ಕೆನಡಾ ಮೂಲದ ಆಟಗಾರ ಇಯಾನ್ ಹ್ಯೂಮ್ ಸಂಭ್ರಮಾಚರಣೆ ( ಕೃಪೆ : ಪಿಟಿಐ) 
ಕ್ರೀಡೆ

ಕೋಲ್ಕತ್ತಾಗೆ ಗೆಲುವು

ಕೆನಡಾ ಮೂಲದ ಆಟಗಾರ ಇಯಾನ್ ಹ್ಯೂಮ್ ಅವರ ಹ್ಯಾಟ್ರಿಕ್ ಗೋಲ್‍ಗಳ ನೆರವಿನಿಂದಾಗಿ, ಅಟ್ಲೆಟಿಕೋ ಡಿ ಕೋಲ್ಕತಾ ತಂಡವು, ಶುಕ್ರವಾರ ನಡೆದ...

 ಕೋಲ್ಕತಾ: ಕೆನಡಾ ಮೂಲದ ಆಟಗಾರ ಇಯಾನ್ ಹ್ಯೂಮ್  ಅವರ ಹ್ಯಾಟ್ರಿಕ್ ಗೋಲ್‍ಗಳ ನೆರವಿನಿಂದಾಗಿ, ಅಟ್ಲೆಟಿಕೋ ಡಿ ಕೋಲ್ಕತಾ ತಂಡವು, ಶುಕ್ರವಾರ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‍ಎಲ್) ಪಂದ್ಯದಲ್ಲಿ ಪುಣೆ  ಎಫ್ ಸಿ ವಿರುದ್ಧ 4-1 ಗೋಲುಗಳ  ಅಂತರದಲ್ಲಿ ಜಯ ಸಾಧಿಸಿತು. ಪಂದ್ಯದ 9ನೇ ನಿಮಿಷದಲ್ಲಿ ಕೋಲ್ಕತಾ ತಂಡಕ್ಕೆ ಮೊದಲ ಗೋಲ್‍ನ ಸಂಭ್ರಮ ತಂದಿತ್ತ ಹ್ಯೂಮ್ , ಆನಂತರ, 48ನೇ, 82ನೇ ನಿಮಿಷಗಳಲ್ಲೂ ಗೋಲು ದಾಖಲಿಸಿದರು. ಸರ್ಬಿಯಾದ ಆಟಗಾರ ಡೆಜಾನ್ ಲೆಕಿಕ್ 90ನೇ ನಿಮಿಷದಲ್ಲಿ ತಂಡಕ್ಕೆ 4ನೇ ಗೋಲು ತಂದುಕೊಟ್ಟರು. ಎದುರಾಳಿಗಳ ಪರ ದಾಖಲಾದ ಏಕೈಕ ಗೋಲು, ಪಂದ್ಯದ 87ನೇ ನಿಮಿಷದಲ್ಲಿ ಆಂಡ್ರಿಯನ್ ಮುಟು ಅವರಿಂದ ದಾಖಲಾಯಿತು.
ಪಂದ್ಯದ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಕೋಲ್ಕತಾ ತಂಡವು, ತನ್ನ ರಕ್ಷಣಾ ವಿಭಾಗದಲ್ಲಿ ಭಾರಿ ಛಾತಿ ತೋರಿತು. ಇದರಿಂದಾಗಿ, ಗೋವಾ ತಂಡದಹಲವಾರು ಗೋಲು ಯತ್ನಗಳು ವಿಫಲಗೊಂಡವು. ಮತ್ತೊಂದೆಡೆ, ತನ್ನ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಹ್ಯೂಮ್ , ಒಂದರ ಮೇಲೊಂದರಂತೆ ಗೋಲು ಗಳಿಸಿದ ಮೇಲೆ, ಎದುರಾಳಿಗಳ ಆತ್ಮಸ್ಥೈರ್ಯ ಕುಗ್ಗಿದಂತೆ ಭಾಸವಾಯಿತು. ಇದೆಲ್ಲದರ ಫಲವಾಗಿ ಕೋಲ್ಕತಾ 
ಜಯಿಸಿತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT