ಲಾಸ್ ಎಂಜಲಿಸ್: ಕ್ರಿಕೆಟ್ ಪ್ರೇಮಿಗಳ ಕುತೂಹಲ ಕೆರಳಿಸಿದ್ದ ಆಲ್ ಸ್ಟಾರ್ಸ್ ಕ್ರಿಕೆಟ್ ಸರಣಿಯನ್ನು ವಾರ್ನ್ಸ್ ವಾರಿಯರ್ಸ್ ಪಡೆ, 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ, ಕೊನೆಯ ಪಂದ್ಯದಲ್ಲೂ ಸಚಿನ್ ನೇತೃತ್ವದ ತಂಡ ನಿರಾಸೆ ಕಂಡಿದೆ. ಡೋಡ್ಜರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ತೆಂಡೂಲ್ಕರ್ ಅರ್ಧಶತಕದ ಹೊರತಾಗಿಯೂ, ಸಚಿನ್ಸ್ ಬ್ಲಾಸ್ಟರ್ಸ್ 4 ವಿಕೆಟ್‍ಗಳ ಸೋಲನುಭವಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸಚಿನ್ ತಂಡ, 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು. ಜಾಕ್ ಕಾಲಿಸ್ ಪಂದ್ಯಶ್ರೇಷ್ಠ ಗೌರವ ಪಡೆದರೆ, ಕುಮಾರ್ ಸಂಗಕ್ಕಾರ ಸರಣಿ ಶ್ರೇಷ್ಠ ಗೌರವಗಳಿಸಿದರು. ಈ ಮೊತ್ತವನ್ನು ಬೆನ್ನಟ್ಟಿದ ವಾರಿಯರ್ಸ್ ಬಳಗ, ಇನಿಂಗ್ಸ್ ಮುಗಿಯಲು ಇನ್ನೊಂದು ಎಸೆತ ಬಾಕಿಯಿರುತೆಂಯೇ 6 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿ, ಜಯದ ನಗೆ ಬೀರಿತು.
ಸಚಿನ್ ತಂಡ ನೀಡಿದ್ದ ಸವಾಲಿನ ಮೊತ್ತವನ್ನು ಬೆನ್ನಟ್ಟಲು ಕ್ರೀಸ್‍ಗೆ ಇಳಿದ ವಾರಿಯರ್ಸ ಆರಂಬಿsಕ ಆಘಾತ ಎದುರಿಸಿತು. ನಂತರ ಸೈಮಂಡ್ಸ್ ಹಾಗೂ ಹೇಡನ್ ಜೋಡಿ 2ನೇ ವಿಕೆಟ್‍ಗೆ 50 ರನ್ ಕಲೆಹಾಕಿತು. ನಿಗದಿತ ಅಂತರದಲ್ಲಿ ಸೈಮಂಡ್ಸ್ (31), ಹೇಡನ್ (12), ಜಾಂಟಿ ರೋಡ್ಸ್ (17)ರನ್ನು ಕಳೆದುಕೊಂಡರೂ, 5ನೇ ವಿಕೆಟ್‍ಗೆ ಅರ್ಧ ಶತಕದ ಜತೆಯಾಟವಾಡಿದ ಸಂಗಕ್ಕಾರ (42 ರನ್, 21 ಎಸೆತ, 4 ಬೌಂಡರಿ, 3 ಸಿಕ್ಸರ್)
ಹಾಗೂ ರಿಕಿ ಪಾಂಟಿಂಗ್ (ಅಜೇಯ ೪೩ ರನ್, 25 ಎಸೆತ, 3 ಬೌಂಡರಿ, 2 ಸಿಕ್ಸರ್) ಜೋಡಿ, ತಂಡ ಗೆಲವಿನ ಹಾದಿಗೆ ಬರುವಂತೆ ನೋಡಿಕೊಂಡಿತು.