ಕ್ರೀಡೆ

ಡೆನ್ಮಾರ್ಕ್ ಓಪನ್ ಇಂದಿನಿಂದ: ಸೈನಾ ಪ್ರಮುಖ ಆಕರ್ಷಣೆ

Shilpa D

ಒಡೆನ್ಸಿ (ಡೆನ್ಮಾರ್ಕ್): ಕೊರಿಯಾ ಓಪನ್ ಪಂದ್ಯಾವಳಿಯಿಂದ ವಿಶ್ರಾಂತಿ ಪಡೆದ ವಿಶ್ವದ ನಂ.1 ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮಂಗಳವಾರದಿಂದ ಶುರುವಾಗುತ್ತಿರುವ 650,000 ಡಾಲರ್ ಬಹುಮಾನ ಮೊತ್ತದ ಡೆನ್ಮಾರ್ಕ್ ಓಪನ್ ಪಂದ್ಯಾವಳಿಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ.

2012ರಲ್ಲಿ ಡೆನ್ಮಾರ್ಕ್ ಓಪನ್ ಗೆದ್ದಿರುವ ಸೈನಾ, ಈ ಋತುವಿನ ಕೆಲವೊಂದು ಪಂದ್ಯಾವಳಿಗಳಲ್ಲಿ ಅದರಲ್ಲೂ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಐತಿಹಾಸಿಕ ರನ್ನರ್‍ಅಪ್ ಆದ ಬಳಿಕ ಪ್ರಚಂಡ ಫ್ರೇಮ್ ನಲ್ಲಿದ್ದು ಈ ಪಂದ್ಯಾವಳಿಯಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿದ್ದಾರೆ. ಬುಧವಾರದಿಂದ ಪಂದ್ಯಾವಳಿಯ ಪ್ರಮುಖ ಘಟ್ಟ ಆರಂಭವಾಗಲಿದ್ದು, ಮೊದಲ ಸುತ್ತಿನಲ್ಲಿ ಥಾಯ್ಲೆಂಡ್‍ನ ಬುಸಾನನ್ ಒಂಗ್‍ಬುಮಾರಂಗನ್ ವಿರುದ್ಧ ಕಾದಾಡಲಿದ್ದಾರೆ.

ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಯುವ ಆಟಗಾರ ಅಜಯ್ ಜಯರಾಂ ಮೇಲೂ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಕಳೆದ ತಿಂಗಳು ನಡೆದ ಕೊರಿಯಾ ಸೂಪರ್ ಸಿರೀಸ್ ಫೈನಲ್ ತಲುಪಿ ರನ್ನರ್‍ಅಪ್ ಎನಿಸಿಕೊಂಡ ಜಯರಾಂ, ಭಾನುವಾರವಷ್ಟೇ ಮುಕ್ತಾಯಕಂಡ ಡಚ್ ಓಪನ್ ಗ್ರಾಂಡ್ ಪ್ರಿಕ್ಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದರು.

ಇನ್ನುಳಿದಂತೆ ಪುರುಷರ ವಿಭಾಗದಲ್ಲಿ ವಿಶ್ವದ ಐದನೇ ಶ್ರೇಯಾಂಕಿತ ಕಿಡಾಂಬಿ ಶ್ರೀಕಾಂತ್, ಕಾಮನ್ವೆಲ್ತ್ ಗೇಮ್ಸ್  ಚಾಂಪಿಯನ್ ಪರುಪಳ್ಳಿ ಕಶ್ಯಪ್ ಹಾಗೂ ವಿಶ್ವದ ಹದಿನಾರನೇ ಶ್ರೇಯಾಂಕಿತ ಆಟಗಾರ ಎಚ್.ಎಸ್. ಪ್ರಣೋಯ್ ಭಾರತದ ಸವಾಲಿನಲ್ಲಿ ಪ್ರಮುಖರೆನಿಸಿದ್ದಾರೆ. ಮಹಿಳೆಯರ ಡಬಲ್ಸ್‍ನಲ್ಲಿ 2014ರ ಕಾಮನ್ವೆಲ್ತ್ ಗೇಮ್ಸ್  ಬೆಳ್ಳಿ ವಿಜೇತ ಜೋಡಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಸಕ್ರಿಯ ಬ್ಯಾಡ್ಮಿಂಟನ್‍ಗೆ ಮರಳಿದ್ದಾರೆ. ಜ್ವಾಲಾ ಅನಾರೋಗ್ಯದ ನಿಮಿತ್ತ ಅಶ್ವಿನಿ ಪೊನ್ನಪ್ಪ ಕೂಡ ಕೊರಿಯಾ ಓಪನ್‍ನಲ್ಲಿ ಆಡಿರಲಾಗಿರಲಿಲ್ಲ.

SCROLL FOR NEXT