ವುಹಾನ್: ವಿಶ್ವದ ನಂ.1 ಡಬಲ್ಸ್ ಜೋಡಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ವುಹಾನ್ ಓಪನ್ ಡಬ್ಲ್ಯೂಟಿಎ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಉಪಾಂತ್ಯಕ್ಕೆ ಲಗ್ಗೆ ಹಾಕಿದ್ದಾರೆ.
ಅಗ್ರ ಶ್ರೇಯಾಂಕಿತ ಇಂಡೋಸ್ವಿಸ್ ಜೋಡಿ ಕ್ವಾರ್ಟರ್ಫೈನಲ್‍ನಲ್ಲಿ 5ನೇ ಶ್ರೇಯಾಂಕಿತ ಅಮೆರಿಕದ ರ್ಯಾಕೆಲ್‍ಹಾಗೂ ಅಬಿಗೇಲ್ ಜೋಡಿ ವಿರುದ್ಧ 6-2, 6-2ರ ಸೆಟ್‍ಗಳಲ್ಲಿ ಗೆಲುವು ಸಾಧಿಸಿ ಅಂತಿಮ ನಾಲ್ಕರ ಹಂತಕ್ಕೆ ಧಾವಿಸಿತು.
ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ವಿಂಬಲ್ಡನ್ ಚಾಂಪಿಯನ್ನ ರಾದ ಸಾನಿಯಾ ಹಿಂಗಿಸ್, ಎರಡನೇ ಸುತ್ತಿನಲ್ಲಿ ಕ್ಲಾಡಿಯಾ ಜಾನ್ಸ್ಇಗ್ನಾಸಿಕ್ ಮತ್ತು ಅನಸ್ಟಾಸಿಯಾ ರೊಡಿನೋವಾ ವಿರುದ್ಧ 6-3, 6-2 ಸೆಟ್‍ಗಳಲ್ಲಿ ಗೆಲುವು ಪಡೆದು ಕ್ವಾರ್ಟರ್ಫೈನಲ್ ತಲುಪಿದ್ದರು.