ಹುಟ್ಟು ಹಬ್ಬದ ಸಂಭ್ರಮದಲ್ಲಿ ಆಟಗಾರ ಪೀಲೆ 
ಕ್ರೀಡೆ

ಅವಧಿಗೂ ಮುಂಚೆಯೇ ಕೋಲ್ಕತಾದಲ್ಲಿ ಫುಟ್ಬಾಲ್ ದಂತಕತೆ ಪೀಲೆ ಬರ್ತಡೇ ಸಂಭ್ರಮ

ವಿಶ್ವ ಫುಟ್ಬಾಲ್‍ನ ಜೀವಂತ ದಂತಕತೆ ಬ್ರೆಜಿಲ್‍ನ ಪೀಲೆಗೆ ಈ ಬಾರಿ ಅವಧಿಗೂ ಮುನ್ನವೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂಭ್ರಮ..

ವಿಶ್ವ ಫುಟ್ಬಾಲ್‍ನ ಜೀವಂತ ದಂತಕತೆ ಬ್ರೆಜಿಲ್‍ನ ಪೀಲೆಗೆ ಈ ಬಾರಿ ಅವಧಿಗೂ ಮುನ್ನವೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂಭ್ರಮ. ಈ ಸಂತಸದ ಸಮಯಕ್ಕೆ ಕೋಲ್ಕತಾ ನಗರಿ ಸಾಕ್ಷಿಯಾಯಿತು. 38 ವರ್ಷಗಳ ಬಳಿಕ ಐತಿಹಾಸಿಕ ಭಾರತ ಪ್ರವಾಸ ಕೈಗೊಂಡಿರುವ ಪೀಲೆ ಇದೇ ತಿಂಗಳು 23ಕ್ಕೆ 75ನೇ ವಸಂತಕ್ಕೆ ಕಾಲಿರಿಸಲಿದ್ದರೂ, ಸದ್ಯದಲ್ಲೇ ಸ್ವದೇಶಕ್ಕೆ ತೆರಳುವ ಹಿನ್ನೆಲೆಯಲ್ಲಿ ಪೀಲೆಗೆ ಭಾರತದಲ್ಲೇ ಮಂಗಳವಾರ ಈ ಹುಟ್ಟುಹಬ್ಬದ ಸಂಭ್ರವನ್ನು ಆಚರಿಸಿಕೊಳ್ಳುವಂತಾಯಿತು.

ಪೀಲೆಯ ಜೀವನಚರಿತ್ರೆ ``ಪೀಲೆ: ಬರ್ತ್ ಆಫ್  ಲೆಜೆಂಡ್''ಗೆ ಸಂಗೀತ ಸಂಯೋಜಿಸಿರುವ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ `ಹ್ಯಾಪಿ ಬರ್ತ್‍ಡೇ' ಹಾಡನ್ನು ಹಾಡಿದರೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅದಕ್ಕೆ ಕೈಚಪ್ಪಾಳೆಯ ಸಾಥ್ ನೀಡಿದರು. 1970ರ ವಿಶ್ವಕಪ್ ಗೆದ್ದ ಸವಿನೆನಪಿನಲ್ಲಿ ನಿರ್ಮಿತಿಯಾಗಿದ್ದ `ಜೂಲ್ಸ್ ರಿಮೆಟ್ ಟ್ರೋಫಿ' ಮಾದರಿಯ ಕೇಕ್ ಕಟ್ ಮಾಡಿದ ಪೀಲೆ, ಅನಿರೀಕ್ಷಿತವಾಗಿ ಏರ್ಪಾಟಾಗಿದ್ದ ಈ ಹುಟ್ಟುಹಬ್ಬ ಕಾರ್ಯಕ್ರಮದಿಂದ ದಿಗ್ಭ್ರಮೆಗೊಂಡು ಭಾವೋದ್ವೇಗಕ್ಕೆ
ಒಳಗಾಗಿ, ``ಇಂಥದ್ದೊಂದು ವಿಶೇಷ ದಿನ ಕರುಣಿಸಿದ ದೇವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ'' ಎಂದು ಉದ್ಗರಿಸಿದರು.  ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಸೇರಿದ್ದ ಪ್ರತಿಯೋರ್ವರಿಗೂ ಕೃತಜ್ಞತೆ ಸಲ್ಲಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

SCROLL FOR NEXT