ಮುಂಬೈ: ಅಪ್ಪ ಸಚಿನ್ ತೆಂಡೂಲ್ಕರ್ ಮಾದರಿ ಯಲ್ಲೇ ತನ್ನ ಕ್ರಿಕೆಟ್ ವೃತ್ತಿಜೀವನ ಕಟ್ಟಿಕೊಳ್ಳುವ ಹಾದಿಯಲ್ಲಿ ಸಾಗಿರುವ ಅರ್ಜುನ್ ತೆಂಡೂಲ್ಕರ್, ಈ ನಿಟ್ಟಿನಲ್ಲಿ ಮೊದಲ ಯಶಸ್ಸು ದಾಖಲಿಸಿದ್ದಾರೆ. ವಿಜಯ್ ಮರ್ಚೆಂಟ್ ಟೂರ್ನಿಗಾಗಿ ಹೆಸರಿಸಲಾಗಿ ರುವ ಮುಂಬೈನ 16 ವರ್ಷದೊಳಗಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಈ ಟೂರ್ನಿಗಾಗಿ ಗುರುವಾರ ನಡೆದಿದ್ದ ಅರ್ಹತಾಸುತ್ತಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಅರ್ಜುನ್, ಬೌಲಿಂಗ್‍ನಲ್ಲಿ ನಾಲ್ಕು ವಿಕೆಟ್ ಕಬಳಿಸಿ ಆಲ್‍ರೌಂಡ್ ಪ್ರದರ್ಶನ ನೀಡಿದ್ದರು. ಈ ಪ್ರದರ್ಶನದ ಆಧಾರದ
ಮೇಲೆ ಅವರನ್ನು 16 ವರ್ಷದೊಳಗಿನ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಪಿ.ವಿ. ಶೆಟ್ಟಿ ತಿಳಿಸಿದ್ದಾರೆ.