ಕ್ರೀಡೆ

ಡಚ್ ಪ್ರಶಸ್ತಿ ಮೇಲೆ ಜಯರಾಂ ಕಣ್ಣು

Lingaraj Badiger

ಆಲ್ಮೀ(ಹಾಲೆಂಡ್): ಕಳೆದ ತಿಂಗಳು ಕೊರಿಯಾ ಓಪನ್ ಸೂಪರ್ ಸಿರೀಸ್ ಪಂದ್ಯಾವಳಿಯಲ್ಲಿ ಫೈನಲ್ ತಲುಪಿ ಗಮನ ಸೆಳೆದ ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ ಅಜಯ್ ಜಯರಾಂ ಮಂಗಳವಾರದಿಂದ ಆರಂಭವಾಗಲಿರುವ 50 ಸಾವಿರ ಬಹುಮಾನ ಮೊತ್ತದ ಡಚ್ ಓಪನ್ ಗ್ರಾಂಡ್ ಪ್ರಿಕ್ಸ್ ಟೂರ್ನಿಯಲ್ಲಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

ಕೊರಿಯಾ ಓಪನ್‌ನಲ್ಲಿ ರನ್ನರ್ ಅಪ್ ಪ್ರಶಸ್ತಿ ಜಯಿಸಿದ ಬೆನ್ನಲ್ಲೇ ವಿಶ್ವದ 25ನೇ ಶ್ರೇಯಾಂಕಕ್ಕೆ ಲಗ್ಗೆ ಹಾಕಿರುವ ಜಯರಾಂ, ಡಚ್ ಓಪನ್‌ನಲ್ಲಿ ಮೂರನೇ ಶ್ರೇಯಾಂಕ ಪಡೆದಿದ್ದು, ಮೊದಲ ಸುತ್ತಿನಲ್ಲೇ ಸ್ಥಳೀಯ ಆಟಗಾರ ಮಾರ್ಕ್ ಕ್ಯಾಲಿಜೊವ್ ವಿರುದ್ಧ ಕಾದಾಡಲಿದ್ದಾರೆ.

ಜಯರಾಂ ಹೊರತುಪಡಿಸಿದರೆ, ಟೂರ್ನಿಯಲ್ಲಿ ಭಾಗವಹಿಸುವವರ ಪೈಕಿ ಆರ್‌ಎಂವಿ ಗುರುಸಾಯಿದತ್, ಬಿ.ಸಾಯಿ ಪ್ರಣೀತ್ ಪ್ರಮುಖರಾಗಿದ್ದಾರೆ. 9ನೇ ಶ್ರೇಯಾಂಕಿತ ಗುರುಸಾಯಿದತ್ ಅವರು ಬೆಲ್ಜಿಯಂನ ಮ್ಯಾಕ್ಸಿಮೀ ಮೊರೀಲ್ಸ್ ವಿರುದ್ಧ ಕಾದಾಡಲಿದ್ದಾರೆ.

SCROLL FOR NEXT