ಭಾರತ 
ಕ್ರೀಡೆ

ಹಾಕಿ: ಭಾರತ ಕಿರಿಯರಿಗೆ ಎರಡನೇ ಜಯ

ಹಾಲಿ ಚಾಂಪಿಯನ್ ಭಾರತ 21 ವರ್ಷದೊಳಗಿನವರ ಹಾಕಿ ತಂಡ ಸುಲ್ತಾನ್ ಜೊಹೊರ್ ಕಪ್ ಹಾಕಿ ಟೂರ್ನಿಯಲ್ಲಿ ಎರಡನೇ ಜಯ ಸಂಪಾದಿಸಿದೆ...

ಜೊಹೊರ್ ಬಹುರ್: ಹಾಲಿ ಚಾಂಪಿಯನ್ ಭಾರತ 21 ವರ್ಷದೊಳಗಿನವರ ಹಾಕಿ ತಂಡ ಸುಲ್ತಾನ್ ಜೊಹೊರ್ ಕಪ್ ಹಾಕಿ ಟೂರ್ನಿಯಲ್ಲಿ ಎರಡನೇ ಜಯ ಸಂಪಾದಿಸಿದೆ.

ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ತನ್ನ ಪ್ರತಿಸ್ಪರ್ಧಿ ಅರ್ಜೆಂಟೀನಾ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿದೆ. ಈ ಗೆಲವಿನ ಮೂಲಕ ಭಾರತ ಸೆಮಿಫೈನಲ್‍ನತ್ತ ತನ್ನ ಹೆಜ್ಜೆ ಇಟ್ಟಿದೆ. ಪಂದ್ಯದ ಮೊದಲ ನಿಮಿಷದಿಂದಲೇ ಭಾರತ ಆಕ್ರಮಣಕಾರಿ ದಾಳಿ ನಡೆಸಿದ ಪರಿಣಾಮ ಅರ್ಜೆಂಟೀನಾ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬ ಗೊಂದಲಕ್ಕೆ ಒಳಗಾಯಿತು.

ಭಾರತ ತಂಡದ ಪರ ಅರ್ಮಾನ್ ಖುರೇಶಿ(3ನೇ), ಗುರ್ಜಂತ್ ಸಿಂಗ್(11ನೇ), ನೀಲಕಂಠ ಶರ್ಮಾ(50ನೇ) ನಿಮಿಷದಲ್ಲಿ ಗೋಲು ದಾಖಲಿಸಿದರು.

ಇನ್ನು ಅರ್ಜೆಂಟೀನಾ ಪರ ಮೈಕೊ ಕ್ಯಾಸೆಲ್ಲಾ (39ನೇ) ಹಾಗೂ ನಿಕೋಲಸ್ ಕೀನನ್(54ನೇ) ನಿಮಿಷದಲ್ಲಿ ಗೋಲು ದಾಖಲಿಸಿದರು. ಪಂದ್ಯದ ಆರಂಭದಲ್ಲೇ ಭಾರತ ಸಂಘಟಿತ ದಾಳಿ ನಡೆಸಿದ ಪರಿಣಾಮ ಅರ್ಮಾನ್ 3ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ನಂತರ 11ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಪರಿಣಾಮ ಪಂದ್ಯದ ಮೊದಲಾರ್ಧದಲ್ಲಿ ಭಾರತ 2-0 ಮುನ್ನಡೆಯಲ್ಲಿತ್ತು. ದ್ವಿತಿಯಾರ್ಧದಲ್ಲಿ ಅರ್ಜೆಂಟೀನಾ ಉತ್ತಮ ಪ್ರದರ್ಶನ ನೀಡಿತು ಈ ಅವಧಿಯಲ್ಲಿ 2 ಗೋಲು ದಾಖಲಿಸಿತಾದರೂ, ಭಾರತದ ಪರ ನೀಲಕಂಠ ಶರ್ಮಾ ಗೋಲು ದಾಖಲಿಸಿ ತಂಡವನ್ನು ಗೆಲವಿನತ್ತ ಕೊಂಡೊಯ್ದರು.

ಭಾರತ ತಂಡ ಗುರುವಾರ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಆತಿಥೇಯ ಮಲೇಷ್ಯಾ ತಂಡವನ್ನು ಎದುರಿಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT