ಸಾನಿಯಾ-ಹಿಂಗಿಸ್ಗೆ ಡಬಲ್ಸ್ ಪ್ರಶಸ್ತಿ
ವಿಶ್ವದ ಅಗ್ರಶ್ರೇಯಾಂಕಿತ ಮಹಿಳಾ ಡಬಲ್ಸ್ ಟೆನಿಸ್ ಜೋಡಿಯಾದ ಭಾರತದ ಸಾನಿಯಾಮಿರ್ಜಾ ಹಾಗೂ ಸ್ವಿಜರ್ಲೆಂಡ್ನ ಮಾರ್ಟಿನಾ ಹಿಂಗಿಸ್...
ಬೀಜಿಂಗ್: ವಿಶ್ವದ ಅಗ್ರಶ್ರೇಯಾಂಕಿತ ಮಹಿಳಾ ಡಬಲ್ಸ್ ಟೆನಿಸ್ ಜೋಡಿಯಾದ ಭಾರತದ ಸಾನಿಯಾಮಿರ್ಜಾ ಹಾಗೂ ಸ್ವಿಜರ್ಲೆಂಡ್ನ ಮಾರ್ಟಿನಾ ಹಿಂಗಿಸ್ ಅವರ ಜೈತ್ರಯಾತ್ರೆ ಚೀನಾದಲ್ಲೂ ಮುಂದುವರಿದಿದೆ. ಶನಿವಾರ ನಡೆದ ಚೀನಾ ಓಪನ್ ಮಹಿಳೆಯರ ಡಬಲ್ಸ್ ವಿಭಾಗದ ಫೈ ನಲ್ನಲ್ಲಿ ಸಾನಿಯಾ-ಹಿಂಗಿಸ್ ಜೋಡಿ, ಚೈನೀಸ್ ತೈಪೇನ
ಜೋಡಿಯಾದ ಹವೊ- ಚಿಂಗ್ ಚಾನ್ ಹಾಗೂ ಯಂಗ್-ಜಾನ್ ಚಾನ್ ವಿರುದ್ಧ 6-7 (9-11),6-1, 10-8 ಸೆಟ್ಗಳ ಅಂತರದಲ್ಲಿ ಜಯ ಸಾಧಿಸುವ ಮೂಲಕ ಪ್ರಶಸ್ತಿಗೆ ಭಾಜನವಾಯಿತು. ಪಂದ್ಯದ ಆರಂಭಿಕ ಸೆಟ್ ಎರಡೂ ಜೋಡಿಗಳ ತೀವ್ರ ಹೋರಾಟದಿಂದ ಟೈ ಬ್ರೇಕರ್ ಗೆ ಬಂದು ನಿಂತಿತು. ನಂತರ ಮುಂದುವರಿದ ಆಟದಲ್ಲಿ ತೈಪೇ ಜೋಡಿಯೇ ಗೆಲವು ದಾಖಲಿಸಿತು.ಆದರೆ, ನಂತರ ಎರಡೂ ಸೆಟ್ಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಸಾನಿಯಾ-ಹಿಂಗಿಸ್, ಎದುರಾಳಿಗಳನ್ನು ಮಣಿಸುವಲ್ಲಿ ಯಶಸ್ವಿಯಾದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.