ಲಂಡನ್: ಭಾರತದ ಟೆನಿಸಿಗ ರೋಹನ್ ಬೋಪಣ್ಣ ಹಾಗೂ ರೊಮೇನಿಯಾದ ಫ್ಲಾರಿನ್ ಮರ್ಜಿಯಾ ಜೋಡಿ, ಎಟಿಪಿ ಟೂರ್ ಫೈನಲ್ ಪಂದ್ಯಾವಳಿಯಲ್ಲಿ ಡಬಲ್ಸ್ ವಿಭಾಗದ ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿದೆ. ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಈ ಜೋಡಿ, ಕ್ರೊವೇಶಿಯಾ-ಬ್ರೆಜಿಲ್ ಜೋಡಿಯಾದ ಇವಾನ್ ಡೋಡಿಗ್ ಹಾಗೂ ಮಾರ್ಸೆಲೊ ಮೆಲೊ ಅವರನ್ನು 6-4, 6-2 ನೇರ ಸೆಟ್‍ಗಳಿಂದ ಮಣಿಸಿತು. ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ, ಬೋಪಣ್ಣ- ಮರ್ಜಿಯಾ ಜೋಡಿ, ಶೇ. 93ರಷ್ಟು ಮೊದಲ ಸರ್ವ್ ಅಂಕಗಳನ್ನು ತಮ್ಮದಾಗಿಸಿ ಕೊಂಡಿತಲ್ಲದೆ, ನಾಲ್ಕು ಏಸ್‍ಗಳನ್ನು ಸಿಡಿಸಿ ಇವಾನ್ ಮತ್ತು ಮಾರ್ಸೆಲೊ ಜೋಡಿಯ ಸವಾಲನ್ನು