ಜೆಕ್ ಗಣರಾಜ್ಯ 
ಕ್ರೀಡೆ

ಜೆಕ್ ಗಣರಾಜ್ಯಕ್ಕೆ ಫೆಡ್ ಕಪ್

ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಜೆಕ್ ಗಣರಾಜ್ಯದ ಮಹಿಳಾ ಟೆನಿಸ್ ತಂಡ ಸತತ ಎರಡನೇ ಬಾರಿಗೆ ಫೆಡ್ ಕಪ್ ಟೆನಿಸ್ ಟೂರ್ನಿಯನ್ನು ಗೆದ್ದುಕೊಂಡಿದೆ.

ಪ್ರೆಗ್: ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಜೆಕ್ ಗಣರಾಜ್ಯದ ಮಹಿಳಾ ಟೆನಿಸ್ ತಂಡ ಸತತ ಎರಡನೇ ಬಾರಿಗೆ ಫೆಡ್ ಕಪ್ ಟೆನಿಸ್ ಟೂರ್ನಿಯನ್ನು ಗೆದ್ದುಕೊಂಡಿದೆ.
ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಜೆಕ್ ಗಣರಾಜ್ಯ ತಂಡ ರಷ್ಯಾ ವಿರುದಟಛಿ 3-2ರಿಂದ ಜಯಿಸುವ ಮೂಲಕ ಪ್ರಶಸ್ತಿ ಎತ್ತಿ ಹಿಡಿಯಿತು. ಆ ಮೂಲಕ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಇನ್ನು ಕಳೆದ ಐದು ವರ್ಷ-ಗಳಲ್ಲಿ ನಾಲ್ಕನೇ ಬಾರಿಗೆ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಈವರೆಗೂ ಒಟ್ಟಾರೆಯಾಗಿ 9 ಬಾರಿ ಜೆಕ್ ಗಣರಾಜ್ಯ ಫೆಡರೇಷನ್ ಕಪ್ ಚಾಂಪಿಯನ್ ಎನಿಸಿದರೆ, ಮರಿಯಾ ಶರಪೋವಾ ಸಾರಥ್ಯದ ರಷ್ಯಾ ರನ್ನರ್‍ ಅಪ್ ಸ್ಥಾನಕ್ಕೆ ತೃಪ್ತವಾಯಿತು. ಡಬಲ್ಸ್ ವಿಭಾಗದ ಅಂತಿಮ ಹಾಗೂ ರೋಚಕ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಕ್ಯಾರೊಲಿನ್ ಪ್ಲಿಸ್ಕೊವಾ ಹಾಗೂ ಬಾರ್ಬೊರ ಸ್ಟ್ರಿಕೋವಾ ರಷ್ಯಾದ ಅನಾಸ್ಟಾಶಿಯಾ ಪಾವ್ಲಿಚೆಂಕೊವಾ ಮತ್ತು ಎಲೆನಾ ವೆಸ್ನಿನಾ ಜೋಡಿಯನ್ನು  4-6, 6-3, 6-2 ಸೆಟ್ ಗಳ ಅಂತರದಲ್ಲಿ ಮಣಿಸಿದರು. ಈ ಸೋಲಿನ ನಂತರ ರಷ್ಯಾ 11 ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿ, ಆ ಪೈಕಿ 4 ಬಾರಿ ಪ್ರಶಸ್ತಿ ಗೆದ್ದಿದ್ದರೆ, 7 ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಂತಾಗಿದೆ.
ಮೊದಲ ಸುತ್ತಿನ ಪಂದ್ಯದಲ್ಲಿ ರಷ್ಯಾದ ಪೆಟ್ರಾ ಕ್ವಿಟೋವಾ 2--6,6--1, 6--1 ಸೆಟ್‍ಗಳಿಂದ ಪಾವ್ಲಿಚೆಂಕೊವಾ ಅವರನ್ನು ಮಣಿಸಿದರು. ನಂತರ ಎರಡನೇ ಸುತ್ತಿನಲ್ಲಿ ರಷ್ಯಾದ ಮರಿಯಾ ಶರಪೋವಾ ಅವರು ಸಿಂಗಲ್ಸ್ ನಲ್ಲಿ ಕ್ಯಾರೊಲಿನ್ ಪ್ಲಿಸ್ಕೋವಾ ರಷ್ಯಾದ ಪಾವ್ಲಿ ಚೆಂಕೊವಾ ಅವರನ್ನು ಕ್ರಮವಾಗಿ  6-3, 6-4 ಹಾಗೂ  3-6, 6-4, 6-2 ಸೆಟ್‍ಗಳ ಅಂತರದಲ್ಲಿ ಮಣಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 4ನೇ ಸುತ್ತಿನ ಸಿಂಗಲ್ಸ್ ನಲ್ಲಿ ಕ್ಯಾರೋ-ಲಿನ್ ಪ್ಲಿಸ್ಕೊವಾ
ರಷ್ಯಾದ ಪಾವ್ಲಿ ಚೆಂಕೊವಾ ಅವರನ್ನು 6-3, 6-೪ ಅಂತರದಲ್ಲಿ ಮಣಿಸಿದ್ದು ಪಂದ್ಯ 2-2ರಿಂದ ಸಮಬಲ ಸಾಧಿಸುವಂತಾಯಿತು. ಐದನೇ ಹಾಗೂ ನಿರ್ಣಾಯಕ ಸುತ್ತಿನಲ್ಲಿ ಜೆಕ್ ಗಣರಾಜ್ಯದ ಜೋಡಿ ಜಯಿಸಿ ಪ್ರಶಸ್ತಿ ಬಾಚಿಕೊಂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel