ನೊವಾಕ್ ಜೊಕೊವಿಚ್ 
ಕ್ರೀಡೆ

ಜೋಕೊವಿಚ್ ಗೆ ಫೆಡರರ್ ಬ್ರೇಕ್

ಋತುವಿನಾದ್ಯಂತ ಭರ್ಜರಿ ಪ್ರದರ್ಶನ ನೀಡುತ್ತಾ ಸಾಗಿದ್ದ ವಿಶ್ವದ ನಂ.1 ಆಟಗಾರ ಸರ್ಬಿಯಾ ಆಟಗಾರ ನೊವಾಕ್ ಜೊಕೊವಿಚ್ ಅವರ ಗೆಲುವಿನ ಅಬಹಿಯಾನಕ್ಕೆ ರೋಜರ್ ಫೆಡರ್ ತೆರೆ ಎಳೆದಿದ್ದಾರೆ.

ಲಂಡನ್: ಋತುವಿನಾದ್ಯಂತ ಭರ್ಜರಿ ಪ್ರದರ್ಶನ ನೀಡುತ್ತಾ ಸಾಗಿದ್ದ ವಿಶ್ವದ ನಂ.1 ಆಟಗಾರ ಸರ್ಬಿಯಾ  ಆಟಗಾರ ನೊವಾಕ್ ಜೊಕೊವಿಚ್ ಅವರ ಗೆಲುವಿನ ಅಭಿಯಾನಕ್ಕೆ ರೋಜರ್ ಫೆಡರ್ ತೆರೆ ಎಳೆದಿದ್ದಾರೆ.
ಮಂಗಳವಾರ ತಡರಾತ್ರಿ ನಡೆದ ಎಟಿಪಿ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ವಿಜರ್ಲೆಂಡ್‍ನ ಆಟಗಾರ, 17 ಗ್ರಾಂಡ್‍ಸ್ಲಾಂ ಪ್ರಶಸ್ತಿಗಳ ಒಡೆಯ ರೋಡರ್ ಫೆಡರರ್, ಅಗ್ರಶ್ರೇಯಾಂಕಿತ ಆಟಗಾರ ನೊವಾಕ್ ಜೊಕೊವಿಚ್ ಅವರನ್ನು 7-5, 6-೨ ನೇರಸೆಟ್‍ಗಳಿಂದ ಸೋಲಿಸಿ, ಉಪಾಂತ್ಯಕ್ಕೆ ಕಾಲಿಟ್ಟರು. ಈ ಮೂಲಕ, ತಮ್ಮ ವಿರುದ್ಧ ಜೊಕೊವಿಚ್ ಗಳಿಸಿದ್ದ ಸತತ 15 ಗೆಲುವಿನ ಓಟಕ್ಕೆ ಫೆಡರರ್ ಬ್ರೇಕ್ ಹಾಕಿದರು.
ಮಂಗಳವಾರ ನಡೆದ ಫೆಡರರ್ ವಿರುದ್ಧದ ಪಂದ್ಯದಲ್ಲಿ ಜೊಕೊವಿಚ್ ಅವರೇ ಗೆಲ್ಲುವರೆಂದು ಅವರ ಅಭಿಮಾನಿಗಳು ನಂಬಿಕೊಂಡಿದ್ದರು. ಆದರೆ, ಫಲಿತಾಂಶ ಇವರ ನಂಬಿಕೆಯನ್ನು ಬುಡಮೇಲು ಮಾಡಿತು. ಮಿಂಚಿನ ಆಟ ಪ್ರದರ್ಶಿಸಿದ ಫೆಡರರ್, ಜೊಕೊ ವಿರುದದ್ಧ  ದಿಟ್ಟತನದ ಹೋರಾಟ ತೋರಿದರು.
ಯಾವುದೇ ತಪ್ಪೆಸಗದೇ ಎಚ್ಚರಿಕೆಯ ಹೆಜ್ಜೆಯಿಟ್ಟರು. ಅತ್ತ, ಜೊಕೊವಿಚ್ ಮಿಂಚಿನ ಹೋರಾಟ ನೀಡಿದ್ದರಿಂದ ದೀರ್ಘಕಾಲಕ್ಕೆ ಸಾಗಿ ಫೆಜರರ್ ಮೊದಲ ಸೆಟ್ ಅನ್ನು 7-5ರಲ್ಲಿ ವಶಪಡಿಸಿ ಕೊಂಡರು. ಅದೇ ಉಮೇದಿನಲ್ಲಿ ಎರಡನೇ ಸೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರು, ತೀವ್ರ ಹೋರಾಟ ನೀಡುತ್ತಿದ್ದ ಜೊಕೊವಿಚ್ ಅವರನ್ನು ಹಿಂದಿಕ್ಕಿ ಜಯ ಸಾಧಿಸಿದರು.
ನಡಾಲ್‍ಗೆ ವಿಜಯ: ಪ್ರಸಕ್ತ ಸಾಲಿನಲ್ಲಿ ಕಳಪೆ ಫಾರ್ಮ್ ನಿಂದ ಕಂಗೆಟ್ಟಿದ್ದ ಸ್ಪೇನ್‍ನ ರಾಫೆಲ್ ನಡಾಲ್, ಈ ಟೂರ್ನಿಯಲ್ಲಿ ಮತ್ತೆಮ್ಮೆ ಲಯ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಬ್ರಿಟನ್‍ನ ಆ್ಯಂಡಿ ಮರ್ರೆ ವಿರುದಟಛಿ 6--4, 6-1 ಸೆಟ್‍ಗಳ ಅಂತರದಲ್ಲಿ ಜಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್