ಬೆಲ್ಜಿಯಂ: ದ್ವಿತೀಯ ಶ್ರೇಯಾಂಕಿತ ಟೆನಿಸಿಗ ಬ್ರಿಟನ್‍ನ ಆ್ಯಂಡಿ ಮರ್ರೆ, ಶನಿವಾರ ನಡೆದ ಬೆಲ್ಜಿಯಂ ವಿರುದ್ಧದ ಡೇವಿಸ್ ಕಪ್ ಫೈನಲ್‍ನ ಸಿಂಗಲ್ಸ್ ಪಂದ್ಯದಲ್ಲಿ ರುಬೆನ್ ಬೆಮೆಲ್‍ಮನ್ಸ್ ಅವರನ್ನು 6-3, 6-2, 7-5 ನೇರ ಸೆಟ್‍ಗಳಲ್ಲಿ ಮರ್ರೆ ಮಣಿಸಿದರು.
ಶನಿವಾರ ಆರಂಭಗೊಂಡ ಪಂದ್ಯಾವಳಿಯ ಮೊದಲ ದಿನದ ಎರಡು ಸಿಂಗಲ್ಸ್ ಪಂದ್ಯಗಳ ಪೈಕಿ ಬೆಲ್ಜಿಯಂನ ಡೇವಿಡ್ ನ್ ವಿರುದ್ಧ ಸೆಣಸಿದ ಬ್ರಿಟನ್ ಪಡೆಯ ಕೈಲ್ ಎಡ್ಮಂಡ್ 6-3, 6-1, 2-6, 1-6, 0-6 ಸೆಟ್‍ಗಳಿಂದ ಸೋತರೆ, ಬ್ರಿಟನ್, ಬೆಲ್ಜಿಯಂಗಿಂತ 0-1 ಹಿನ್ನಡೆ ಅನುಭವಿಸಿತು. ಹೀಗಾಗಿ ಮೊದಲ ದಿನ 1-1 ಸಮಬಲ ಪೈಪೋಟಿ ಕಂಡುಬಂದಿದ್ದು, ಭಾನುವಾರ ಡಬಲ್ಸ್ ನಡೆಯಲಿದೆ.