ಸಾನಿಯಾ ಮಿರ್ಜಾ- ಮಹೇಶ್ ಭೂಪತಿ(ಸಂಗ್ರಹ ಚಿತ್ರ) 
ಕ್ರೀಡೆ

ಸಾನಿಯಾ- ಮಹೇಶ್‍ಗೆ ಜಯ: ಪ್ರದರ್ಶನ ಪಂದ್ಯದಲ್ಲಿ ಪೇಸ್-ನವ್ರಾಟಿಲೋವಾ ಪರಾಭವ

ಐಪಿಟಿಎಲ್ ಪ್ರದರ್ಶನ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಹಾಗೂ ಮಹೇಶ್ ಭೂಪತಿ ಜೋಡಿ, ಲಿಯಾಂಡರ್ ಪೇಸ್ ಹಾಗೂ ಮಾರ್ಟಿನಾ ನವ್ರಾಟಿಲೋವಾ ಜೋಡಿ ವಿರುದ್ಧ ಗೆಲವು ಸಾಧಿಸಿತು.

ಕೋಲ್ಕತಾ: ಟೆನಿಸ್ ಲೋಕದ ದಂತಕತೆಗಳ ಹಣಾಹಣಿಯಾಗಿದ್ದ ಕಾರಣದಿಂದ, ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದ್ದ ಐಪಿಟಿಎಲ್ ಪ್ರದರ್ಶನ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಹಾಗೂ ಮಹೇಶ್ ಭೂಪತಿ ಜೋಡಿ,  ಲಿಯಾಂಡರ್ ಪೇಸ್ ಹಾಗೂ ಮಾರ್ಟಿನಾ ನವ್ರಾಟಿಲೋವಾ ಜೋಡಿ ವಿರುದ್ಧ 7-5, 7-೫ ನೇರಸೆಟ್‍ಗಳ ಮೂಲಕ ಗೆಲವು ಸಾಧಿಸಿತು.
ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ಸೆಟ್‍ನ ಆರಂಭದಲ್ಲಿ 0-3 ಅಂಕಗಳಿಂದ ಮುನ್ನಡೆ ಸಾಧಿಸಿದ್ದ ಪೇಸ್ ನವ್ರಾಟಿಲೋವಾ, ಆನಂತರ ಸಾನಿಯಾ ಮಿರ್ಜಾ ಮಹೇಶ್ ಭೂಪತಿ ಜೋಡಿ ವಿರುದ್ಧ ಮಂಕಾಯಿತು. ಈ ಸೆಟ್‍ನ ಏಳನೇ ಗೇಮ್ ನಲ್ಲಿ ಪುಟಿದೆದ್ದ ಸಾನಿಯಾ-ಮಹೇಶ್, ಐದನೇ, ಏಳನೇ ಹಾಗೂ 11ನೇ ಗೇಮ್ ಗಳನ್ನು ಗೆಲ್ಲುವ ಮೂಲಕ ಈ ಸೆಟ್‍ನಲ್ಲಿ ಜಯಶಾಲಿಯಾಯಿತು.
ಇನ್ನು, 2ನೇ ಸೆಟ್‍ನಲ್ಲಿ ಎರಡೂ ಕಡೆಯಿಂದ ಸಮಬಲದ ಹೋರಾಟ ಮೂಡಿಬಂತು. ಎರಡೂ ಜೋಡಿಗಳು ಒಂದೊಂದು ಬ್ರೇಕ್ ಪಾಯಿಂಟ್ ಗಳಿಸಿ ಪರಸ್ಪರ ಸವಾಲೆಸೆದವು. ಈ ಹಂತದಲ್ಲಿ, ಪೇಸ್ ನವ್ರಾಟಿಲೋವಾ ಜೋಡಿಗಿಂತ ಕೊಂಚ ಬಿರುಸಿನ ಆಟ ಪ್ರದರ್ಶಿಸಿದ ಸಾನಿಯಾ ಮಹೇಶ್ ಅಂಕ ಪೇರಿಸುವತ್ತ ಗಮನವಿತ್ತರು. ಪಂದ್ಯದ 7ನೇ ಗೇಮ್ ನಲ್ಲಿ ಒಂದು ಬ್ರೇಕ್ ಪಾಯಿಂಟ್ ಗಳಿಸಿದ ಈ ಜೋಡಿ, ಪೇಸ್ ಹಾಗೂ ನವ್ರಾಟಿಲೋವಾ ಜೋಡಿಯನ್ನು ಹಿಂದಿಕ್ಕಿ ಸಾಗಿತಲ್ಲದೆ, ಈ ಸೆಟ್‍ನಲ್ಲೂ ಜಯಸಾಧಿಸುವ ಮೂಲಕ, ಪಂದ್ಯದಲ್ಲೂ ಜಯಭೇರಿ ಬಾರಿಸಿತು.
ಪಂದ್ಯದ ನಂತರ ಪ್ರತಿಕ್ರಿಯೆ ನೀಡಿದ ಪೇಸ್, ಪಂದ್ಯದಲ್ಲಿ ಸಾನಿಯಾ ಮಹೇಶ್ ಉತ್ತಮ ಜೊತೆಯಾಟ ನೀಡಿದ್ದಾಗಿ ಶ್ಲಾಘಿಸಿದರು. ಆನಂತರ, ಬಹು ದಿನಗಳ ನಂತರ ತಾವು ತಮ್ಮ ತವರೂರಾದ ಕೋಲ್ಕತಾಕ್ಕೆ ಆಗಮಿಸಿದ್ದರ ಬಗ್ಗೆ ಭಾವುಕರಾಗಿ
ಮಾತನಾಡಿದ ಅವರು, `"ಇಂದು ನಾನು ಓದಿದ ಶಾಲೆ, ಬಾಲ್ಯದಲ್ಲಿ ಟೆನಿಸ್ ಅಭ್ಯಾಸ ನಡೆಸಿದ ಅಂಕಣಗಳಿಗೆ ಭೇಟಿ ನೀಡಿದ್ದೆ. ನಾನು ಬೆಳೆದ ಹಳೆಯ ಮನೆಯೂ ಸಹ ನನ್ನಲ್ಲಿ ನೆನಪುಗಳನ್ನು ಸ್ಫುರಿಸುವಂತೆ ಮಾಡಿತು. ಇವೆಲ್ಲವೂ ಭಾವುಕ ಕ್ಷಣಗಳು. ಇದನ್ನು ಮಾತಿನಲ್ಲಿ ಬಣ್ಣಿಸಲಾಗದು'' ಎಂದರು. ಇದೇ ವೇಳೆ,ತಮಗೆ ಪ್ರೋತ್ಸಾಹ ನೀಡಿದ ಕೋಲ್ಕತಾದ ಜನತೆಯನ್ನುದ್ದೇಶಿಸಿ, ``ಎ ಬಿಗ್ ಧೋನ್ಯಬಾದ್ (ಧನ್ಯವಾದ) ಟು ಕೋಲ್ಕತಾ'' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

Encounter: ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲೀಯರ ಹತ್ಯೆ!

SCROLL FOR NEXT