ಕ್ರಿಸ್ ವೋಕ್ಸ್ 
ಕ್ರೀಡೆ

ಇಂಗ್ಲೆಂಡ್ ಗೆಲ್ಲಿಸಿದ ವೋಕ್ಸ್ ಅಲೆಕ್ಸ್ ಹೇಲ್ಸ್ ಶತಕ-ಪಾಕ್‍ಗೆ 95 ರನ್ ಸೋಲು

ಆರಂಭಿಕ ಬ್ಯಾಟ್ಸ್ ಮನ್ ಅಲೆಕ್ಸ್ ಹೇಲ್ಸ್ (109) ಶತಕ ಹಾಗೂ ಬೌಲರ್ ಕ್ರಿಸ್ ವೋಕ್ಸ್ (4 ವಿಕೆಟ್) ಮಾರಕ ದಾಳಿಯ ನೆರವಿನಿಂದ ಇಂಗ್ಲೆಂಡ್ ತಂಡ ಎರಡನೇ ಏಕದಿನ

ದುಬೈ: ಆರಂಭಿಕ ಬ್ಯಾಟ್ಸ್ ಮನ್ ಅಲೆಕ್ಸ್ ಹೇಲ್ಸ್ (109) ಶತಕ ಹಾಗೂ ಬೌಲರ್ ಕ್ರಿಸ್ ವೋಕ್ಸ್ (4 ವಿಕೆಟ್) ಮಾರಕ ದಾಳಿಯ ನೆರವಿನಿಂದ ಇಂಗ್ಲೆಂಡ್ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಜಯಿಸಿದೆ.

ಶೇಖ್ ಜಾವೇದ್  ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 95 ರನ್‍ಗಳಿಂದ ಪಾಕಿಸ್ತಾನವನ್ನು ಮಣಿಸಿತು. ಆ ಮೂಲಕ 4 ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ 50 ಓವರ್‍ಗಳಲ್ಲಿ 5 ವಿಕೆಟ್‍ಗೆ 283 ರನ್ ಸಂಪಾದಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 45.5 ಓವರ್‍ಗಳಲ್ಲಿ 188 ರನ್‍ಗಳಿಗೆ ಆಲೌಟ್ ಆಗುವ ಮೂಲಕ
ಸೋಲನುಭವಿಸಿತು.

ಪಾಕಿಸ್ತಾನ ತಂಡದ ಪರ ಕೆಳ ಕ್ರಮಾಂಕದಲ್ಲಿ ಸರ್ಪರಾಜ್ ಅಹ್ಮದ್ (64) ಅರ್ಧಶತಕ ದಾಖಲಿಸಿದ್ದು, ಬಿಟ್ಟರೆ ಉಳಿದ ಯಾವುದೇ ಬ್ಯಾಟ್ಸಮನ್ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಇಂಗ್ಲೆಂಡ್ ಪರ ಕ್ರಿಸ್ ವೊಕ್ಸ್ 4, ಡೇವಿಡ್ ವಿಲ್ಲೆ 3, ಟೊಪ್ಲಿ, ರಶೀದ್ ಮತ್ತು ಅಲಿ ತಲಾ 1 ವಿಕೆಟ್ ಪಡೆದರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಹೇಲ್ಸ್ ಶತಕದ ಜತೆಗೆ, ಜೇಸನ್ ರಾಯ್ (54) ಮತ್ತು ಜೋ ರೂಟ್ (63)
ಅರ್ಧಶತಕದ ನೆರವಿನಿಂದ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ 50 ಓವರ್‍ಗಳಲ್ಲಿ 5 ವಿಕೆಟ್‍ಗೆ 283 (ಅಲೆಕ್ಸ್ 109, ರೂಟ್ 63, ರಿಯಾಜ್ 43ಕ್ಕೆ 3) ಪಾಕಿಸ್ತಾನ 45.5 ಓವರ್‍ಗಳಲ್ಲಿ 188 (ಸರ್ಪರಾಜ್ 64, ಅನ್ವರ್ 23, ವೊಕ್ಸ್ 33ಕ್ಕೆ 4)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ