ಆಂಧ್ರ ವಿರುದ್ಧ ಕರ್ನಾಟಕ ತಂಡದ ವಿಜಯ
ತನ್ನ ಉತ್ತಮ ಫಾರ್ಮ್ ಮುಂದುವರಿಸಿರುವ ಕರ್ನಾಟಕ ಪುರುಷರ ಕಬಡ್ಡಿ ತಂಡವು, ಶುಕ್ರವಾರ ನಡೆದ 63ನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‍ಶಿಪ್‍ನ...
ಬೆಂಗಳೂರು: ತನ್ನ ಉತ್ತಮ ಫಾರ್ಮ್ ಮುಂದುವರಿಸಿರುವ ಕರ್ನಾಟಕ ಪುರುಷರ ಕಬಡ್ಡಿ ತಂಡವು, ಶುಕ್ರವಾರ ನಡೆದ 63ನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‍ಶಿಪ್‍ನ ಪಂದ್ಯದಲ್ಲಿ
ಮತ್ತೊಂದು ಗೆಲವು ದಾಖಲಿಸಿದೆ. ಆಂಧ್ರ ಪ್ರದೇಶ ವಿರುದ್ಧ ಸೆಣಸಿದ ರಾಜ್ಯ ತಂಡ, 40-10 ಅಂಕಗಳ ಅಂತರದಲ್ಲಿ ಜಯ ಸಾಧಿಸಿತು. ಆದರೆ, ಮಹಿಳಾ ತಂಡಕ್ಕೆ ಶುಕ್ರವಾರ ಮಿಶ್ರ ಫಲ ಪ್ರಾಪ್ತವಾದವು. ದಿನದ ಮೊದಲಲ ಹಣಾಹಣಿಯಲ್ಲಿ ಅಸ್ಸಾಂ ವಿರುದ್ಧ 44-16 ಅಂಕಗಳ ಅಂತರದಲ್ಲಿ ಜಯಿಸಿದ ರಾಜ್ಯ ವನಿತೆಯರು, ಆನಂತರ ಚಂಡೀಗಢ ವಿರುದ್ಧದ ಪಂದ್ಯದಲ್ಲಿ 20-36 ಅಂಕಗಳ ಅಂತರದಲ್ಲಿ ಸೋಲು ಕಂಡರು.
ಇತರ ಫಲಿತಾಂಶಗಳು
ಪುರುಷರ ವಿಭಾಗ: ಜಾರ್ಖಂಡ್ ವಿರುದ್ಧ ತಮಿಳುನಾಡಿಗೆ 69-24, ವಿದರ್ಭ ವಿರುದ್ಧ ಗುಜರಾತ್‍ಗೆ 45-44, ಪಶ್ಚಿಮ ಬಂಗಾಳ ವಿರುದ್ಧ ಉತ್ತರಾಖಾಂಡ್‍ಗೆ 46-27, ತ್ರಿಪುರಾ ವಿರುದ್ಧ ಭಾರತೀಯ ರೈಲ್ವೇಸ್ 49-17, ಬಿಹಾರ ವಿರುದ್ಧ ತೆಲಂಗಾಣ 37-8 ಮತ್ತು ಗೋವಾ ವಿರುದ್ಧ ದೆಹಲಿ ತಂಡ 25-19 ಅಂತರದ ಜಯ ದಾಖಲಿಸಿದವು.
ಮಹಿಳೆಯರ ವಿಭಾಗ: ತೆಲಂಗಾಣ ವಿರುದ್ಧ ಹಿಮಾಚಲ ಪ್ರದೇಶ 21-49, ಪಾಂಡಿಚೇರಿ ವಿರುದ್ಧ ಉ.ಪ್ರದೇಶ 66-14, ಜಮ್ಮು-ಕಾಶ್ಮೀರ ವಿರುದ್ಧ ಒಡಿಶಾ 44-5 ಹಾಗೂ ಗೋವಾ ವಿರುದ್ಧ ಬಿಹಾರ 23-14 ಅಂತರದಲ್ಲಿ ಗೆಲುವು ಸಾಧಿಸಿದವು. ತೆಲಂಗಾಣ ವಿರುದ್ಧ ಉತ್ತರ ಪ್ರದೇಶ ತಂಡ, 33-16 ಅಂಕಗಳ ಅಂತರದಲ್ಲಿ ಜಯಿಸಿದರೆ, ಚತ್ತೀಸ್‍ಗಢ ತಂಡದ ವಿರುದ್ಧ ಸೆಣಸಿದ ಒಡಿಶಾ ತಂಡ, 38-34 ಅಂಕಗಳ ಅಂತರದಲ್ಲಿ ಜಯಿಸಿತು.