ಆರ್. ಅಶ್ವಿನ್ 
ಕ್ರೀಡೆ

ದಕ್ಷಿಣ ಆಫ್ರಿಕಾಗೆ ಅಶ್ವಿನ್ ಸವಾಲು : ಡುಪ್ಲೆಸಿಸ್

ಮುಂಬರುವ ಭಾರತ ವಿರುದ್ಧದ ಟೆಸ್ಟ ಸರಣಿಯಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ದ.ಆಫ್ರಿಕಾಗೆ ಪ್ರಬಲ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ...

ಮೊಹಾಲಿ: ಮುಂಬರುವ  ಭಾರತ ವಿರುದ್ಧದ ಟೆಸ್ಟ ಸರಣಿಯಲ್ಲಿ  ಆಫ್ ಸ್ಪಿನ್ನರ್  ರವಿಚಂದ್ರನ್ ಅಶ್ವಿನ್ ದ.ಆಫ್ರಿಕಾಗೆ ಪ್ರಬಲ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ.

ಗುರುವಾರ ಆರಂಭವಾಗಲಿರುವ ಮೊದಲ ಟೆಸ್ಟ್ ಹಿನ್ನೆಲೆಯಲ್ಲಿ ಇಲ್ಲಿನ ಐಎಸ್ ಬಿಂದ್ರಾ ಪಿಸಿಎ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ತಂಡ ಅಭ್ಯಾಸ ನಡೆಸಿದ ಬಳಿಕ ಮಾತನಾಡಿದ ಡು'ಪ್ಲೆಸಿಸ್, ಪಿಚ್ ಆತಿಥೇಯರ ಪರವಾಗಿದೆ ಎಂದು ನಿರೀಕ್ಷಿಸಿದ್ದೀರ ಎಂಬ ಪ್ರಶ್ನೆಗೆ ''ಪಂದ್ಯದ ಮೊದಲ ದಿನ ಚೆಂಡು ಯಾವ ರೀತಿ ಸ್ಪಿನ್ ಆಗಲಿದೆ ಎಂದು ನಿರೀಕ್ಷಿಸಿದ್ದೇವೆ. ನಂತರ ಆದರ ಬಗ್ಗೆ ಯೋಜನೆ ರೂಪಿಸಲಿದ್ದೇವೆ. ನನ್ನ ಪ್ರಕಾರ ಸದ್ಯ ಭಾರತ ಸಾಕಷ್ಟು ಆಕ್ರಮಣಕಾರಿಯಾಗಿದೆ. ಪಂದ್ಯದ ಮೂರು, ನಾಲ್ಕು ಮತ್ತು ಐದನೇ ಸಾಮಾನ್ಯವಾಗಿ ಸ್ಪಿನ್‌ಗೆ ಹೆಚ್ಚು ನೆರವಾಗಲಿದೆ. ಆದರೆ ಮೊದಲ ದಿನ ಈ ಅವರು ಹೇಗೆ ಆರಂಭಿಸಲಿದ್ದಾರೆ ಎಂಬುದನ್ನು ಕಾದು ನೋಡಲಿದ್ದೇವೆ,'' ಎಂದು ಹೇಳಿದ್ದಾರೆ.

ಅಶ್ವಿನ್ ಅತ್ಯುತ್ತಮ ಸ್ಪಿನ್ನರ್ ಆದರೆ ನನ್ನ ಪ್ರಕಾರ 20ಟಿಯಲ್ಲಿ ನಾವು ಉತ್ತಮವಾಗಿ ಆಡಿದ್ದೇವೆ. ಆದರೆ ಇದು ಟೆಸ್ಟ್ ಕ್ರಿಕೆಟ್. ಆದಾಗ್ಯೂ ಅವರು ಹೆಚ್ಚು ಅಪಾಯಕಾರಿಯಾಗಬಹುದು, ಅಶ್ವಿನ್ ಪ್ರಮುಖ ಅಪಾಯಕಾರಿ ಬೌಲರ್. ಆದರೆ ನಮ್ಮ ಯೋಜನೆಗಳು ನಿಜವಾಗಿಯೂ ಅದ್ಬುತವಾಗಿವೆ,''ಎಂದು ಫಾಫ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ebola ಭೀತಿ: ಏರ್ ಲೈನ್ ಗಳಿಗೆ ಡಿಜಿಸಿಎ SOP ಬಿಡುಗಡೆ

ಭಾರತ ಇರಾನ್ ನ IRGC ಯನ್ನು ಉಗ್ರ ಸಂಘಟನೆಯೆಂದು ಘೋಷಿಸಲಿ: ಇಸ್ರೇಲ್ ಒತ್ತಾಯ

ಟ್ರಂಪ್ ಭಾರತವನ್ನ ನರಕದ ಕೂಪ ಅಂದಿದ್ರಲ್ಲಾ ಆ ಬಗ್ಗೆ ಏನ್ ಹೇಳ್ತಿರಾ?; ಪತ್ರಕರ್ತನ ಪ್ರಶ್ನೆಗೆ ರುಬಿಯೊ ಗಲಿಬಿಲಿ!

CM ಬದಲಾವಣೆ ಚರ್ಚೆ ಮಧ್ಯೆ ಸಿದ್ದರಾಮಯ್ಯ ಸಂಪುಟದಲ್ಲಿ ಮಹತ್ವದ ಬದಲಾವಣೆ

ಗುಲ್ಮಾರ್ಗ್: ಕೈಕೊಟ್ಟ ವಿಶ್ವದ 2ನೇ ಅತಿ ಎತ್ತರದ ಕೇಬಲ್ ಕಾರ್; ಆಕಾಶದಲ್ಲೇ ಸಿಲುಕಿದ 300 ಪ್ರವಾಸಿಗರು! Video ನೋಡಿ

SCROLL FOR NEXT