ಜೋತ್ ಸಿಂಗ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನೀವು ಎಷ್ಟೇ ಕಿರುಚಾಡಿದ್ರು, ನನ್ನ ಸಮಾಧಿ ತೋಡಲು ಸಾಧ್ಯವಿಲ್ಲ'; ರಾಜ್ಯಸಭೆಯಲ್ಲಿ ವಿಪಕ್ಷಗಳ ವಿರುದ್ಧ ಮೋದಿ ಗುಡುಗು!

ವಾಷಿಂಗ್ ಟನ್ ಪೋಸ್ಟ್ ನ 300 ಪತ್ರಕರ್ತರ ಉದ್ಯೋಗ ಕಡಿತ; ನೌಕರಿ ಕಳೆದುಕೊಂಡ ಪುತ್ರನ ಬಗ್ಗೆ ಶಶಿ ತರೂರ್ ಹೇಳಿದ್ದೇನು?

Video: ಸ್ಪೀಕರ್ ಹಿಂದೆ ಅಡಗಿಕೊಂಡ ಪ್ರಧಾನಿ ಮೋದಿ; ಬೆದರಿಕೆ ಹೇಳಿಕೆ 'ಸಂಪೂರ್ಣ ಸುಳ್ಳು' ಎಂದ ಕಾಂಗ್ರೆಸ್

ಸತ್ಯಕ್ಕೆ ಹೆದರಿ, ಸುಳ್ಳಿನಲ್ಲಿ ಆಶ್ರಯ: ರಾಜ್ಯಸಭೆಯಲ್ಲಿನ ಪ್ರಧಾನಿ ಭಾಷಣದ ವಿರುದ್ಧ ರಾಹುಲ್ ಕಿಡಿ!

ಹೊಸ ವ್ಯಾಪಾರ ಒಪ್ಪಂದ ಬೆನ್ನಲ್ಲೇ, ಡೊನಾಲ್ಡ್ ಟ್ರಂಪ್ ಗೆ ದೊಡ್ಡ ಶಾಕ್ ನೀಡಿದ ಭಾರತ!

SCROLL FOR NEXT