ಡೇವಿಡ್ ಬೆಕ್ ಹ್ಯಾಮ್ 
ಕ್ರೀಡೆ

ಡೇವಿಡ್ ಬೆಕ್ ಹ್ಯಾಮ್ ಜಗತ್ತಿನ ಅತಿ ಸೆಕ್ಸೀ ಪುರುಷ!

ಇಂಗ್ಲೆಂಡ್‌ ನ ಮಾಜಿ ಫುಟ್ ಬಾಲ್‌ ಆಟಗಾರ ಡೇವಿಡ್‌ ಬೆಕ್‌ ಹ್ಯಾಮ್ ಸೆಕ್ಸಿಯೆಸ್ಟ್ ಮ್ಯಾನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ...

ನವದೆಹಲಿ: ಇಂಗ್ಲೆಂಡ್‌ ನ ಮಾಜಿ ಫುಟ್ ಬಾಲ್‌ ಆಟಗಾರ ಡೇವಿಡ್‌ ಬೆಕ್‌ ಹ್ಯಾಮ್ ಸೆಕ್ಸಿಯೆಸ್ಟ್ ಮ್ಯಾನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಪೀಪಲ್‌ ಎಂಬ ಇಂಗ್ಲಿಷ್‌ ನಿಯತಕಾಲಿಕೆ ಡೇವಿಡ್‌ ಬೆಕ್‌ ಹ್ಯಾಮ್ 'ಸೆಕ್ಸಿಯೆಸ್ಟ್‌ ಮ್ಯಾನ್‌ ಅಲೈವ್‌' ಎಂಬ ಪ್ರಶಸ್ತಿ ನೀಡಿದೆ.

ಡೇವಿಡ್‌ ಬೆಕ್‌ ಹ್ಯಾಮ್ ಪಂದ್ಯವಾಡುತ್ತಿರುವಾಗಲೂ ತಮ್ಮ ಆಟದಿಂದ ಹಾಗೂ ವರ್ತನೆಯಿಂದ ಭಾರೀ ಸುದ್ದಿಯಾಗಿದ್ದರು. ನಿವೃತ್ತಿಯ ನಂತರವೂ ಅವರ ಜನಪ್ರಿಯತೆ ಕುಗ್ಗಿಲ್ಲ ಎನ್ನುವುದಕ್ಕೆ ಈ ಗೌರವ ಸಾಕ್ಷಿಯಾಗಿದೆ. ಇದು ತಮಗೆ ಲಭಿಸಿರುವ ಭಾರೀ ಗೌರವ ಎಂದು ಬೆಕ್‌ಹ್ಯಾಮ್‌ ಹೇಳಿಕೊಂಡಿದ್ದಾರೆ.

ನಾನು ಆಕರ್ಷಕವಾಗಿ ಹಾಗೂ ಸೆಕ್ಸಿ ಆಗಿದ್ದೇನೆ ಎಂದು ಯಾವತ್ತೂ  ಅಂದುಕೊಂಡಿಲ್ಲ ಎಂದು ಹೇಳಿರುವ ಡೇವಿಡ್‌ ಬೆಕ್‌ ಹ್ಯಾಮ್ 2013 ರಲ್ಲಿ ನಿವೃತ್ತಿಯಾಗುವ ಮುನ್ನ 19 ಪ್ರಮುಖ ಟ್ರೋಫಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!

ಜುಲೈ ಕಂಟಕ: ಕಳೆದ ವರ್ಷ ಹಠಾತ್ ಬಿರುಗಾಳಿಯಿಂದ ದೋಣಿ ಮಗುಚಿ 39 ಮಂದಿ ಸಾವು; ಈ ವರ್ಷ 15 ಮಂದಿ ದುರ್ಮರಣ!