ಮ್ಯಾಂಚೆಸ್ಟರ್: ಅಮೆಚುರ್ ಬಾಕ್ಸಿಂಗ್‍ಗೆ ಗುಡ್ ಬೈ ಹೇಳಿ ವೃತ್ತಿಪರ ಬಾಕ್ಸಿಂಗ್ ಶನಿವಾರ ಅಧಿಕೃತವಾಗಿ ಕಾಲಿಡುತ್ತಿರುವ ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್, ವೃತ್ತಿ ಜೀವನದ ಮೊಟ್ಟಮೊದಲ ಸವಾಲು ಎದುರಿಸಲು ಸಜ್ಜಾಗಿದ್ದು,ಭಾರತೀಯ ಬಾಕ್ಸರ್ ಪಾಲಿಗಿದು ಐತಿಹಾಸಿಕ ಕ್ಷಣವೆನಿಸಿದೆ.
ಶನಿವಾರ ನಡೆಯಲಿರುವ ಮೊದಲ ಫೈಟ್ ನಲ್ಲಿ ವಿಜೇಂದರ್ ಸಿಂಗ್, ಬ್ರಿಟನ್ ನ ಸೋನಿ ವೈಟಿಂಗ್ ವಿರುದ್ಧ ಸೆಣಸುತ್ತಿರುವುದು ಭಾರತೀಯ ಬಾಕ್ಸಿಂಗ್ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲಿಸಿದೆ. 29 ವರ್ಷದ ವಿಜೇಂದರ್ 2008ರ ಬೀಜಿಂಗ್ ಒಲಿಂಪಿಕ್ಸ್‍ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಡುವ ಮೂಲಕ ಐತಿಹಾಸಿಕ ಸಾಧನೆ ಮೆರೆದಿದ್ದರು. ಈ ಬಾಕ್ಸಿಂಗ್ ಹಣಾಹಣಿ ತಲಾ ಮೂರು ನಿಮಿಷಗಳ ನಾಲ್ಕು ಸುತ್ತುಗಳನ್ನು ಒಳಗೊಂಡಿದೆ.
ನೇರ ಪ್ರಸಾರ: ಸೋನಿ ಸಿಕ್ಸ್ ಸಮಯ: ರಾತ್ರಿ 10.20 (ಭಾರತೀಯ ಕಾಲಮಾನ)ವೃತ್ತಿಪರ ಬಾಕ್ಸಿಂಗ್‍ನಲ್ಲಿ ವೈಟಿಂಗ್ 2-1 ಪ್ರಾಬಲ್ಯ
ನಾನೂ ಸಂಪೂರ್ಣವಾಗಿ ಸಿದ್ಧನಾಗಿದ್ದೇನೆ. ಹೊಸ ಬಾಕ್ಸಿಂಗ್ ರಿಂಗ್‍ನಲ್ಲಿ ಉತ್ತಮ ಆರಂಭಕ್ಕಾಗಿ ಕಾಯುತ್ತಿದ್ದೇನೆ. ಪ್ರತಿಸ್ಪರ್ಧಿ ಸೋನಿ ವೈಟಿಂಗ್ ಏನೆಲ್ಲ ಬಡಬಡಿಸಿದ್ದರೂ ಅದರ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಂಡಿಲ್ಲ. ಅದೆಲ್ಲದಕ್ಕೂ ರಿಂಗ್‍ನಲ್ಲೇ ಉತ್ತರಿಸುತ್ತೇನೆ
●ವಿಜೇಂದರ್ ಸಿಂಗ್ ಭಾರತದ ಬಾಕ್ಸರ್