ಲಂಡನ್: ವಿಶ್ವದ ನಂಬರ್ ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರ
ಅಬ್ಬರದ ಆಟವನ್ನು ಸಮರ್ಥವಾಗಿ ಎದುರಿ ಸಲು ವಿಫಲರಾದ ಸ್ಪೇನ್ ಟೆನಿಸ್ ತಾರೆ ರಾಫಲ್
ನಡಾಲ್, ಎಟಿಪಿ ವರ್ಲ್ಡ್ ಟೂರ್ ಫೈನಲ್ಸ್ಟೂ ರ್ನಿಯ ಸೆಮಿಫೈನಲ್ ಸುತ್ತಿನಲ್ಲಿ ಸೋಲನುಭವಿಸಿದ್ದಾರೆ. ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಉಪಾಂತ್ಯ ಪಂದ್ಯದಲ್ಲಿ ಜೊಕೊವಿಚ್ 6-3, 6-3 ನೇರ ಸೆಟ್‍ಗಳ ಅಂತರದಲ್ಲಿ ನಡಾಲ್ ಅವರನ್ನು ಮಣಿಸಿದರು. ಈ ಮೂಲಕ ಈವರೆಗೂ ಈ ಇಬ್ಬರ ಪರಸ್ಪರ ಸೆಣಸಾಟದಲ್ಲಿ 23-23ರ ಸಮಬಲ
ಕಾಯ್ದುಕೊಂಡಂತಾಗಿದೆ. ಅದರಲ್ಲೂ ಜೊಕೊವಿಚ್, ನಡಾಲ್ ವಿರುದ್ದ ಕಳೆದ ಒಂಬತ್ತು ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ.