ಅಬುಧಾಬಿ :ತಮ್ಮ ಅಮೋಘ ಶತಕದ ನೆರವಿನಿಂದ ಶೋಯೆಬ್ ಮಲಿಕ್, ಇಂಗ್ಲೆಂಡ್ ವಿರುದ್ಧ ಮಂಗಳವಾರ ಆರಂಭಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ. ದಿನಾಂತ್ಯದ ವೇಳೆಗೆ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 286 ರನ್ ಗಳ ಉತ್ತಮ ಮೊತ್ತ ದಾಖಲಿಸಿದೆ.
ತಟಸ್ಥ ತಾಣವಾದ ಝಯಾದ್ ಕ್ರೀಡಾಂಗಣದಲ್ಲಿ ಆರಂಭಗೊಂಡ ಪಂದ್ಯದಲ್ಲಿ, ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನ, ಕೇವಲ 5 ರನ್ ಮೊತ್ತಕ್ಕೆ ಆರಂಭಿಕ ಶಾನ್ ಮಸೂದ್ ಅವರನ್ನು ಕಳೆದುಕೊಂಡಿತು. ಆದರೆ ಮತ್ತೊಬ್ಬ ಆರಂಭಿಕ ಮಹ್ಮದ್ ಹಫೀಜ್ (98) ಹಾಗೂ 3ನ್ ಕ್ರಮಾಂಕದ ಶೋಯೆಬ್ ಮಲಿಕ್ 2ನೇ ವಿಕೆಟ್‍ಗೆ 168 ರನ್ ಮೊತ್ತ ಪೇರಿಸಿದರು. 55ನೇ ಓವರ್‍ನಲ್ಲಿ ಹಫೀಜ್ ವಿಕೆಟ್ ಉರುಳಿಸಿದರೂ ಯೂನಿಸ್ ಖಾನ್ (30), ಮಿಸ್ಬಾ ಉಲ್ ಹಕ್ (3) ಅವರ ಜೊತೆಗೂಡಿ ತಂಡವನ್ನು ಸುಸ್ಥಿತಿಗೆ ತರುವಲ್ಲಿ ಶ್ರಮವಹಿಸಿದ ಮಲಿಕ್, ದಿನಾಂತ್ಯದ ಹೊತ್ತಿಗೆ 124 ರನ್ ಗಳಿಸಿ ಅಜೇಯರಾಗುಳಿ ದರು. ಅಸಾದ್ (ಅಜೇಯ 11) ಜತೆ ಮಲಿಕ್ ಗುರುವಾರ ಇನಿಂಗ್ಸ್ ಮುಂದುವರಿಸಲಿದ್ದಾರೆ.
ಯೂನಿಸ್ ದಾಖಲೆ: ಪಾಕಿಸ್ತಾನ ಟೆಸ್ಟ್ ಇತಿಹಾಸ ದಲ್ಲಿ ಅತಿ ಹೆಚ್ಚು ರನ್ ಪೇರಿಸಿದ ಸಾಧನೆಗೈದ ಯೂನಿಸ್ ಖಾನ್, 1996-73ರ ಅವಧಿಯಲ್ಲಿ ಮಿಯಾಂದಾದ್ 124 ಪಂದ್ಯಗಳಿಂದ 8832 ರನ್ ಕಲೆ ಹಾಕಿದ್ದ ದಾಖಲೆ ಹಿಂದಿಕ್ಕಿದ್ದಾರೆ. ಇದೀಗ ಯೂನಿಸ್, 102 ಪಂದ್ಯಗಳಿಂದ 8852 ರನ್ ಪೇರಿಸಿದ್ದಾರೆ.