ಶೊಯೇಬ್ ಮಲಿಕ್ 
ಕ್ರೀಡೆ

ಶೋಯೆಬ್ ಗೆ ಜಯದ ವಿದಾಯ:ಆಂಗ್ಲರ ವಿರುದ್ಧ ಟೆಸ್ಟ್ ಸರಣಿ ಗೆದ್ದ ಪಾಕಿಸ್ತಾನ

ತಮ್ಮ ಕೊನೆಯ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡಿದ ಶೋಯೆಬ್ ಮಲಿಕ್ ಗೆ ಪಾಕಿಸ್ತಾನ ತಂಡ ವಿಜಯದ ವಿದಾಯ ಹೇಳುವ ಮೂಲಕ ಈ ಕೊನೆ ,,,

ಶಾರ್ಜಾ:  ತಮ್ಮ ಕೊನೆಯ ಅಂತಾರಾಷ್ಟ್ರೀಯ  ಟೆಸ್ಟ್ ಪಂದ್ಯವನ್ನಾಡಿದ ಶೋಯೆಬ್ ಮಲಿಕ್ ಗೆ ಪಾಕಿಸ್ತಾನ ತಂಡ ವಿಜಯದ ವಿದಾಯ ಹೇಳುವ ಮೂಲಕ ಈ ಕೊನೆ ಸರಣಿಯನ್ನು ಸ್ಮರಣೀಯವಾಗಿಸಿತು.

ಯಾಸೀರ್ ಶಾ ಮತ್ತು ಶೊಯೇಬ್ ಮಲಿಕ್ ಅವರ ಮಾರಕ ಬೌಲಿಂಗ್ ದಾಳಿಯ ಬಲದಿಂದ ಪಾಕಿಸ್ತಾನ ತಂಡ ಇಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 127 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಪಾಕಿಸ್ತಾನ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಇಲ್ಲಿನ ಶಾರ್ಜಾ ಕ್ರಿಕೆಟ್ ಅಂಗಳದಲ್ಲಿ ಪಂದ್ಯದ ಅಂತಿಮ ದಿನವಾದ ಗುರುವಾರ 2 ವಿಕೆಟ್‌ಗೆ 46 ರನ್‌ಗಳಿಂದ 284 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್, ಯಾಸೀರ್ ಶಾ(44ಕ್ಕೆ 4) ಮತ್ತು ಶೊಯೇಬ್ ಮಲಿಕ್(26ಕ್ಕೆ 3) ಅವರ ಮೊನಚು ದಾಳಿಗೆ ತತ್ತರಿಸಿ 60.3 ಓವರ್‌ಗಳಲ್ಲಿ 156 ರನ್‌ಗೆ ಸರ್ವಪತನಗೊಂಡು ಸೋಲಿಗೆ ಶರಣಾಯಿತು.

ನಾಯಕ ಅಲಿಸ್ಟರ್ ಕುಕ್(63) ಅವರ ಅರ್ಧಶತಕ ಹೊರತುಪಡಿಸಿದರೆ ಇತರ ಯಾವ ಬ್ಯಾಟ್ಸ್‌ಮನ್‌ಗಳಿಂದಲೂ ಸ್ಥಿರ ಪ್ರದರ್ಶನ ಮೂಡಿಬರಲಿಲ್ಲ. ಕೆಳ ಹಂತದಲ್ಲಿ ಅದಿಲ್ ರಶೀದ್(22) ಮತ್ತು ಸ್ಟುವರ್ಟ್ ಬ್ರಾಡ್(20) ಅಲ್ಪ ಕಾಣಿಕೆ ನೀಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡುವಲ್ಲಿ ಸಾಧ್ಯವಾಗಲಿಲ್ಲ. ಪಾಕಿಸ್ತಾನ ಜಯದಲ್ಲಿ ಯಾಸೀರ್, ಶೊಯೇಬ್ ಮತ್ತು ಜುಲ್ಫಿಕರ್ ಬಾಬರ್ ಉತ್ತಮ ಬೌಲಿಂಗ್ ಸಂಘಟಿಸಿ ಪ್ರಮುಖ ಪಾತ್ರವಹಿಸಿದರು. ಮೊಹಮ್ಮದ್ ಹಫೀಜ್ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಯಾಸೀರ್ ಶಾ ಭಾಜನರಾದರು.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ: 234 ಮತ್ತು ದ್ವಿತೀಯ ಇನಿಂಗ್ಸ್ 355

ಇಂಗ್ಲೆಂಡ್: 306 ಮತ್ತು ದ್ವಿತೀಯ ಇನಿಂಗ್ಸ್ 60.3 ಓವರ್‌ಗಳಲ್ಲಿ 156(ಅಲಿಸ್ಟರ್ ಕುಕ್ 63, ಮೊಯೀನ್ ಅಲಿ 22, ಅದಿಲ್ ರಶೀದ್ 22, ಸ್ಟುವರ್ಟ್ ಬ್ರಾಡ್ 20; ಯಾಸೀರ್ ಶಾ 44ಕ್ಕೆ 4, ಶೋಯಬ್ ಮಲಿಕ್ 26ಕ್ಕೆ 3)

ಪಂದ್ಯ ಶ್ರೇಷ್ಠ: ಮೊಹಮ್ಮದ್ ಹಫೀಜ್, ಸರಣಿ ಶ್ರೇಷ್ಠ: ಯಾಸೀರ್ ಶಾ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!