ಸುದೀಪ್ ಚಟರ್ಜಿ 
ಕ್ರೀಡೆ

ಚಾಂಪಿಯನ್ನರನ್ನು ಕಾಡಿದ ಚಟರ್ಜಿ-ಸಾಹಾ

ಪಂದ್ಯದ ಮೊದಲ ತಾಸಿನಲ್ಲಿ ಕರ್ನಾಟಕದ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ನಲುಗಿದ ಬಂಗಾಳ ತಂಡಕ್ಕೆ ಮಧ್ಯಮ ಕ್ರಮಾಂಕಿತ ಬ್ಯಾಟ್ಸ್‍ಮನ್ ಸುದೀಪ್ ಚಟರ್ಜಿ...

ಬೆಂಗಳೂರು: ಪಂದ್ಯದ ಮೊದಲ ತಾಸಿನಲ್ಲಿ ಕರ್ನಾಟಕದ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ನಲುಗಿದ ಬಂಗಾಳ ತಂಡಕ್ಕೆ ಮಧ್ಯಮ ಕ್ರಮಾಂಕಿತ ಬ್ಯಾಟ್ಸ್‍ಮನ್ ಸುದೀಪ್ ಚಟರ್ಜಿ (145 ರನ್, 247 ಎಸೆತ, 16 ಬೌಂಡರಿ) ಅವರ ಆಕರ್ಷಕ ಶತಕ, ವಿಕೆಟ್‍ಕೀಪರ್ ವೃಧಿಮಾನ್ ಸಾಹ (90) ಅವರ ಮನೋಜ್ಞ 173 ರನ್ ಜತೆಯಾಟ ಶ್ರೀರಕ್ಷೆಯಾಗಿ ಪರಿಣಮಿಸಿತು. ಆ ಮೂಲಕ ಪಂದ್ಯದ ಮೊದಲ ದಿನದಾಟದಲ್ಲಿ ಆತಿಥೇಯರನ್ನು ಕಾಡಿದ ಅದು ಉತ್ತಮ ಮೊತ್ತ ಪೇರಿಸುವಲ್ಲಿ ಸಫಲವಾಯಿತು. 
ಗುರುವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ಆರಂಭವಾದ ಪಂದ್ಯದಲ್ಲಿ ಪ್ರವಾಸಿ ಬಂಗಾಳ ತಂಡ ಮೊದಲ ದಿನದಾಟದ ಮುಕ್ತಾಯಕ್ಕೆ 88 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿದೆ. ಬಂಗಾಳ ತಂಡದ ಪರ ಕೊನೆಯ ವಿಕೆಟ್‍ಗೆ ಅಶೋಕ್ ದಿಂಡಾ (4) ಹಾಗೂ ಸೌರವ್ ಸರ್ಕಾರ್ ಕ್ರೀಸ್ ನಲ್ಲಿದ್ದು, ಎರಡನೇ ದಿನದ ಆರಂಭದಲ್ಲೇ ಬಂಗಾಳ ಇನಿಂಗ್ಸ್‍ಗೆ ತೆರೆ ಎಳೆಯಲು ವಿನಯ್ ಪಡೆ ಗುರಿಯಾಗಿದೆ. 
ಕರ್ನಾಟಕ ಅಬ್ಬರದ ಆರಂಭ: ಬೆಳಿಗ್ಗೆ ಟಾಸ್ ಗೆದ್ದ ಆತಿಥೇಯ ಕರ್ನಾಟಕ ಪಿಚ್‍ನ ಲಾಭ ಪಡೆಯುವ ನಿಟ್ಟಿನಲ್ಲಿ ಮೊದಲು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ದಿನದಾಟದ ಮೊದಲ ಹಂತದ ಅಬ್ಬರ ಕ್ರಮೇಣ ಕ್ಷೀಣಿಸಲಾಗಿ ಪ್ರವಾಸಿಗರು ಪ್ರಾಬಲ್ಯ ಮೆರೆಯುವಂತಾಯಿತು. ಎಂದಿನಂತೆ ಪಂದ್ಯದ ಆರಂಭದಲ್ಲಿ ವೇಗಿಗಳಿಗೆ ಉತ್ತಮ ಪುಟಿತ ನೀಡುವ ಚಿನ್ನಸ್ವಾಮಿ ಅಂಗಣದಲ್ಲಿ ಕರ್ನಾಟಕ ಬೌಲರ್‍ಗಳು ಆಕ್ರಮಣಕಾರಿ ಪ್ರದರ್ಶನ ನೀಡಿದರು. ಪಂದ್ಯ ಆರಂಭವಾದ ಒಂದು ಗಂಟೆ ಅವಧಿಯಲ್ಲಿ ಬಂಗಾಳದ ಮೊದಲ ನಾಲ್ಕು ವಿಕೆಟ್ ಪಡೆದ ಆತಿಥೇಯರು, ಪ್ರವಾಸಿಗರನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವ ಭರವಸೆ ಮೂಡಿಸಿದರು. 
ಈ ಪಂದ್ಯದ ಮೂಲಕ ಬಂಗಾಳ ತಂಡಕ್ಕೆ ಪದಾರ್ಪಣೆ ಮಾಡಿದ ನಾವೆದ್ ಅಹ್ಮದ್ (3), ಅಭಿಶೇಕ್ ದಾಸ್ (6), ಶ್ರೀವಾಸ್ತವ್ ಗೋಸ್ವಾಮಿ (2) ಹಾಗೂ ನಾಯಕ ಮನೋಜ್ ತಿವಾರಿ (7) ಕರ್ನಾಟಕದ ಬೌಲಿಂಗ್ ದಾಳಿಯನ್ನು ಎದುರಿಸಲಾಗದೇ ತತ್ತರಿಸಿದರು. ಪರಿಣಾಮ ಬಂಗಾಳ ತಂಡ 13.3 ಓವರ್‍ಗಳಲ್ಲಿ 41 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ತಿರುಗೇಟು ನೀಡಿದ ಜತೆಯಾಟ: ಪಂದ್ಯದ ಆರಂಭಿಕ ಹಂತದಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಂಗಾಳ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳಾದ ಸುದೀಪ್ ಚಟರ್ಜಿ ಹಾಗೂ ವೃದ್ಧಿಮಾನ್ ಸಾಹ (90 ರನ್, 132 ಎಸೆತ, 10 ಬೌಂಡರಿ, 1 ಸಿಕ್ಸರ್) ಅವರ ಶತಕದ ಜತೆಯಾಟ ತಂಡಕ್ಕೆ ಸಂಜೀವಿನಿಯಾಗಿ ಪರಿಣಮಿಸಿತು. ಈ ಜೋಡಿ ಸುಮಾರು 48 ಓವರ್‍ಗಳ ಕಾಲ ಕ್ರೀಸ್‍ನಲ್ಲಿ ನಿಂತು ಕರ್ನಾಟಕ ಬೌಲರ್ ಗಳನ್ನು ಕಾಡಿದರು. ಈ ಇಬ್ಬರ ದಿಟ್ಟ ಬ್ಯಾಟಿಂಗ್ ಆತಿಥೇಯ ಬೌಲಿಂಗ್ ಪಡೆಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿತು. ಆ ಮೂಲಕ ತಂಡ ಪಂದ್ಯದ ಎರಡನೇ ಅವಧಿ ವೇಳೆಗೆ 214 ರನ್ ಪೇರಿಸಿತು. 
ಅಂತಿಮವಾಗಿ ಸಾಹ, ಶ್ರೇಯಸ್‍ಗೆ ವಿಕೆಟ್ ಒಪ್ಪಿಸುತ್ತಿದ್ದಂತೆ ಎರಡನೇ ಅವಧಿ ಮುಕ್ತಾಯಗೊಂಡಿತು. ಉಭಯರ ಪಾಲಾದ ಅಂತಿಮ ಅವಧಿ: ಪಂದ್ಯದ ಅಂತಿಮ ಅವಧಿಯನ್ನು ಆರಂಭಿಸಿದ ಸುದೀಪ್, ಹಿರಿಯ ಆಲ್ರೌಂಡರ್ ಲಕ್ಷ್ಮಿ ರತನ್ ಶುಕ್ಲಾ (24) ತಂಡಕ್ಕೆ ಅರ್ಧಶತಕದ ಜತೆಯಾಟ ನೀಡಿದ್ದು, ತಂಡದ ಸ್ಥಿತಿಯನ್ನು ಇನ್ನಷ್ಟು ಸುಸ್ಥಿರಗೊಳಿಸಿತು. ಈ ಜೋಡಿ 6ನೇ ವಿಕೆಟ್‍ಗೆ 60 ರನ್ ದಾಖಲಿಸುವ ಮೂಲಕ ಮೊದಲ ದಿನದಾಟದಲ್ಲಿ ತಂಡ ಮತ್ತೆ ಮೇಲುಗೈ ಸಾಧಿಸಲು ನೆರವಾಯಿತು. ಈ ಅವಧಿಯಲ್ಲಿ ಬಂಗಾಳ ತಂಡ 98 ರನ್ ದಾಖಲಿಸಿತಾದರೂ 4 ವಿಕೆಟ್ ಕಳೆದುಕೊಂಡಿತು. ಹಾಗಾಗಿ ಅಂತಿಮ ಅವಧಿ ಈರ್ವರ ಪಾಲಾಯಿತು.
ಸ್ಕೋರ್ ವಿವರ: 
ಬಂಗಾಳ ಮೊದಲ ಇನಿಂಗ್ಸ್ 88 ಓವರ್‍ಗಳಲ್ಲಿ 9 ವಿಕೆಟ್‍ಗೆ 312 
ನಾವೆದ್ ಅಹ್ಮದ್ ಸಿ ಉತ್ತಪ್ಪ ಬಿ ವಿನಯ್ 03 
ಅಭಿಶೇಕ್ ದಾಸ್ ಸಿ ಗೌತಮ್ ಬಿ ವಿನಯ್ 06 
ಶ್ರೀವಾಸ್ತವ್ ಗೋಸ್ವಾಮಿ ರನೌಟ್ (ವಿನಯ್) 02 
ಸುದೀಪ್ ಚಟರ್ಜಿ ಸಿ ಶಿಶಿರ್ ಬಿ ಶರತ್ 145 
ಮನೋಜ್ ತಿವಾರಿ ಸಿ ಸಮರ್ಥ್ ಬಿ ಶರತ್ 07 
ವೃದ್ಧಿಮಾನ್ ಸಾಹ ಸಿ ಉತ್ತಪ್ಪ ಬಿ ಶ್ರೇಯಸ್ 90 
ಲಕ್ಷ್ಮಿ ರತನ್ ಶುಕ್ಲಾ ಸಿ ಪಾಂಡೆ ಬಿ ಮಿಥುನ್ 24 
ಪ್ರಗ್ಯಾನ್ ಓಜಾ ಬಿ ವಿನಯ್ 05 
ವೀರ್‍ಪ್ರತಾಪ್ ಸಿಂಗ್ ಸಿ ವಿನಯ್ ಬಿ ಶರತ್ 14 
ಅಶೋಕ್ ದಿಂಡಾ ಅಜೇಯ 04 
ಇತರೆ: (ಬೌ 1, ಲೆಗ್ ಬೈ5, ವೈಡ್ 6) 12

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ