ಕರಾಚಿ: ಭಾರತ ಹಾಗೂ ಪಾಕಿಸ್ತಾನ ನಡುವಣದ ಕ್ರಿಕೆಟ್ ಸರಣಿ ಸಂಬಂಧ ಸೂಕ್ತ ನಿರ್ಧಾರ ತಳೆಯುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸೀಂ ಅಕ್ರಮ್ ಮನವಿ ಮಾಡಿದ್ದಾರೆ.
2007ರ ನಂತರದ ಮೊಟ್ಟಮೊದಲ ದ್ವಿಪಕ್ಷೀಯ ಕ್ರಿಕೆಟ್ ಸರಣಿಗೆ ಇರುವ ಬಿಕ್ಕಟ್ಟನ್ನು ತೆರವುಗೊಳಿಸಬೇಕೆಂದು ಅಕ್ರಮ್ ತಿಳಿಸಿದ್ದಾರೆ.
`ಪಾಕಿಸ್ತಾನ- ಭಾರತ ಕ್ರಿಕೆಟ್ ಸರಣಿ ನಡೆಸಲು ತಮಗೆ ಯಾವುದೇ ಅಭ್ಯಂತರ ವಿಲ್ಲ ಎಂಬುದನ್ನು ಸಚಿವ ಸಂಪುಟಕ್ಕೆ ಮೋದಿ ತಿಳಿಸಿದ್ದಾರೆ ಎಂದು ನಾನು ಕೇಳಿದ್ದೇನೆ. ಹೀಗಾಗಿ ಡಿಸೆಂಬರ್‍ನಲ್ಲಿ ನಡೆಯಬೇಕಿರುವ ದ್ವಿಪಕ್ಷೀಯ ಕ್ರಿಕೆಟ್ ಸರಣಿಗೆ ಹಸಿರು ನಿಶಾನೆ ತೋರಲು ಮೋದಿ ಮನಸ್ಸು ಮಾಡಬೇಕು' ಎಂದು ಅಕ್ರಮ್ ಕೋರಿದ್ದಾರೆ.