ಜೂರಿಚ್: ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ (ಫಿಫಾ) ಅಧ್ಯಕ್ಷ ಸೆಪ್ ಬ್ಲಾಟರ್ ಅವರನ್ನು 90 ದಿನಗಳ ಕಾಲ ಅಮಾನತುಗೊಳಿಸುವ ಕುರಿತಂತೆ ಶೀಘ್ರವೇ ಫಿಫಾ ನೀತಿ ಸಂಹಿತೆ ಸಮಿತಿಯು ಮೂರು ತಿಂಗಳು (90 ದಿನ) ಅಮಾನತುಗೊಳಿಸಲಿದೆ ಎಂದು ಬಿಬಿಸಿ ಜಾಲತಾಣ ವರದಿ ಮಾಡಿದೆ.
ಫಿಫಾ ಅಧ್ಯಕ್ಷರಾಗಿ, ಸಂಸ್ಥೆಗೆ ಅನುಕೂಲಕರವಲ್ಲದ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು ಹಾಗೂ ಯುಇಎಫ್ಎ ಅಧ್ಯಕ್ಷ ಮೈಕಲ್ ಪ್ಲಾಟಿನಿಯವರಿಗೆ ಅನಧಿಕೃತವಾಗಿ ಭಾರಿ ಮೊತ್ತದ ಹಣವನ್ನು ವರ್ಗಾಯಿಸಿರುವುದು ಬ್ಲಾಟರ್ ಮೇಲಿರುವ ಪ್ರಮುಖ ಆರೋಪಗಳು. ಫಿಫಾ ಹಗರಣಕ್ಕೆ ಸಂಬಂಧಿಸಿದಂತೆ, ಸ್ವಿಜರ್ಲೆಂಡ್‍ನ ಅಟಾರ್ನಿ ಜನರಲ್ ಆದೇಶದಂತೆ, ಬ್ಲಾಟರ್ ವಿರುದ್ದ ಕ್ರಿಮಿನಲ್ ವಿಚಾರಣೆ ಆರಂಭಗೊಂಡಿದೆ.
ಈ ಹಿನ್ನೆಲೆಯಲ್ಲಿ, ಫಿಫಾ ನೀತಿ ಸಂಹಿತೆ ಸಮಿತಿಯು ಈ ವಾರದ ಆರಂಭದಲ್ಲಿ ಸಭೆ ಸೇರಿತ್ತು. ಅದರಲ್ಲಿ, ಬ್ಲಾಟರ್ ಅವರನ್ನು ಅಧ್ಯಕ್ಷ ಸ್ಥಾನದಿಂದ 90 ದಿನಗಳ ಕಾಲ ಅಮಾನತುಗೊಳಿಸಲು ಚಿಂತನೆ ನಡೆಸಲಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಆದೇಶ ಹೊರಬಿದ್ದಿಲ್ಲ. ಅ. 8ರಂದು ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.