ದಕ್ಷಿಣ ಆಫ್ರಿಕಾ 
ಕ್ರೀಡೆ

ಹರಿಣಗಳಿಗೆ ಭರ್ಜರಿ ಜಯ

ಪಂದ್ಯದ ವೇಳೆ ಇಬ್ಬನಿ ಬಿದ್ದ ಪರಿಣಾಮ ಬೌಲರ್‍ಗಳಿಗೆ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಕಠಿಣ ಪರಿಸ್ಥಿತಿಯನ್ನು ಸಮರ್ಥವಾಗಿ ಬಳಸಿಕೊಂಡ ಪ್ರವಾಸಿ ದಕ್ಷಿಣ...

ಧರ್ಮಶಾಲಾ: ಪಂದ್ಯದ ವೇಳೆ ಇಬ್ಬನಿ ಬಿದ್ದ ಪರಿಣಾಮ ಬೌಲರ್‍ಗಳಿಗೆ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಕಠಿಣ ಪರಿಸ್ಥಿತಿಯನ್ನು ಸಮರ್ಥವಾಗಿ ಬಳಸಿಕೊಂಡ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಸಂಪಾದಿಸಿದೆ. 
ಶುಕ್ರವಾರ ಹಿಮಾಚಲ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 7 ವಿಕೆಟ್‍ಗಳ ಅಂತರದಲ್ಲಿ ಗೆಲವು ದಾಖಲಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಟಾಸ್ ಸೋತರೂ, ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೇವಲ 19.4 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಸಂಪಾದಿಸಿತು. ಆ ಮೂಲಕ ಆತಿಥೇಯರಿಗೆ ಆಘಾತ ನೀಡಿತು. 
ಸಮರ್ಥ ಬ್ಯಾಟಿಂಗ್ ಭಾರತ ತಂಡ ನೀಡಿದ್ದ 200 ರನ್‍ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಇನಿಂಗ್ಸ್ ಉದ್ದಕ್ಕೂ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿತು. ಇನ್ನು ಪಿಚ್‍ನಲ್ಲಿ ಇಬ್ಬನಿ ಸುರಿಯುತ್ತಿದ್ದ ಪರಿಣಾಮ ಚೆಂಡು ಒದ್ದೆಯಾಗಿ ಬೌಲರ್‍ಗಳಿಗೆ ಸರಿಯಾದ ನಿಯಂತ್ರಣ ಸಿಗುತ್ತಿರಲಿಲ್ಲ. ಹಾಗಾಗಿ ಪರಿಣಾಮಕಾರಿ ಬೌಲಿಂಗ್ ದಾಳಿ ಸಂಘಟಿಸಲು ಸಾಧ್ಯವಿಲ್ಲ. ಆರಂಭಿಕರಾದ ಹಶೀಂ ಆಮ್ಲಾ (36) ಹಾಗೂ ಎಬಿ ಡಿವಿಲಿಯರ್ಸ್ (51) ತಂಡಕ್ಕೆ 77 ರನ್‍ಗಳ ಉತ್ತಮ ಆರಂಭ ನೀಡಿದರು. ನಂತರ ಮೂರನೇ ಕ್ರಮಾಂಕದಲ್ಲಿ ಬಂದ ನಾಯಕ ಪ್ಲೆಸಿಸ್ (4) ಬೇಗನೆ ವಿಕೆಟ್ ಒಪ್ಪಿಸಿದರು. ಈ ವೇಳೆ ಭಾರತ ಬೌಲಿಂಗ್ ದಾಳಿಯನ್ನು ಮನಬಂದಂತೆ ದಂಡಿಸಿದ ಡುಮಿನಿ (68 ರನ್, 34 ಎಸೆತ, 1 ಬೌಂಡರಿ, 7 ಸಿಕ್ಸರ್) ಹಾಗೂ ಬೆಹರ್ಡಿನ್ (ಅಜೇಯ 32 ರನ್, 23 ಎಸೆತ, 4 ಬೌಂಡರಿ, 1 ಸಿಕ್ಸರ್) ತಂಡವನ್ನು ನಿರಾಯಾಸವಾಗಿ ಗೆಲವಿನತ್ತ ಕೊಂಡೊಯ್ದರು. 
ಭಾರತ ತಂಡದ ಪರ ಟಿ20 ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ ಕರ್ನಾಟಕದ ಎಡಗೈ ವೇಗಿ ಶ್ರೀನಾಥ್ ಅರವಿಂದ್ 4 ಓವರ್‍ಗಳಲ್ಲಿ 44 ರನ್ ನೀಡಿ 1 ವಿಕೆಟ್ ಪಡೆದರು. ಇನ್ನು ಅಶ್ವಿನ್ ಸಹ 1 ವಿಕೆಟ್ ಪಡೆದರು. ವ್ಯರ್ಥವಾದ ರೋಹಿತ್ ಶತಕ ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮುವ ಅವಕಾಶವನ್ನು ಸದುಪಯೋಗ ಮಾಡಿಕೊಂಡ ಆರಂಭಿಕರಾದ ರೋಹಿತ್ ಶರ್ಮಾ (106 ರನ್, 66 ಎಸೆತ, 12 ಬೌಂಡರಿ, 5 ಸಿಕ್ಸರ್) ದಕ್ಷಿಣ ಆಫ್ರಿಕಾ ಬೌಲರ್‍ಗಳ ಪಾಲಿಗೆ ಮಾರಕವಾಗಿ ಪರಿಣಮಿಸಿದರು. ಎರಡನೇ ವಿಕೆಟ್‍ಗೆ ರೋಹಿತ್ ಹಾಗೂ ವಿರಾಟ್ ಕೊಹ್ಲಿ (43 ರನ್, 27 ಎಸೆತ, 1 ಬೌಂಡರಿ, 3 ಸಿಕ್ಸರ್) ತಂಡಕ್ಕೆ 138 ರನ್‍ಗಳ ಅಮೋಘ ಜತೆಯಾಟ ನೀಡಿದರು. ಈ ಇಬ್ಬರು ವಿಕೆಟ್ ಬಿದ್ದ ನಂತರ ಭಾರತ ತಂಡದ ರನ್ ವೇಗ ಕಡಿಮೆಯಾಯಿತು. ಇನಿಂಗ್ಸ್‍ನ ಕೊನೆಯ ಓವರ್‍ಗಳಲ್ಲಿ ಮತ್ತೊಮ್ಮೆ ಭಾರತದ ಬ್ಯಾಟ್ಸ್‍ಮನ್‍ಗಳು ತರಗೆಲೆಗಳಂತೆ ಉರುಳಿದ್ದು, 200ರ ಗಡಿ ದಾಟುವ ಭಾರತದ ಅವಕಾಶ ಸಂಪೂರ್ಣವಾಗಿ ಕೈಜಾರಿತು. ಹರಿಣಗಳ ಪರ ಕೈಲ್ ಅಬೊಟ್ 2 ವಿಕೆಟ್ ಪಡೆದರೆ, ಮೋರಿಸ್ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!