ಅಟ್ಲೆಟಿಕೊ ಡಿ ಕೋಲ್ಕತಾ, ಎಫ್ ಸಿ ಗೋವಾ 
ಕ್ರೀಡೆ

ಡ್ರಾ ಸಾಧಿಸಿದ ಸಮಬಲರು

ಆರಂಭಿಕ ಪಂದ್ಯದಲ್ಲಿ ಗೆದ್ದು ಆತ್ಮ ವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದ ಎಫ್ ಸಿ ಗೋವಾ ಮತ್ತು ಅಟ್ಲೆಟಿಕೊ ಡಿ ಕೋಲ್ಕತಾ ತಂಡಗಳು ತೀವ್ರ ಪೈಪೋಟಿಯ ನಡುವೆ ಡ್ರಾ...

ಫಾಟೊರ್ಡಾ: ಆರಂಭಿಕ ಪಂದ್ಯದಲ್ಲಿ ಗೆದ್ದು ಆತ್ಮ ವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದ ಎಫ್ ಸಿ ಗೋವಾ ಮತ್ತು ಅಟ್ಲೆಟಿಕೊ ಡಿ ಕೋಲ್ಕತಾ ತಂಡಗಳು ತೀವ್ರ ಪೈಪೋಟಿಯ ನಡುವೆ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟಿವೆ. 
ಬುಧವಾರ ಇಲ್ಲಿನ ಜವಾಹರ್‍ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅಟ್ಲೆಟಿಕೊ ಡಿ ಕೋಲ್ಕತಾ ತಂಡ ಆತಿಥೇಯ ಎಫ್ ಸಿ ಗೋವಾ ವಿರುದ್ಧ 1-1 ಗೋಲುಗಳ ಡ್ರಾ ಸಾಧಿಸಿವೆ. ಆ ಮೂಲಕ ಉಭಯ ತಂಡಗಳು ತಲಾ 1 ಅಂಕಗಳನ್ನು ಹಂಚಿಕೊಂಡವು. ಆರಂಭಿಕ ಪಂದ್ಯಗಳಲ್ಲಿ ಅರ್ಹ ಗೆಲವು ಸಂಪಾದಿಸಿದ್ದ ಈ ತಂಡಗಳ ಸೆಣಸು ಸಮಬಲರ ಕಾದಾಟವಾಗಿ ಬಿಂಬಿತವಾಗಿತ್ತು. 
ಅಟ್ಲೆಟಿಕೊ ಡಿ ಕೋಲ್ಕತಾ ತಂಡದ ಪರ ಅರಾಟ ಇಜುಮಿ (13ನೇ) ಎಫ್ ಸಿ ಗೋವಾ ಪರ ಕೀನನ್ ಅಲ್ಮೆಡಾ (81ನೇ) ಗೋಲು ದಾಖಲಿಸಿದರು. ಪಂದ್ಯದಲ್ಲಿ ಆಟಗಾರರ ನಡುವಣ ತಿಕ್ಕಾಟ ಹೆಚ್ಚಾಗಿತ್ತು. ಪರಿಣಾಮ ಪಂದ್ಯದಲ್ಲಿ 10 ಹಳದಿ ಕಾರ್ಡ್ ಹಾಗೂ 1 ರೆಡ್ ಕಾರ್ಡ್‍ಗಳು ಹೊರ ಬಂದವು. ಅಟ್ಲೆಟಿಕೊ ಶುಭಾರಂಭ ಪಂದ್ಯದ 13ನೇ ನಿಮಿಷದಲ್ಲಿ ಜಾವಿ ಲಾರಾ ಅವರಿಂದ ಬಂದ ಚೆಂಡನ್ನು ಚುರುಕಿನ ಪ್ರದ್ರಶನದ ಮೂಲಕ ಎದುರಾಳಿ ತಂಡದ ಆಟಗಾರರ ಕಣ್ತಪ್ಪಿಸಿದ ಅರಾಟ ಇಜುಮಿ ತಂಡಕ್ಕೆ ಆರಂಭಿಕ ಗೋಲು ದಾಖಲಿಸಿದರು. 81ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಗೋವಾ ತಂಡ ಪಂದ್ಯದಲ್ಲಿ ಸಮಬಲ ಸಾಧಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT