ರವೀಂದ್ರ ಜಡೇಜಾ 
ಕ್ರೀಡೆ

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್; ಭಾರತಕ್ಕೆ ಸುಲಭ ಜಯ

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್‌ ಸರಣಿಯ ಪ್ರಥಮ ಟೆಸ್ಟ್‌ ಪಂದ್ಯವನ್ನು ಟೀಂ ಇಂಡಿಯಾ ಜಯಿಸಿದೆ...

ಮೊಹಾಲಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್‌ ಸರಣಿಯ ಪ್ರಥಮ ಟೆಸ್ಟ್‌ ಪಂದ್ಯವನ್ನು ಟೀಂ ಇಂಡಿಯಾ ಜಯಿಸಿದೆ. 
ಟೀಂ ಇಂಡಿಯಾ ನೀಡಿದ 218 ರನ್ ಗಳ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 109 ರನ್ ಗಳಿಗೆ ಸರ್ವಪತನಗೊಂಡಿದ್ದು, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಮೊದಲ ಜಯ ಗಳಿಸಿದೆ.
ಆಫ್ರಿಕಾ ಪರ ಎಲ್ಗರ್ 16, ಫಿಲಾಂಡರ್ 1, ದುಪ್ಲೆಸಿಸ್ 1, ಆಶಿಮ್ ಆಮ್ಲಾ 0, ಎಬಿಡಿ ವಿಲಿಯರ್ಸ್ 16, ವಿಲಾಸ್ 7, ವಾನ್ ಝೈಲ್ 36, ಹರ್ಮೆರ್ 11, ಸ್ಟೇನ್ 2 ಇಮ್ರಾನ್ ತಾಹೀರ್ 4  ರನ್ ಗಳಿಸಿ ಔಟಾದರೆ. ರಬಾಡಾ 1 ರನ್ ಗಳಿಸಿ ಅಜೇಯರಾಗಿ ಉಳಿಸಿದ್ದಾರೆ.
ಟೀಂ ಇಂಡಿಯಾ ಪರ ಜಡೇಜಾ 5, ಅಶ್ವಿನ್ 3, ಮಿಶ್ರಾ, ಅರೋನ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಕೇವಲ 200 ರನ್ ಗಳಿಗೆ ಆಲೌಟ್ ಆಗಿದೆ. 2ನೇ ದಿನದಾಟದಂತ್ಯಕ್ಕೆ 125 ಕ್ಕೆ 2 ವಿಕೆಟ್‌ ಕಳೆದುಕೊಂಡಿದ್ದ ಭಾರತ ಮೂರನೆದಿನ ಒಂದಾದರಂತೆ ಒಂದು ವಿಕೆಟ್‌ ಕಳೆದುಕೊಂಡು 200ಕ್ಕೆ ಆಟ ಮುಗಿಸಿತು.
ಸ್ಕೋರು ವಿವರ: 
ಭಾರತ ಮೊದಲ ಇನ್ನಿಂಗ್ಸ್ 201, ದ್ವಿತೀಯ ಇನ್ನಿಂಗ್ಸ್ 200
ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ 184 ದ್ವಿತೀಯ ಇನ್ನಿಂಗ್ಸ್ 109

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ