ನವದೆಹಲಿ: ಪ್ರಸಕ್ತ ಪಾಕಿಸ್ತಾನ ವಿರುದ್ಧದ ಕಳೆದ ವರ್ಷ ಬಿಸಿಸಿಐ ಮುಂದಿನ ಕೆಲವು ವರ್ಷಗಳಲ್ಲಿ ಕ್ರಿಕೆಟ್ ಸರಣಿಯ ನ್ನಾಡಲು ಮಾಡಿಕೊಂಡಿರುವ ಒಪ್ಪಂದ ಅನೈತಿಕವಾದದ್ದು, ಎಂಬ ಮಾತುಗಳು ಕೇಳಿಬಂದಿವೆ.
2007ರಲ್ಲಿ ಬಿಸಿಸಿಐ, ಎರಡು ದೇಶಗಳ ಸರಣಿಯನ್ನು ತಟಸ್ಥ ಸ್ಥಳದಲ್ಲಿ ಆಡದಿರಲು ನಿರ್ಧರಿಸಿತು. ಅದೇ ವರ್ಷ ಕಾರ್ಯಕಾರಿ ಸಮಿತಿಯಲ್ಲಿ ಈ ತಿದ್ದುಪಡಿಯನ್ನು ಮಾಡಲಾಯಿತು. ಆ ಮೂಲಕ 2006ರಲ್ಲಿ ಭಾರತ, ಪಾಕ್ ವಿರುದ್ಧದ 2 ಏಕದಿನ ಪಂದ್ಯಗಳು, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಜತೆಗೆ ತ್ರಿಕೋನ ಏಕದಿನ ಸರಣಿಯನ್ನು ಕೌಲಾಲಂಪುರದಲ್ಲಿ ನಡೆದಿತ್ತು. ಆ ನಂತರ ಭಾರತ ಮೂರನೇ ಸ್ಥಳದಲ್ಲಿ ಯಾವುದೇ ಕ್ರಿಕೆಟ್ ಸರಣಿಯನ್ನು ಆಡಿರಲಿಲ್ಲ.
2007ರಲ್ಲಿ ಇಂಡಿಯನ್ ಕೇಬಲ್ ಟೆಲಿವಿಷನ್ ಬ್ರಾಡ್‍ಕಾಸ್ಟ್ ಜತೆಗಿನ ಒಪ್ಪಂದ ರದ್ದುಗೊಂಡ ನಂತರ ಈ ನಿರ್ಧಾರ ತೆಗೆದುಕೊಂಡಿತ್ತು. ಹಾಗಾಗಿ ಬಿಸಿಸಿಐ ಕಳೆದ ವರ್ಷ ತಟಸ್ಥ ಸ್ಥಳದಲ್ಲಿ ಪಾಕಿಸ್ತಾನ ವಿರುದ್ಧ 2 ಟೆಸ್ಟ್ ಹಾಗೂ ಐದು ಏಕದಿನ ಪಂದ್ಯ ಗಳ ಸರಣಿಯನ್ನಾಡಲು ಒಪ್ಪಂದ ಮಾಡಿಕೊಂಡಿದ್ದೇಕೆ ಎಂದು ಬಿಸಿಸಿಐನ ಕೆಲ ಸದಸ್ಯರು ಈಗ ಪ್ರಶ್ನಿಸುತ್ತಿದ್ದಾರೆ.
ನಡೆಯದ ಗಂಭೀರ ಚರ್ಚೆ: ಬಿಸಿಸಿಐ ಪಾಕಿಸ್ತಾನ ಜತೆಗೆ ಒಪ್ಪಂದ ಮಾಡುಕೊಳ್ಳುವಾಗ, ಮಂಡಳಿಯ ಕಾರ್ಯಕಾರಿ ಸಮಿತಿಯಲ್ಲಿ ಗಂಭೀರ ಚರ್ಚೆಯಾಗಲಿಲ್ಲ. ಬಿಸಿಸಿಐ ಐಸಿಸಿಯ ಇತರೆ ಪೂರ್ಣ ಪ್ರಮಾಣದ ಸದಸ್ಯರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಪ್ರಕ್ರಿಯೆ ಸಂಪೂರ್ಣವಾಗಿ ಭಿನ್ನವಾಗಿದೆ. ಬಿಸಿಸಿಐ-ಇಸಿಬಿಸಿಎನ ಅಧಿಕಾರ ಹಂಚಿಕೆ ಪ್ರಕ್ರಿಯೆ ಸಂದರ್ಭದಲ್ಲಿ ತನ್ನನ್ನು ಬೆಂಬಲಿಸಿದರೆ, ನಿಮ್ಮೊಂದಿಗೆ ಕ್ರಿಕೆಟ್ ಸರಣಿ ಆಡುತ್ತೇನೆ ಎಂದು ಬಿಸಿಸಿಐ ಆಶ್ವಾಸನೆ ನೀಡಿದ್ದರಿಂದಲೇ ಪಿಸಿಬಿ ಭಾರತವನ್ನು ಬೆಂಬಲಿಸಿತ್ತು ಎನ್ನಲಾಗಿದೆ. ಹೀಗಾಗಿ ಈ ಒಪ್ಪಂದವನ್ನು ಅನೈತಿಕ ಒಪ್ಪಂದ ಎಂದೇ ಕರೆಯಲಾಗುತ್ತಿದೆ ಎಂದು 'ದ ಹಿಂದೂ' ಪತ್ರಿಕೆ ವರದಿ ಮಾಡಿದೆ.