ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತಕ್ಕೆ ಫೈನಲ್ ಗುರಿ

ಹತ್ತೊಂಭತ್ತು ವರ್ಷದೊಳಗಿನವರ ಎಂಟನೇ ಜೂನಿಯರ್ ಏಷ್ಯಾ ಹಾಕಿ ಕಪ್ ಪಂದ್ಯಾವಳಿಯಲ್ಲಿ ಅಜೇಯ ತಂಡವಾಗಿ ಉಪಾಂತ್ಯಕ್ಕೆ ಲಗ್ಗೆ ಹಾಕಿರುವ ಭಾರತದ ಕಿರಿಯರ...

ಹಾಕಿ
Vishwanath S
Updated On : 21 Nov 2015, 12:20 pm
ಕುಂಟಾನ್: ಹತ್ತೊಂಭತ್ತು ವರ್ಷದೊಳಗಿನವರ ಎಂಟನೇ ಜೂನಿಯರ್ ಏಷ್ಯಾ ಹಾಕಿ ಕಪ್ ಪಂದ್ಯಾವಳಿಯಲ್ಲಿ ಅಜೇಯ ತಂಡವಾಗಿ ಉಪಾಂತ್ಯಕ್ಕೆ ಲಗ್ಗೆ ಹಾಕಿರುವ ಭಾರತದ ಕಿರಿಯರ ಹಾಕಿ ತಂಡ, ಶನಿವಾರ ನಡೆಯಲಿರುವ ಜಪಾನ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿ ಫೈನಲ್‍ನತ್ತ ದಿಟ್ಟಿ ಹರಿಸಿದೆ. 
ಗುಂಪು ಹಂತದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ತಂಡ, ಮೊದಲಿಗೆ ಜಪಾನ್ ವಿರುದ್ಧ (2-1), ಆತಿಥೇಯ ಮಲೇಷಿಯಾ ವಿರುದ್ಧ (5-4) ಹಾಗೂ ಚೀನಾ ವಿರುದ್ಧ 4-1 ಗೋಲುಗಳಿಂದ ಜಯ ಸಾಧಿಸಿದ್ದ ಭಾರತ, ಕ್ವಾರ್ಟರ್ ಫೈನಲ್‍ನಲ್ಲಂತೂ ಓಮನ್ ವಿರುದ್ಧ 9-0 ಗೋಲುಗಳಿಂದ ವಿಜೃಂಬಿಸಿತ್ತು. ನಾಯಕ ಹರ್ಜೀತ್ ಸಿಂಗ್ ತಂಡವನ್ನು ಅಮೋಘವಾಗಿ ಮುನ್ನಡೆಸುತ್ತಿದ್ದು, ತಂಡ ಫೈನಲ್ ತಲುಪುವ ಭಾರೀ ಭರವಸೆಯಲ್ಲಿದೆ. 
ಉತ್ತಮ ಫಾರ್ಮ್ ನಲ್ಲಿರುವ ಭಾರತ ತಂಡ, ಗುಂಪು ಹಂತದಲ್ಲಿ ಇದೇ ಜಪಾನ್ ವಿರುದ್ಧ ಗೆಲುವು ಸಾಧಿಸಿದ ಹುರುಪಿನಲ್ಲಿದೆ. ಆದಾಗ್ಯೂ ಹೋರಾಟಕ್ಕೆ ಹೆಸರಾದ ಜಪಾನ್ ಭಾರತದ ವಿರುದ್ಧ ದಿಟ್ಟ ಪೈಪೋಟಿ ನೀಡಲು ಮುಂದಾಗಿರುವುದು ಹರ್ಜೀತ್ ಸಿಂಗ್ ಈ ಪಂದ್ಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement