ಪಂದ್ಯ ಮುಗಿಸಿ ಮರಳುತ್ತಿರುವ ಟೀಂ ಇಂಡಿಯಾದ ಸದಸ್ಯರು 
ಕ್ರೀಡೆ

ಮೊಹಾಲಿ ಟೆಸ್ಟ್: ಭಾರತಕ್ಕೆ 142 ರನ್‌ಗಳ ಮುನ್ನಡೆ

ದಕ್ಷಿಣ ಅಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಮುನ್ನಡೆ ಸಾಧಿಸಿದೆ. ಸ್ಪಿನ್ ಬೌಲರ್‌ಗಳಿಗೆ ಅನುಕೂಲವಾಗಿರುವ...

ಮೊಹಾಲಿ:  ದಕ್ಷಿಣ ಅಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಮುನ್ನಡೆ ಸಾಧಿಸಿದೆ. ಸ್ಪಿನ್ ಬೌಲರ್‌ಗಳಿಗೆ ಅನುಕೂಲವಾಗಿರುವ ಮೊಹಾಲಿ ಪಿಚ್‌ನಲ್ಲಿ  ದಕ್ಷಿಣ ಆಫ್ರಿಕಾವನ್ನು 184 ರನ್‌ಗಳಿಗೆ ಹಿಡಿದಿರಿಸಿದ ಟೀಂ ಇಂಡಿಯಾ ಎರಡನೇ ದಿನ ಪಂದ್ಯ ಅಂತ್ಯಗೊಂಡಾಗ 2 ವಿಕೆಟ್ ಕಳೆದುಕೊಂಡು 125 ರನ್ ದಾಖಲಿಸಿದೆ. ಮೊದಲ ಇನ್ಸಿಂಗ್ ನಲ್ಲಿ 17 ರನ್ ಮುನ್ನಡೆಯೊಂದಿಗೆ ಭಾರತವೀಗ 142 ರನ್‌ಗಳ ಮುನ್ನಡೆ ಸಾಧಿಸಿಕೊಂಡಿದೆ. 8 ವಿಕೆಟ್ ಕೈಯಲ್ಲಿದೆ. 
ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ 63 ರನ್ ಕಲೆ ಹಾಕಿದ ಚೇತೇಶ್ವರ ಪೂಜಾರ ಮತ್ತು ಒಂದು ಬೌಂಡರಿ ಬಾರಿಸಿ 11 ರನ್ ಗಳಿಸಿರುವ ನಾಯಕ ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿದ್ದಾರೆ.
ಎರಡನೇ ಇನ್ನಿಂಗ್ಸ್ ನಲ್ಲಿಯೂ ಶಿಖರ್ ಧವನ್ ಶೂನ್ಯ ಸಂಪಾದಿಸಿದಾಗ, ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕದ ಸಹಾಯದಿಂದ ಪಂದ್ಯವನ್ನು ಮೇಲೆತ್ತಿದ ಮುರಳಿ ವಿಜಯ್ 47 ರನ್ ದಾಖಲಿಸಿ ಔಟಾದರು. ಫಿಲಾಂಡರ್ ಎಸೆತಕ್ಕೆ ಧವನ್ ವಿಕೆಟ್ ಒಪ್ಪಿಸಿದರೆ,  ಇಮ್ರಾನ್ ತಾಹಿರ್ ಮುರಳಿ ವಿಜಯ್‌ರ ವಿಕೆಟ್ ಕಸಿದುಕೊಂಡರು.
ಎರಡನೇ ಇನ್ನಿಂಗ್ಸ್‌ನಲ್ಲಿ 250 ರನ್‌ಗಳಿಂತ ಹೆಚ್ಚು ರನ್ ಗಳಿಸಿದರೆ ಭಾರತಕ್ಕೆ ಹೆದರುವ ಅಗತ್ಯವೂ ಇರಲ್ಲ.  ಸ್ಪಿನ್ನರ್‌ಗಳ ಫೇವರಿಟ್ ಪಿಚ್ ಆಗಿರುವ ಮೊಹಾಲಿಯಲ್ಲಿ ಎರಡು ದಿನಗಳಲ್ಲಿ 22 ವಿಕೆಟ್ ಬಿದ್ದಿದೆ.
ಸ್ಕೋರ್ 
ಭಾರತ: 201, 125/2, ದಕ್ಷಿಣ ಆಫ್ರಿಕಾ -184
17 ರನ್ ಮುನ್ನಡೆಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿದಾಗ ಆರಂಭಿಕ ದಾಂಡಿಗ ಶಿಖರ್ ಧವನ್ ಡಕ್ ಔಟಾದರು. ತನ್ನ ಪಾದಾರ್ಪಣಾ ಪಂದ್ಯದಲ್ಲಿ ಶತಕ ಗಳಿಸಿದ್ದ ಮೊಹಾಲಿ ಅಂಗಣದಲ್ಲೇ ಧವನ್ ಸತತ ಎರಡನೇ ಬಾರಿ ಶೂನ್ಯದೊಂದಿಗೆ ಪೆವಿಲಿಯನ್‌ಗೆ ಮರಳಿದರು. ನಂತರ ವಿಜಯ್ ಮತ್ತು ಪೂಜಾರರ ಜತೆಯಾಟ ಟೀಂ ಇಂಡಿಯಾವನ್ನು ಮೇಲೆತ್ತುವಲ್ಲಿ ಸಫಲವಾಯಿತು. ಈ ಜೋಡಿ 86 ರನ್ ಗಳನ್ನು ಕಲೆ ಹಾಕಿದ್ದರು.
ಈ ಮೊದಲು 2 ವಿಕೆಟ್ ಕಳೆದುಕೊಂಡು 28 ರನ್ ಗಳಿಸಿ ಎರಡನೇ ದಿನ ಬ್ಯಾಟಿಂಗ್ ಆರಂಭಿಸಿದ ದಕ್ಷಿಣಾ ಆಫ್ರಿಕಾ ಭಾರತದ ಸ್ಪಿನ್ ದಾಳಿಗೆ ತತ್ತರಿಸಿ ಹೋಯಿತು. ದ. ಆಫ್ರಿಕಾ ನಾಯಕ ಡಿವಿಲಿಯರ್ಸ್ (63), ಹಾಷಿಂ ಆಮ್ಲ (43), ಡೀನ್ ಎಲ್‌ಗಾರ್ (37)ಗೆ ಮಾತ್ರ ಎರಡಂಕಿಯ ರನ್ ಗಳಿಸಲು ಸಾಧ್ಯವಾಯಿತು. ಎಲ್ಲ ವಿಕೆಟ್ ಕಬಳಿಸಿದ್ದು ಟೀಂ ಇಂಡಿಯಾದ ಸ್ಪಿನ್ನರ್ ಗಳೇ ಆಗಿದ್ದರು.
ರವಿಚಂದ್ರನ್ ಅಶ್ವಿನ್  5 ವಿಕೆಟ್ ಕಬಳಿಸಿದಾಗ, ರವೀಂದ್ರ ಜಡೇಜಾ ಮೂರು ಮತ್ತು ಅಮಿತ್ ಮಿಶ್ರಾ ಎರಡು ವಿಕೆಟ್ ಗಳಿಸಿಕೊಂಡರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!