ಮ್ಯಾಂಚೆಸ್ಟರ್: ವೃತ್ತಿಪರ ಬಾಕ್ಸಿಂಗ್‍ಗೆ ಇದೇ ಮೊದಲ ಬಾರಿಗೆ ಅಡಿಯಿಟ್ಟಿರುವ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ವಿರುದ್ಧದ ಕಾದಾಟಕ್ಕೆ ಸಜ್ಜಾಗಿರುವ ಬ್ರಿಟನ್ ಬಾಕ್ಸರ್ ಸೋನಿ ವೈಟಿಂಗ್ ಭಾರತೀಯ ಬಾಕ್ಸರ್ ವಿರುದ್ಧ ಅಬ್ಬರಿಸಿದ್ದಾರೆ.
ವಿಜೇಂದರ್ ವೃತ್ತಿಪರ ಬಾಕ್ಸಿಂಗ್‍ನಲ್ಲಿ ಇನ್ನೂ ಬಾಲಕನಾಗಿದ್ದು, ಅ. 10ರಂದು ನಡೆಯಲಿರುವ ಮುಖಾಮುಖಿಯಲ್ಲಿ ಆತನಿಗೆ ನರಕ ತೋರಿಸುತ್ತೇನೆಂದು ಬ್ರಿಟನ್‍ನ ಅನುಭವಿ ಬಾಕ್ಸರ್ ಸೊನ್ನಿ ವೈಟಿಂಗ್ ಬೊಬ್ಬರಿದಿದ್ದಾರೆ.
ಇತ್ತೀಚೆಗಷ್ಟೇ, ಹವ್ಯಾಸಿ ಬಾಕ್ಸಿಂಗ್ ವೃತ್ತಿಜೀವನ ತೊರೆದು ವೃತ್ತಿಪರ ಬಾಕ್ಸಿಂಗ್‍ಗೆ ಅಡಿಯಿಟ್ಟಿರುವ ವಿಜೇಂದರ್, ಬ್ರಿಟಿಷ್ ಬಾಕ್ಸರ್‍ನ ಈ ಸವಾಲಿಗೆ ಪ್ರತಿಕ್ರಿಯಿಸಿ, ಎಂಥದ್ದೇ ಸವಾಲಿಗೆ ಸಿದ್ಧ ಎಂದಿದ್ದಾರೆ.