ಗಂಗೂಲಿ-ಸಚಿನ್(ಸಾಂದರ್ಭಿಕ ಚಿತ್ರ) 
ಕ್ರೀಡೆ

ಆಲ್ ಸ್ಟಾರ್ಸ್ ಲೀಗ್ ನಲ್ಲಿ ಪರಸ್ಪರ ಕಿಚಾಯಿಸಿದ ಸಚಿನ್, ದಾದಾ

ಆಲ್ ಸ್ಟಾರ್ಸ್ ಲೀಗ್ ಪ್ರಾರಂಭವಾಗಲು ಇನ್ನೂ ಎರಡು ದಿನಗಳು ಬಾಕಿ ಇರುವಂತೆಯೇ, ಭಾರತದ ಇಬ್ಬರು ಮಾಜಿ ಆಟಗಾರರಾದ ಸಚಿನ್ ಮತ್ತು ಗಂಗೂಲಿ ನಡುವೆ ಹಾಸ್ಯ ಪ್ರಹಸನ ಶುರುವಾಗಿದೆ.

ನವದೆಹಲಿ: ಅಮೆರಿಕದಲ್ಲಿ ಕ್ರಿಕೆಟ್ ಕ್ರೀಡೆಯ ಜನಪ್ರಿಯತೆ ಹೆಚಿಸಲು ನಡೆಯುತ್ತಿರುವ ಆಲ್ ಸ್ಟಾರ್ಸ್ ಲೀಗ್ ಪ್ರಾರಂಭವಾಗಲು ಇನ್ನೂ ಎರಡು ದಿನಗಳು ಬಾಕಿ ಇರುವಂತೆಯೇ, ಭಾರತದ ಇಬ್ಬರು ಮಾಜಿ ಆಟಗಾರರಾದ ಸಚಿನ್ ಮತ್ತು ಗಂಗೂಲಿ ನಡುವೆ ಹಾಸ್ಯ ಪ್ರಹಸನ ಶುರುವಾಗಿದೆ.
ಸಚಿನ್ ಬ್ಲಾಸ್ಟರ್ಸ್ ತಂಡದ ಪರ ಆಡಬೇಕಾದರೆ, ಇನ್ನಿಂಗ್ಸ್ ಓಪನಿಂಗ್ ಗೆ ಅವಕಾಶ ಕಲ್ಪಿಸಬೇಕು, ಇಲ್ಲದೇ ಹೋದರೆ ತಾನು ನೇರವಾಗಿ ಕೋಲ್ಕತಾ ಪ್ಲೈಟ್ ಹತ್ತಬೇಕಾಗುತ್ತದೆ ಎಂದು ಸಚಿನ್ ಗೆ ಗಂಗೂಲಿ ಧಮಕಿ ಹಾಕಿದ್ದಾರೆ. ಗಂಗೂಲಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿನ್, ದಾದಾ ಅರ್ಜಿ ಪರಿಶೀಲನೆಯಲ್ಲಿದೆ ಎಂದು ಕಿಚಾಯಿಸಿದ್ದಾರೆ.
ಅಂದಹಾಗೆ  ನವೆಂಬರ್ 7 ರಂದು ವಾರ್ನ್ ವಾರಿಯರ್ಸ್ ವಿರುದ್ಧ ಮೊದಲ ಪಂದ್ಯ ನಡೆಯಲಿದ್ದು, ಇದಕ್ಕೂ ಮುನ್ನ ಮಾತನಾಡಿರುವ ಗಂಗೂಲಿ ನಾನು ಸಚಿನ್ ತಂಡದಲ್ಲಿ ಆಡಬೇಕಿದ್ದರೆ ಇನ್ನಿಂಗ್ಸ್ ಆರಂಭಿಸಲು ಅವಕಾಶ ನೀಡಬೇಕು. ಇಲ್ಲವಾದರೆ ಕೋಲ್ಕತಾಗೆ ಮರಳುವುದಾಗಿ ತಿಳಿಸಿದ್ದೇನೆ ಅದಕ್ಕೆ ಸಚಿನ್ ಅದು ಸಾಧ್ಯವಿಲ್ಲ. ಈ ಕುರಿತ ನಿರ್ಧಾರ ನಿಧಾನವಾಗಿ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದು ಇದೊಂದು ತಮಾಷೆಯಷ್ಟೇ ಎಂದು ಹೇಳಿದ್ದಾರೆ.
ದಾದಾ ನಿಮ್ಮ ಇನಿಂಗ್ಸ್ ಆರಂಭಿಸುವ ಅರ್ಜಿ ಪರಿಶೀಲನೆಯಲ್ಲಿದ್ದು ನಿಮ್ಮ ಬ್ಯಾಟ್ ನಿಂದ ಅತ್ಯುತ್ತಮ ಆಫ್ ಡ್ರೈವ್ ಹೊರಬರುವ ನಿರೀಕ್ಷೆ ಇದೆ ಎಂದು ಸಚಿನ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT